ಉ.ಪ್ರ.: ಶಾಂತಿ ಕದಡಲು ಐಸಿಸ್‌ ಉಗ್ರರ ಯತ್ನ


Team Udayavani, Mar 8, 2017, 3:45 AM IST

terror.jpg

ಲಕ್ನೋ/ಭೋಪಾಲ್‌: ಉತ್ತರ ಪ್ರದೇಶದಲ್ಲಿ ಮತಯಂತ್ರದ ಗುಂಡಿ ಬುಧವಾರ “ಬೀಪ್‌’ ಎನ್ನಲಿದೆ. ಅಷ್ಟರೊಳಗೆ ಮತದಾರನ ಕಿವಿಗೆ ಬಿದ್ದಿದ್ದು ಗುಂಡಿನ ಮೊರೆತ. ಕಟ್ಟಡದಲ್ಲಿ ಅವಿತು ಗಂಟೆಗೂ ಹೆಚ್ಚು ಕಾಲ ಗುಂಡಿನ ದಾಳಿಗೈದ ಉಗ್ರನ ಜೀವಂತ ಸೆರೆಹಿಡಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತದಾರನಿಗೆ ಅಭಯ ನೀಡಿದೆ. ಆದರೂ ದುರ್ಘ‌ಟನೆಯ ಹಿಂದಿನ ಐಸಿಸ್‌ ನೆರಳು ಇಡೀ ರಾಜ್ಯವನ್ನು ತಣ್ಣಗೆ ನಿದ್ರಿಸಲು ಬಿಟ್ಟಿಲ್ಲ. ಕಾರಣ, ಇದು “ಟಾರ್ಗೆಟ್‌ ಉ.ಪ್ರ. ಚುನಾವಣೆ’! ಅದಕ್ಕೆ ಪೂರಕವಾಗಿ ಮಂಗಳವಾರ ಪಕ್ಕದ ರಾಜ್ಯ ಮಧ್ಯಪ್ರದೇಶ ದಿಂದಲೇ ಸ್ಫೋಟದ ಸದ್ದು 
ಅರಚಿತ್ತು. ಭೋಪಾಲ್‌- ಉಜ್ಜೆ„ನಿಯ ಪ್ಯಾಸೆಂಜರ್‌ ರೈಲಿನಲ್ಲಿ ಸ್ಫೋಟಗೊಂಡ ಅನಂತರ, ಉಗ್ರರ ಜಾಡು ಹಿಂಬಾಲಿಸಿದ ಎಟಿಎಸ್‌ಗೆ ಲಕ್ನೋದ ಠಾಕೂರ್‌ಗಂಜ್‌ನ ಕಟ್ಟಡವೇ ಟಾರ್ಗೆಟ್‌ ಆಯಿತು. ಕಾರಣ ಅಲ್ಲಿದ್ದದ್ದು ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದ ಉಗ್ರ ಸೈಫ‌ುಲ್ಲಾ! ನಿರಂತರ ಗುಂಡಿನ ಚಕಮಕಿ ನಡೆಸಿ, ಶರಣಾಗತಿಗೆ ಒಪ್ಪದ ಉಗ್ರನನ್ನು ಕಟ್ಟಡದಿಂದ ಹೊರದಬ್ಬಲು ನೆರ ವಾಗಿದ್ದು ಚಿಲ್ಲಿ ಬಾಂಬ್‌.

ಬಾಗಿಲು ತೆರೆಯಲಿಲ್ಲ
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅರುಣ್‌ ಹೇಳುವಂತೆ, ಆರಂಭದಲ್ಲಿ ಕಮಾಂಡೋಗಳು ಕಟ್ಟಡದ ಬಾಗಿಲನ್ನು ಬಡಿದಿದ್ದಾರೆ. ಒಳಗಿದ್ದ ಉಗ್ರ ಬಾಗಿಲು ತೆರೆಯದೆ, ಗುಂಡಿನ ದಾಳಿ ಆರಂಭಿಸಿದ. ಉಗ್ರನ ಬಳಿ ಶಸ್ತ್ರ ಇದೆಯೆಂದು ಕಮಾಂಡೋಗಳಿಗೆ ತಿಳಿಯಿತು. ಕಾರ್ಯಾಚರಣೆ ಬೇಗ ಮುಗಿಸಲು ಇಚ್ಛಿಸದೆ, ಜೀವಂತ ಸೆರೆಹಿಡಿಯುವ ಕಮಾಂಡೋ ಸಾಹಸಕ್ಕೆ ಕೊನೆಗೂ ಯಶಸ್ಸು ಸಿಕ್ಕಿತು.

