ಶುಕ್ರ ಗ್ರಹದ ಮೇಲೆ ಇಸ್ರೋ ಕಣ್ಣು!
ಚಂದ್ರಯಾನ-2ರ ಬಗ್ಗೆ ಮಾತನಾಡಿದ ಕೆ.ಶಿವನ್;ಮುಂದಿನ ಯೋಜನೆ ಬಗ್ಗೆ ಇಸ್ರೋ ಅಧ್ಯಕ್ಷರ ಸುಳಿವು
Team Udayavani, Jul 15, 2019, 6:00 AM IST
ಇಡೀ ಜಗತ್ತೇ ಇಸ್ರೋದ ಚಂದ್ರಯಾನ 2 ಯೋಜನೆಯನ್ನು ಕುತೂಹಲದಿಂದ ಗಮನಿಸುತ್ತಿರುವ ಮಧ್ಯೆಯೇ ಇಸ್ರೋ ಅಧ್ಯಕ್ಷ ಕೆ.ಶಿವನ್, ಮುಂದಿನ ಹಾದಿಯ ಬಗ್ಗೆ
ಮಾತನಾಡಿದ್ದಾರೆ. ಮೊದಲು ಚಂದ್ರ, ಬಳಿಕ ಮಂಗಳ, ಈಗ ಮತ್ತೆ ಚಂದ್ರನ ಇನ್ನೊಂದು ಮುಖ…ಮುಂದೆ ಶುಕ್ರ ಗ್ರಹವೇ ನಮ್ಮ ಟಾರ್ಗೆಟ್ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಚಂದ್ರಯಾನ ಯೋಜನೆಯಲ್ಲಿದ್ದ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ದಿ ವೀಕ್‌ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಚಂದ್ರಯಾನ-2 ಪ್ರಯೋಗಕ್ಕಾಗಿ ಚಂದ್ರನ ಮೇಲ್ಮೈಯನ್ನು ಹೇಗೆ ನೀವು ಮರುರಚನೆ ಮಾಡಿದ್ದೀರಿ?
ನೌಕೆ ಚಂದ್ರನ ಮೇಲೆ ಕಾಲಿಡುವ ಸ್ಥಳವನ್ನು ಚಿತ್ರದುರ್ಗದಲ್ಲಿರುವ ಕೇಂದ್ರದಲ್ಲಿ ಪ್ರತಿರೂಪಿಸಲಾಗಿದೆ. ಎರಡು ಕ್ರೇಟರ್‌ಗಳನ್ನು ಇಲ್ಲಿ ತಯಾರಿಸಿದ್ದೇವೆ. ಚಂದ್ರನ ಮೇಲಿರುವ ಗುರುತ್ವವನ್ನೂ ಇಲ್ಲಿ ಪ್ರತಿರೂಪಿಸಿದ್ದೇವೆ. ಅಷ್ಟೇ ಅಲ್ಲ ಚಂದ್ರನ ಬಗ್ಗೆ ನಮಗೆ ಇರುವ ಜ್ಞಾನದ ಆಧಾರದಲ್ಲಿ, ಚಂದ್ರನ ಮೇಲೆ ಇರುವ ಮಣ್ಣನ್ನೂ ನಾವು ಪ್ರತಿರೂಪಿಸಿದ್ದೇವೆ.
ಮುಂದಿನ ಇಸ್ರೋ ಯೋಜನೆ ಯಾವುದು?
ಮುಂದಿನ ನಮ್ಮ ಯೋಜನೆ ಶುಕ್ರನ ಕಡೆಗೆ. ಪೇಲೋಡ್ ಕುರಿತು ನಾವು ಪ್ರಕಟಣೆ ಹೊರಡಿಸಿದ್ದೆವು. ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶುಕ್ರಗ್ರಹದ ಸವಾಲುಗಳೇ ಬೇರೆ. ಮಂಗಳನಿಗಿಂತ ಅತ್ಯಂತ ವಿಶಿಷ್ಟ ಹಾಗೂ ಕಠಿಣ ವಾತಾವರಣ ಅಲ್ಲಿದೆ. ಇನ್ನೂ ಈ ಯೋಜನೆಗೆ ಅನುಮತಿ ಸಿಕ್ಕಿಲ್ಲ.
ಇಸ್ರೋದ ಯೋಜನೆಗಳು ಈಗ ಜಾಗತಿಕ ಗಮನ ಸೆಳೆಯುತ್ತಿವೆ. ವಿಫಲವಾಗುವ ಭೀತಿ ನಿಮ್ಮನ್ನು ಕಾಡುತ್ತದೆಯೇ?
