Missile attack: ಇಸ್ರೇಲ್‌ ಮೇಲೆ ಇರಾನ್‌ ಶಬ್ದಾತೀತ ಬಾಂಬ್‌ ದಾಳಿ!

ಶಬ್ದಕ್ಕಿಂತ 5 ಪಟ್ಟು ವೇಗದ ಹೈಪರ್‌ಸಾನಿಕ್‌ ಕ್ಷಿಪಣಿ ಮೊದಲ ಬಾರಿ ಪ್ರಯೋಗ

Team Udayavani, Oct 3, 2024, 7:25 AM IST

Missile attack: ಇಸ್ರೇಲ್‌ ಮೇಲೆ ಇರಾನ್‌ ಶಬ್ದಾತೀತ ಬಾಂಬ್‌ ದಾಳಿ!

ಹೊಸದಿಲ್ಲಿ: ಆರು ತಿಂಗಳ ಅವಧಿಯಲ್ಲೇ ಇರಾನ್‌ ಸೇನೆ ಎರಡನೇ ಬಾರಿ ಇಸ್ರೇಲ್‌ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ. “ಆಪರೇಶನ್‌ ಟ್ರೂ ಪ್ರಾಮಿಸ್‌ 2′ ಹೆಸರಿನಲ್ಲಿ ಮಂಗಳವಾರ ನಡೆಸಿದ ದಾಳಿಯ ವೇಳೆ ಇರಾನ್‌ ಇದೇ ಮೊದಲ ಬಾರಿಗೆ ಇಸ್ರೇಲ್‌ ವಿರುದ್ಧ ಅತ್ಯಾಧುನಿಕ “ಹೈಪರ್‌ ಸಾನಿಕ್‌’ ಕ್ಷಿಪಣಿಗಳನ್ನು ಬಳಸಿದೆ.

ಎಪ್ರಿಲ್‌ ತಿಂಗಳಿನಲ್ಲಿ ನಡೆಸಿದ ಡ್ರೋನ್‌ ದಾಳಿಗೆ ಇರಾನ್‌ “ಆಪರೇಶನ್‌ ಟ್ರೂ ಪ್ರಾಮಿಸ್‌’ ಎಂದು ಹೆಸರಿಟ್ಟಿತ್ತು. ಮಂಗಳವಾರದ ದಾಳಿಗೆ ಹೈಪರ್‌ಸಾನಿಕ್‌ ಕ್ಷಿಪಣಿ ಬಳಸಿದೆ. ಇವು ಶಬ್ದಕ್ಕಿಂತ 5 ಪಟ್ಟು ಅಥವಾ ಅದ ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಅತೀ ದೂರದ ಗುರಿಯನ್ನು ನಿಖರ ವಾಗಿ ಛೇದಿಸುವ ಸಾಮರ್ಥ್ಯ ಹೊಂದಿವೆ. ವಿಶೇಷವೆಂದರೆ ಮಧ್ಯ ಪ್ರಾಚ್ಯ ಸಂಘರ್ಷದಲ್ಲಿ ಮೊದಲ ಬಾರಿಗೆ ಇಂಥ ಕ್ಷಿಪಣಿಗಳನ್ನು ಬಳಸಲಾಗಿದೆ.

ಮಂಗಳವಾರ ರಾತ್ರಿ ದಿಢೀರ್‌ ದಾಳಿ ಆರಂಭಿಸಿದ ಇರಾನ್‌, ಇಸ್ರೇಲ್‌ ವಿರುದ್ಧ ಮಧ್ಯಮ ವ್ಯಾಪ್ತಿಯ ಎಮಾದ್‌ ಮತ್ತು ಘದ್ರ ಕ್ಷಿಪಣಿಗಳನ್ನು ಬಳಸಿತ್ತು. ಆದರೆ, ಇದೇ ಮೊದಲ ಬಾರಿಗೆ ಫ‌ತ್ತಾಹ್‌-2 ಹೈಪರ್‌ಸಾನಿಕ್‌ ಕ್ಷಿಪಣಿ ಬಳಸಿದೆ. ಇರಾನ್‌ ಪ್ರಕಾರ ಈ ಕ್ಷಿಪಣಿಯು ಗಂಟೆಗೆ 1,400 ಕಿ.ಮೀ. ವೇಗದಲ್ಲಿ ಚಲಿಸಿದೆ. ಹೀಗಾಗಿ ಈ ಕ್ಷಿಪಣಿಗಳನ್ನು ಪತ್ತೆ ಹಚ್ಚುವುದು ಭಾರೀ ಕಷ್ಟ ಮಾತ್ರವಲ್ಲದೆ ಅಷ್ಟೊಂದು ಸುಲಭವಾಗಿ ಹೊಡೆದುರುಳಿಸಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಗಳು ಹೆಚ್ಚು ನಿಖರವಾಗಿ ಗುರಿಯನ್ನು ತಲುಪಬಲ್ಲ ವುಗಳಾಗಿವೆ.

