ಬಿಹಾರದಲ್ಲಿ ಐಸಿಸ್ ಪೋಸ್ಟರ್ ಪತ್ತೆ: ಸದಸ್ಯರಾಗುವಂತೆ ಯುವಕರಿಗೆ ಗಾಳ
Team Udayavani, Mar 18, 2017, 7:22 PM IST
ದೆಹರಿ ಆನ್ ಸೋನೆ, ಬಿಹಾರ : ಬಿಹಾರದ ರೋಹಟಾಸ್ ಜಿಲ್ಲೆಯಲ್ಲಿಂದು ಐಸಿಸ್ ಉಗ್ರ ಸಂಘಟನೆಯ ಪೋಸ್ಟರ್ ಒಂದು ವಿದ್ಯುತ್ ಕಂಬವೊಂದಕ್ಕೆ ಅಂಟಿಸಲಾಗಿರುವುದು ಕಂಡು ಬಂದಿದೆ. ಐಸಿಸ್ ಸದಸ್ಯರಾಗುವಂತೆ ಈ ಪೋಸ್ಟರ್‌ನಲ್ಲಿ ಬಿಹಾರದ ಯುವಕರನ್ನು ಕೇಳಿಕೊಳ್ಳಲಾಗಿದೆ.
ಪೋಸ್ಟರ್‌ನಲ್ಲಿ ಐಸಿಸ್ ಹೆಸರು ಮತ್ತು ಧ್ವಜದ ಚಿತ್ರವಿದೆ. ಈ ಪೋಸ್ಟರ್ ಪತ್ತೆಯಾದೊಡನೆಯೇ ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ದೆಹರಿಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಅನ್ವರ್ ಜಾವೇದ್ ಅನ್ಸಾರಿ ತಿಳಿಸಿದ್ದಾರೆ.
ಐಸಿಸ್ ಪೋಸ್ಟರ್ ಇಂಗ್ಲಿಷ್‌ನಲ್ಲಿದ್ದು ಅದನ್ನು ಹೊರಡಿಸಿದ ವ್ಯಕ್ತಿಯ ಹೆಸರು ಅದರಲ್ಲಿ ಇಲ್ಲ. ಇದೀಗ ಈ ಪೋಸ್ಟರ್ ಬಗ್ಗೆ ತನಿಖೆಯನ್ನು ಆದೇಶಿಸಲಾಗಿದೆ ಎಂದು ಎಸ್‌ಡಿಓಪಿ ತಿಳಿಸಿದ್ದಾರೆ.
ಇದು ಕೆಲ ಸ್ಥಳೀಯ ಸಮಾಜ ವಿರೋಧಿ ಶಕ್ತಿಗಳು ಜನರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಲ್ಲಿ ನಡೆಸಿರುವ ಕುಚೋದ್ಯವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಾಗಿದ್ದರೂ ಪೊಲೀಸರು ಈ ಬಗ್ಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ ಎಂದು ಎಸ್‌ಡಿಓಪಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.