ಇಸ್ರೋದಿಂದ ಜಿಸ್ಯಾಟ್ -30 ಉಪಗ್ರಹ ಯಶಸ್ವಿ ಉಡಾವಣೆ
Team Udayavani, Jan 17, 2020, 11:17 AM IST
ಬೆಂಗಳೂರು: ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋದ ನೂತನ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್ -30ಯನ್ನು ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
ಫ್ರೆಂಚ್ ಗಯಾನದ ಕರೌ ಉಡಾವಣಾ ನೆಲೆಯಿಂದ ‘ಎರಿಯಾನ್-5 ವಿಎ-251’ ರಾಕೆಟ್ ಮೂಲಕ ಶುಕ್ರವಾರ ಮುಂಜಾನೆ ಉಡಾವಣೆ ಮಾಡಲಾಗಿದೆ.
ದೂರದರ್ಶನ ಪ್ರಸಾರ, ಟಿಲಿಕಮ್ಯುನಿಕೇಶನ್ಸ್, ಡಿಟಿಎಚ್ ಮತ್ತು ಇತರ ಪ್ರಸಾರ ಕ್ಷೇತ್ರಗಳ ಗುಣಮಟ್ಟ ಹೆಚ್ಚಿಸಲು ಈ ಉಪಗ್ರಹ ನೆರವಾಗಲಿದೆ.
ಶುಕ್ರವಾರ ನಸುಕಿನ 2.35ರ ಸಮಯದಲ್ಲಿ ಯಶಸ್ವಿ ಉಡಾವಣೆ ಮಾಡಲಾಗಿದ್ದು, ಇಸ್ರೋದ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಏರಿಯಾನ್ ಸ್ಪೇಸ್ ನ ಏರಿಯಾನ್- 5 ವಾಹನವು ಜಿಸ್ಯಾಟ್ -30 ಜತೆಗೆ ಯೂಟೆಲ್ ಸ್ಯಾಟ್ ಕನೆಕ್ಟ್ ಎಂಬ ಮತ್ತೊಂದು ಉಪಗ್ರಹವನ್ನು ಹೊತ್ತು ಕಕ್ಷೆ ಸಾಗಿದೆ. ಏರಿಯಾನ್ 5 ವಾಹನವು 38 ನಿಮಿಷಗಳಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
India’s communication satellite #GSAT30 was successfully launched into a Geosynchronous Transfer Orbit by #Ariane5 #VA251.
Thanks for your support !!!
For details please visit: https://t.co/FveT3dGuo6
Image Courtesy: Arianespace pic.twitter.com/67csn0zZq7
— ISRO (@isro) January 16, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.