ಸೂಪರ್‌ ಸಾನಿಕ್‌ ಕ್ಷಿಪಣಿ
-ಈ ಕ್ಷಿಪಣಿಗಳು ಶಬ್ದದ ವೇಗ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಅಂದರೆ ಮ್ಯಾಕ್‌1 ಮತ್ತು ಮ್ಯಾಕ್‌ 5ರ ವ್ಯಾಪ್ತಿಯಲ್ಲಿ ಗುರಿಯನ್ನು ತಲುಪತ್ತವೆ.
-ಈ ಕ್ಷಿಪಣಿಗಳಲ್ಲಿ ಜೆಟ್‌ ಎಂಜಿನ್‌ಗಳು ಅಥವಾ ರಾಕೆಟ್‌ ಬೂಸ್ಟರ್‌ ತಂತ್ರಜ್ಞಾನವನ್ನು ಬಳಸಲಾಗಿರುತ್ತದೆ.
-ನಿರ್ದಿಷ್ಟ ಗುರಿ ತಲುಪಲು ಈ ಕ್ಷಿಪಣಿಗಳಿಗೆ ಅತ್ಯಾಧುನಿಕ ಗೈಡೆನ್ಸ್‌ ಸಿಸ್ಟಮ್‌ ಬಳಸಲಾಗಿರುತ್ತದೆ.
-ಸೂಪರ್‌ ಸಾನಿಕ್‌ ಕ್ಷಿಪಣಿಗಳು ಬ್ಯಾಲಿಸ್ಟಿಕ್‌ ಪಥವನ್ನು ಅನುಸರಿಸಿತಮ್ಮ ಗುರಿಯನ್ನು ತಲುಪುತ್ತವೆ ಇವುಗಳನ್ನು ಸುಲಭವಾಗಿ ಹೊಡೆದುರುಳಿಸಬಹುದು.
-ಸೂಪರ್‌ಸಾನಿಕ್‌ಗೆ ಭಾರತದ ಬ್ರಹ್ಮೋಸ್‌, ರಷ್ಯಾದ ಪಿ-800 ಕ್ಷಿಪಣಿಗಳು ಅತ್ಯುತ್ತಮ ಉದಾಹರಣೆ

ಹೈಪರ್‌ ಸಾನಿಕ್‌ ಕ್ಷಿಪಣಿ
-ಹೈಪರ್‌ ಸಾನಿಕ್‌ ಕ್ಷಿಪಣಿಗಳು ಕನಿಷ್ಠ ಮ್ಯಾಕ್‌ 5ಕ್ಕಿಂತ ಹೆಚ್ಚು ಅಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತವೆ. ಈ ವೇಗವು ಮ್ಯಾಕ್‌ 10ರವರೆಗೂ ತಲುಪಬಹುದು.
-ಹೆಚ್ಚಾಗಿ ಸ್ಕ್ರ್ಯಾಮ್‌ ಜೆಟ್ಸ್‌ ಎಂಜಿನ್‌ ಅಥವಾ ರಾಕೆಟ್‌ ಬೂಸ್ಟರ್‌ಗಳನ್ನು ಇವುಗಳಲ್ಲಿ ಬಳಸಲಾಗಿರುತ್ತದೆ.
-ಹೈಪರ್‌ ಸಾನಿಕ್‌ ಕ್ಷಿಪಣಿಗಳು ಅತಿ ಹೆಚ್ಚು ವೇಗದಲ್ಲಿ ಚಲಿಸುವುದರಿಂದ ಇವು ಗಳನ್ನು ಪತ್ತೆ ಹಚ್ಚುವುದು ಭಾರೀ ಕಷ್ಟ
-ಈ ಕ್ಷಿಪಣಿಗಳು ಬ್ಯಾಲಿಸ್ಟಿಕ್‌ ಪಥವನ್ನು ಅನುಸರಿಸದೇ ತಮ್ಮ ಗುರಿಯನ್ನು
ಹೆಚ್ಚು ನಿಖರವಾಗಿ ತಲುಪುತ್ತವೆ.
-ಹೈಪರ್‌ಸಾನಿಕ್‌ ಕ್ಷಿಪಣಿಗಳನ್ನು ಸುಲಭವಾಗಿ ಹೊಡೆದುರುಳಿಸಲು ಸಾಧ್ಯವಾಗುವುದಿಲ್ಲ.
-ಚೀನದ ಡಿಎಫ್-ಜೆಫ್ ಹಾಗೂ ರಷ್ಯಾದ ಅವಂಗಾರ್ಡ್‌ ಹೈಪರ್‌ ಸಾನಿಕ್‌ಗೆ ಅತ್ಯುತ್ತಮ ಉದಾಹರಣೆ

ಮ್ಯಾಕ್‌ ವೇಗ ಎಂದರೆ- ವಿಮಾನದ ವೇಗ ಮತ್ತು ಶಬ್ದದ ವೇಗದ ಅನುಪಾತವನ್ನು ಸೂಚಿಸುವ ಅಳತೆ ಯಾಗಿದೆ. ಮ್ಯಾಕ್‌ 1 ಎಂದರೆ ಪ್ರತೀ ಗಂಟೆಗೆ ಕ್ಷಿಪಣಿಯು 1,195 ಕಿ.ಮೀ. ವೇಗದಲ್ಲಿ ಚಲಿಸಿದೆ ಎಂದರ್ಥ.

ಟಾಪ್ ನ್ಯೂಸ್

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Sai Baba Idol: ವಾರಾಣಸಿಯ ದೇವಸ್ಥಾನಗಳಿಂದ ಸಾಯಿಬಾಬಾ ವಿಗ್ರಹ ತೆರವು

Sai Baba Idol: ವಾರಾಣಸಿಯ ದೇವಸ್ಥಾನಗಳಿಂದ ಸಾಯಿಬಾಬಾ ವಿಗ್ರಹ ತೆರವು

Arvind Kejriwal: ಇನ್ನು 2 ದಿನಗಳಲ್ಲಿ ದಿಲ್ಲಿ ಸಿಎಂ ಅಧಿಕೃತ ನಿವಾಸ ತೊರೆಯಲಿರುವ ಕೇಜ್ರಿ

Arvind Kejriwal: ಇನ್ನು 2 ದಿನಗಳಲ್ಲಿ ದಿಲ್ಲಿ ಸಿಎಂ ಅಧಿಕೃತ ನಿವಾಸ ತೊರೆಯಲಿರುವ ಕೇಜ್ರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.