ವಾರ್ಡನ್ ಕತ್ತು ಸೀಳಲು ಯತ್ನಿಸಿದ ಐಸಿಸ್ ಉಗ್ರ!
Team Udayavani, Dec 4, 2017, 11:06 AM IST
ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಅಲಿಪೊರೆ ಕೇಂದ್ರೀಯ ಜೈಲಿನಲ್ಲಿರುವ ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರ ಅಲ್ಲಿನ ವಾರ್ಡನ್‌ನ ಕತ್ತು ಸೀಳಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ತೀವ್ರ ಗಾಯಗೊಂಡ ವಾರ್ಡನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವಾರ್ಡನ್ ಕತ್ತು ಸೀಳುವ ಕೃತ್ಯವೂ ಜೆಹಾದ್ ಎಂದು ಈತ ಹೇಳಿಕೊಂಡಿದ್ದಾನೆ. ಅಲ್ಲದೆ ಕತ್ತು ಸೀಳುವಾಗ ಅರೇಬಿಕ್ ಭಾಷೆಯಲ್ಲಿ ಘೋಷಣೆ ಕೂಗುತ್ತಿದ್ದ ಎನ್ನಲಾಗಿದೆ.
ಮೊಹಮ್ಮದ್ ಮೊಸಿಯುದ್ದೀನ್ ಅಲಿಯಾಸ್ ಮೂಸಾ ಎಂಬ ಈ ಉಗ್ರನನ್ನು 2016ರಲ್ಲಿ ಪಶ್ಚಿಮ ಬಂಗಾಲದಲ್ಲಿ ಬಂಧಿಸಿ, ಜೈಲಿಗಟ್ಟಲಾಗಿತ್ತು. ಈತನ ಮೇಲೆ ನಿಗಾ ಇಡಲು ನೇಮಿಸಿದ್ದ ಗೋವಿಂದೋ ಚಂದ್ರ ಡೇ ರವಿವಾರ ಸಂಜೆ ನಿತ್ಯದ ತಪಾಸಣೆಗಾಗಿ ಕೋಣೆಯ ಬಾಗಿಲು ತೆರೆದಿದ್ದರು. ಬಾಗಿಲು ತೆರೆಯುತ್ತಿದ್ದಂತೆಯೇ ಗೋವಿಂದೋ ತಲೆಗೆ ಕಲ್ಲಿನಿಂದ ಹೊಡೆದ ಉಗ್ರ, ಚಾಕು ತೆಗೆದುಕೊಂಡು ಕತ್ತು ಸೀಳಲು ಯತ್ನಿಸಿದ್ದಾನೆ. ಪಕ್ಕದ ಸೆಲ್‌ನಲ್ಲಿದ್ದ ಇತರ ಕೈದಿಗಳು ಬಂದು ವಾರ್ಡನ್‌ನನ್ನು ರಕ್ಷಿಸಿದ್ದಾರೆ. ಲೋಹದ ತುಂಡನ್ನು ಬಳಸಿ ಮೂಸಾ ಕೋಣೆಯಲ್ಲೇ ಚಾಕು ತಯಾರಿಸಿಕೊಂಡಿದ್ದ. ಗಾಯದ ಮೇಲೆ ಸವರಲು ತನ್ನ ಕಿಸೆಯಲ್ಲಿ ರಸಗೊಬ್ಬರಗಳನ್ನೂ ಇಟ್ಟುಕೊಂಡಿದ್ದ ಎಂದು ಸಹಕೈದಿಗಳು ಹೇಳಿದ್ದಾರೆ.