ಐಸಿಸ್‌ ನಂಟು?: ಗುಜರಾತಿನ ದಾಳಿ  ಬಳಿಕ “ಐಸಿಸ್‌’ ಲಕ್ನೋದಲ್ಲಿ ಪುನಃ ಅಬ್ಬರಿಸಿದೆ ಎಂದು ಹೇಳ ಲಾಗುತ್ತಿದೆ. ಉಜ್ಜೆ„ನಿ ರೈಲು ಸ್ಫೋಟದ ಅನಂತರ ಕಟ್ಟಡದಲ್ಲಿ ಅಡಗಿದ್ದ ಉಗ್ರ ಸೈಫ‌ುಲ್ಲಾ ದಕ್ಷಿಣ ಭಾರತದ ಉಗ್ರನೊಬ್ಬನಿಗೆ ಕರೆ ಮಾಡಿದ್ದಾನೆ. ಆ ಉಗ್ರ ಐಸಿಸ್‌ ಸದಸ್ಯ ಎನ್ನುವುದು ಪೊಲೀಸರು ನೀಡಿರುವ ಮಾಹಿತಿ. ಉತ್ತರ ಪ್ರದೇಶ ಚುನಾವಣೆಯ ಶಾಂತಿ ಕದಡಲು ಉಗ್ರರು ರೈಲು ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಮಧ್ಯ ಪ್ರದೇಶದ ರೈಲು ಸ್ಫೋಟದಲ್ಲಿ ಸೈಫ‌ುಲ್ಲಾನ ಕೈವಾಡವಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. 

ರೈಲು ಸ್ಫೋಟಕ್ಕೆ ಸಂಚು: “59320′ ನಂಬರಿನ ರೈಲಿನ ಹಣೆಬರಹ ಮಂಗಳವಾರ ಮಂಗಳಕರ ಆಗಿರಲಿಲ್ಲ. ಭೋಪಾಲ್‌ನಿಂದ ಉಜ್ಜೆ„ನಿಗೆ ಹೊರಟಿದ್ದ ರೈಲು. ಬೆಳಗ್ಗೆ 9.50ರ ಸುಮಾರು. ಮಧ್ಯಪ್ರದೇಶದ ಶಾಜಾಪುರದಲ್ಲಿ ಕೊನೆಯಿಂದ ಎರಡನೇ ಬೋಗಿಯಲ್ಲಿ ಸ್ಫೋಟವಾಗಿದೆ. 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸುಧಾರಿತ ಸ್ಫೋಟಕ (ಐಇಡಿ) ಬಳಸಿ ಕೃತ್ಯ ಎಸಗಲಾಗಿದೆ.

ಐವರ ಬಂಧನ: ಸೈಫ‌ುಲ್ಲಾರ ಹೊರತಾಗಿ ಒಬ್ಬ ಶಂಕಿತನನ್ನು ಕಾನ್ಪುರದಲ್ಲಿ ಬಂಧಿಸಲಾಗಿತ್ತು. ನಂತರ ರೈಲ್ವೆ ಸ್ಫೋಟದ ಸಿಸಿಟಿವಿ ಫ‌ೂಟೇಜ್‌ ಆಧರಿಸಿ ಉಳಿದ ಮೂವರನ್ನು ಮಧ್ಯಪ್ರದೇಶದ ಬೇರೆ ಬೇರೆಯೆಡೆ ಬಂಧಿಸಲಾಗಿದೆ. ಒಟ್ಟು ಐವರು ಎಟಿಎಸ್‌ಗೆ ಅತಿಥಿಯಾಗಿದ್ದಾರೆ.

ತಪ್ಪಲಿವೆ. ಅಲ್ಲದೆ, ಸ್ವಯಂ ನಿವೃತ್ತಿ ಅರ್ಜಿ ವಾಪಸ್‌ ಪಡೆವ ಅವಕಾಶವೂ ಇದೆ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಹೊಸ ನಿಯಮ ಪ್ರಕಾರ ಅಧಿಕಾರಿಗಳ ಸ್ವಯಂ ನಿವೃತ್ತಿ ಅರ್ಜಿ ನೋಟಿಸ್‌ ಅವಧಿ ಮೀರುವಂತಿಲ್ಲ.

ಟಾಪ್ ನ್ಯೂಸ್

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.