ಇಸ್ರೇಲ್‌ಗೆ ಕೇರಳದ ಸಮವಸ್ತ್ರ
Team Udayavani, Sep 26, 2018, 5:02 PM IST
ತಿರುವನಂತಪುರ: ಕಣ್ಣೂರಿನ ಮಾರ್ಯನ್ ಅಪಾರೆಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಇತ್ತೀಚೆಗೆ ಇಸ್ರೇಲಿ ಪೊಲೀಸ್ ಅಧಿಕಾರಿಗಳು ಪದೇ ಪದೆ ಭೇಟಿ ನೀಡುತ್ತಿರುವ ವಿಚಾರ ಕುತೂಹಲಕಾರಿ ಅಂಶವೊಂದನ್ನು ಬಯಲು ಮಾಡಿದೆ. ಈ ಕಂಪನಿಯಲ್ಲಿ, ಇಸ್ರೇಲಿ ಪೊಲೀಸರ ಸಮವಸ್ತ್ರಗಳನ್ನು ತಯಾರಿಸಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಇಸ್ರೇಲ್ ಪೊಲೀಸ್ ಇಲಾಖೆ ಇದೇ ಕಂಪನಿಯಿಂದ ಸಮವಸ್ತ್ರಗಳನ್ನು ಖರೀದಿಸುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
2006ರಲ್ಲಿ ಸ್ಥಾಪನೆಗೊಂಡ, ತೋಡುಪ್ಪುಳದ ಉದ್ಯಮಿ ಥಾಮಸ್ ಒಲಿಕ್ಕುಲ್ ಎಂಬುವರಿಗೆ ಸೇರಿದ ಈ ಕಂಪನಿ, ಈ ಹಿಂದೆ ಕುವೈತ್‌ನ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅಲ್ಲಿನ ಸೈನಿಕರಿಗೆ ಸಮವಸ್ತ್ರಗಳನ್ನು ಪೂರೈಸಿತ್ತು. ಸದ್ಯದಲ್ಲೇ ಫಿಲಿಪ್ಪೀನ್ಸ್ ಸೈನ್ಯಕ್ಕೂ ಸಮವಸ್ತ್ರ ಪೂರೈಸುವ ಬಗ್ಗೆ ಮಾತುಕತೆ ಸಾಗಿದೆಯಂತೆ.
ಆರಂಭದಲ್ಲಿ ಕೇರಳದ ನಾನಾ ಶಾಲೆಗಳಿಗೆ ಸಮವಸ್ತ್ರ ತಯಾರಿಸುತ್ತಾ ಈ ಕಸುಬಿನಲ್ಲಿ ನೈಪುಣ್ಯತೆ ಸಾಧಿಸಿದ್ದು ಕಂಪನಿಯ ಕೀರ್ತಿ ವಿದೇಶಗಳಿಗೂ ಹಬ್ಬಲು ಕಾರಣವಾಯಿತು. ಈಗ ನಾವು ಜಗತ್ತಿನಾದ್ಯಂತ ವಿವಿಧ ದೇಶಗಳ ಸೇನಾ ಸಿಬ್ಬಂದಿ, ಪೊಲೀಸ್ ಪಡೆಗಳು, ಭದ್ರತಾ ಅಧಿಕಾರಿಗಳು ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗೂ ಇಲ್ಲೇ ಸಮವಸ್ತ್ರ ತಯಾರಿಸಿ ಕೊಡುತ್ತೇವೆ ಎನ್ನುತ್ತಾರೆ ಈ ಕಂಪನಿಯ ಅಧಿಕಾರಿ ಸಿಜಿನ್ ಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.