ಕೊಲೆಯೇ ಉದ್ದೇಶ: ಅನಂತರ ಮೂಸಾನನ್ನು ವಿಚಾರಣೆ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಹಲವು ದಿನದಿಂದಲೂ ದಾಳಿಗೆ ಯೋಜನೆ ರೂಪಿಸುತ್ತಿದ್ದೆ. ವಾರ್ಡನ್ ಕೊಲೆ ಮಾಡಲು ಉದ್ದೇಶಿಸಿದ್ದೆ ಎಂದು ಹೇಳಿದ್ದಾನೆ. ಈತನನ್ನು ಇತರ ಕೈದಿಗಳಿಂದ ಪ್ರತ್ಯೇಕವಾಗಿಸಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಕೂಡ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆದಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ಶಫಿ ಅರ್ಮರ್‌ನ ಸಹಚರ: 2016ರ ಜುಲೈಯಲ್ಲಿ ಮೂಸಾನನ್ನು ವಿಶ್ವಭಾರತಿ ಪ್ಯಾಸೆಂಜರ್ ಟ್ರೇನ್‌ನಲ್ಲಿ ತನ್ನ ಮನೆಗೆ ತೆರಳುತ್ತಿದ್ದಾಗ ಬಂಧಿಸಲಾಗಿತ್ತು. ಈತನ ಬಳಿ ಕತ್ತಿ, ಚಾಕು ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ ಐಸಿಸ್ ಕರಪತ್ರಗಳು, ಶಸ್ತ್ರಾಸ್ತ್ರ ತಯಾರಿಕೆ ಕೈಪಿಡಿ, ಐಸಿಸ್ ಮುಖಂಡರ ಭಾಷಣಗಳು ಸಿಕ್ಕಿದ್ದವು. ಈತ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಉಗ್ರ ಕೃತ್ಯ ನಡೆಸಲು ಸಂಚು ನಡೆಸಿದ್ದ. ಆನ್‌ಲೈನ್ ಮೂಲಕ ಶಫಿ ಅರ್ಮರ್ ಜತೆ ಸಂಪರ್ಕದಲ್ಲಿದ್ದ ಎಂದು ಹೇಳಲಾ ಗಿದೆ. ಅಲ್ಲದೆ ಐಸಿಸ್ ಮಾಡುತ್ತಿದ್ದಂತೆ ಬಂಗಾಲದಲ್ಲಿ ಶಿರ ಚ್ಛೇದನ ಮಾಡಲೂ ಈತ ಯೋಜಿಸಿದ್ದ ಎನ್ನಲಾಗಿದೆ.
ಪಾಕ್ ಚುನಾವಣೆಯಲ್ಲಿ ಉಗ್ರ ಸಂಘಟನೆಯೂ ಕಣಕ್ಕೆ
ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್, ಜಮಾತ್- ಉದ್-ದಾವಾ ಸಂಘಟನೆಯ ಉಗ್ರ ಹಫೀಜ್ ಸಯೀದ್ ತನ್ನ ರಾಜಕೀಯ ಮಹತ್ವಾಕಾಂಕ್ಷೆಯನ್ನು ರವಿವಾರ ಬಹಿರಂಗಗೊಳಿಸಿದ್ದಾನೆ. 2018ರಲ್ಲಿ ನಡೆಯುವ ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಯುಡಿ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾನೆ. ಮಿಲ್ಲಿ ಮುಸ್ಲಿಂ ಲೀಗ್ ಹೆಸರಿ ನಡಿ ಪಕ್ಷ ಸ್ಪರ್ಧಿಸಲಿದ್ದು, 2018 ಅನ್ನು ಕಾಶ್ಮೀರದ ಜನರಿಗೆ ಅರ್ಪಿಸುವುದಾಗಿ ಹೇಳಿದ್ದಾನೆ.
ಪಾಕ್ ಬಗ್ಗೆ ಅಮೆರಿಕ ಕಿಡಿ: ಇದೇ ವೇಳೆ, ಪಾಕಿಸ್ತಾ ನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಅಮೆರಿಕ, “ಉಗ್ರರ ವಿರುದ್ಧ ಹೇಳಿಕೊಳ್ಳುವಂಥ ಯಾವ ಕ್ರಮವನ್ನೂ ಪಾಕಿಸ್ಥಾನ ಕೈಗೊಂಡಿಲ್ಲ’ ಎಂದು ಹೇಳಿದೆ. ತಾಲಿಬಾನ್, ಹಖನಿ ನೆಟ್‌ವರ್ಕ್ ಹಾಗೂ ಇತರೆ ಉಗ್ರ ಸಂಘಟನೆಗಳನ್ನು ನಾಶ ಮಾಡುವುದಾಗಿ ಪಾಕ್ ಭರವಸೆ ನೀಡಿತ್ತಾದರೂ, ಅದನ್ನು ಈಡೇರಿಸುತ್ತಿಲ್ಲ. ಹಫೀಜ್ ಸಯೀದ್‌ನ ಬಿಡುಗಡೆಯೂ ಅದಕ್ಕೆ ಸಾಕ್ಷಿ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.