ಜೆಎಂಬಿ ಜತೆ ಗೂಡಿ ಕೋಲ್ಕತ ಮೇಲೆ ಉಗ್ರ ದಾಳಿ ನಡೆಸಲಿರುವ ಐಸಿಸ್ ?
Team Udayavani, Jan 3, 2017, 11:38 AM IST
ಕೋಲ್ಕತ : ಭಾರತದಲ್ಲಿ ಇಸ್ಲಾಮಿಕ್ ಖಲೀಫತ್ ಸ್ಥಾಪಿಸಲು ಬಯಸಿರುವ ಐಸಿಸ್ ಉಗ್ರ ಸಂಘಟನೆ ಕೋಲ್ಕತ ಸಹಿತವಾಗಿ ದೇಶದ ಈಶಾನ್ಯ ಭಾಗಗಳಲ್ಲಿ ಉಗ್ರ ದಾಳಿಗಳನ್ನು ನಡೆಸಲು ಉದ್ದೇಶಿಸಿದೆ ಎಂದು ಬಾಂಗ್ಲಾದೇಶದಲ್ಲಿನ ಉಗ್ರ ಸಂಘಟನೆಯಾಗಿರುವ ಜಮಾತ್ ಉಲ್ ಮುಜಾಹಿದೀನ್ (ಜೆಎಂಬಿ) ಸಂಘಟನೆಯ ಬಂಧಿತ ಉಗ್ರ ಮೊಹಮ್ಮದ್ ಮೊಸಿಉದ್ದೀನ್ ಹೇಳಿದ್ದಾನೆ.
ಕೋಲ್ಕತಾದಲ್ಲಿನ ಮದರ್ ಹೌಸ್ ಸೇರಿದಂತೆ ವಿದೇಶೀಯರು ಸೇರುವ ತಾಣಗಳ ಮೇಲೆ “ಒಂಟಿ ತೋಳ’ ಉಗ್ರನ ದಾಳಿ ನಡೆಸುವುದು ಐಸಿಸ್ ಯೋಜನೆಯಾಗಿದೆ ಎಂದು ಆತ ಬಾಯಿ ಬಿಟ್ಟಿದ್ದಾನೆ.
ಢಾಕಾ ಬೇಕರಿ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಜೆಎಂಬಿ ಕೂಡ ಭಾಗಿಯಾಗಿತ್ತು ಎನ್ನುವುದು ಗಮನಾರ್ಹವಾಗಿದೆ.
ಭಾರತದಲ್ಲಿ ಉಗ್ರ ದಾಳಿ ನಡೆಸುವುದಕ್ಕೆ ಜೆಎಂಬಿ ಜತೆಗೆ ಐಸಿಸ್ ಸಹಕರಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಎನ್‌ಡಿಟಿವಿ ವರದಿ ಮಾಡಿದೆ.
ಪಶ್ಚಿಮ ಬಂಗಾಲದ ಬರ್‌ದ್ವಾನ್‌ನಲ್ಲಿ ಕಳೆದ ಜುಲೈ ತಿಂಗಳಲ್ಲಿ ಬಂಧಿತನಾಗಿದ್ದ ಉಗ್ರ ಮೊಹಮ್ಮದ್ ಮೊಸಿಯುದ್ದೀನ್ ಅಲಿಯಾಸ್ ಮೂಸಾ ತನಿಖಾಧಿಕಾರಿಗಳಲ್ಲಿ ಐಸಿಸ್ ದಾಳಿಯ ಬಗ್ಗೆ ಬಾಯಿಬಿಟ್ಟಿದ್ದಾನೆ. ಇದನ್ನು ಅನುಸರಿಸಿ ಭದ್ರತಾ ಪಡೆಗಳು ಮತ್ತು ಗುಪ್ತಚರ ದಳದವರು ಸೇರಿಕೊಂಡು ಐಸಿಸ್ ದಾಳಿಯ ಸಂಭಾವ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.