ನನ್ನ ವೃತ್ತಿ ಜೀವನ ಆರಂಭವಾಗಿದ್ದೇ ವೈಫಲ್ಯದಿಂದ. ನಾವು ವಿಫಲವಾಗುವುದು ಅತ್ಯಂತ ಕಡಿಮೆ. ನಾವು ಟೀಮ್‌ವರ್ಕ್ ಮಾಡುತ್ತೇವೆ. ಆದರೆ ಬಾಹ್ಯಾಕಾಶ ಯೋಜನೆಗಳಲ್ಲಿ ವೈಫಲ್ಯ ಮತ್ತು ಯಶಸ್ಸಿನ ಮಧ್ಯೆ ಅತ್ಯಂತ ಸಣ್ಣ ಅಂತರವಿರುತ್ತದೆ. ಕೆಲವು ಸಂಗತಿಗಳಲ್ಲಿ ಅನಿಶ್ಚಿತತೆ ಇರುತ್ತದೆ ಎಂದು ನಮಗೆ ತಿಳಿದಿರುತ್ತದೆ. ಕೆಲವೊಮ್ಮೆ ದುರಾದೃಷ್ಟವೂ ಕಾಡುತ್ತದೆ.
ಹಾಗಿದ್ದರೆ, ರಾಕೆಟ್ ಸೈನ್ಸ್‌ನಲ್ಲಿ ಅದೃಷ್ಟ- ದುರಾದೃಷ್ಟ ಅನ್ನೋದು ಇದೆಯೇ?
ರಾಕೆಟ್ ಸೈನ್ಸ್‌ನಲ್ಲಿ ಅದೃಷ್ಟ ಎಂಬುದಿಲ್ಲ. ಅದೃಷ್ಟ ಕೇವಲ ವೈಯಕ್ತಿಕ ನಂಬಿಕೆ. ನಾನು ಅದೃಷ್ಟದಲ್ಲಿ ನಂಬಿಕೆ ಇಟ್ಟಿದ್ದೇನೆ. ಆದರೆ ಇದನ್ನು ನಮ್ಮ ವ್ಯವಸ್ಥೆಗೆ ಅನ್ವಯಿಸಲು ಆಗದು.
ಈ ಕೆಲಸಕ್ಕೆ ಅವರು ಸೂಕ್ತ ಎಂಬ ಕಾರಣಕ್ಕೆ ನೇಮಿಸಲಾಗಿದೆ. ಇಸ್ರೋದಲ್ಲಿ ಪುರುಷರೋ ಮಹಿಳೆಯರೋ ಎಂಬುದನ್ನು ನೋಡಿ ಹುದ್ದೆಗೆ ನೇಮಕ ಮಾಡುವುದಿಲ್ಲ.ಇಸ್ರೋದಲ್ಲಿ ಮಹಿಳೆಯರು ಉನ್ನತ ಸ್ಥಾನ ಗಳಿಸಿದ್ದಾರೆ. ಮಹಿಳಾ ಸಹೋದ್ಯೋಗಿ ಗೀತಾ ವರದನ್, ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಅನುರಾಧಾ ಟಿ.ಕೆ ಮತ್ತು ಪಿ.ವಲರ್‌ಮತಿ ಉಪಗ್ರಹ ಯೋಜನೆ ನಿರ್ದೇಶಕರಾಗಿದ್ದರು.
ಪ್ರಶ್ನೆ: ರಾಕೆಟ್ ಸೈನ್ಸ್ ಹೊರತಾಗಿ ನಿಮ್ಮ ಆಸಕ್ತಿ ಏನು?
ಉತ್ತರ: ನನಗೆ ಹಳೆಯ ತಮಿಳು ಹಾಡುಗಳನ್ನು ಕೇಳುವುದು ಮತ್ತು ಉದ್ಯಾನವನದಲ್ಲಿ ಕಾಲ ಕಳೆಯುವುದು ಆಸಕ್ತಿಕರ ಸಂಗತಿ. ಗಾರ್ಡನ್‌ನಲ್ಲಿದ್ದಾಗ ರಾಕೆಟ್ ಸೈಂಟಿಸ್ಟ್ ಎಂಬುದನ್ನೇ ಮರೆಯುತ್ತೇನೆ.
ಪ್ರಶ್ನೆ: ದಿ ಮಾಶ್ನ್ ಸಿನಿಮಾದಲ್ಲಿ ಮಂಗಳನ ಮೇಲೆ ಮಾನವರು ಆಲೂಗಡ್ಡೆ ಬೆಳೆಯುವ ದೃಶ್ಯವಿದೆ. ಮಾನವರು ಮುಂದೊಂದು ದಿನ ಆಲೂ ಬೆಳೆಯಬಹುದು ಎನಿಸುತ್ತದೆಯೇ?
ಉತ್ತರ: ಖಂಡಿತ ಸಾಧ್ಯವಿದೆ. ಬಾಹ್ಯಾಕಾಶದ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚುತ್ತಿದೆ. ಮುಂದಿನ ಕೆಲವು ದಶಕಗಳಲ್ಲಿ ಮಂಗಳನನ್ನು ಮಾನವ ಅತ್ಯಂತ ವಿಭಿನ್ನ ಗ್ರಹವನ್ನಾಗಿಸಬಹುದು.
ಪ್ರಶ್ನೆ: ಗಗನಯಾನದ ಪ್ರಗತಿ ಹೇಗಿದೆ?
ಉತ್ತರ: ಸಿಸ್ಟಂಗಳನ್ನು ನಾವು ಸಿದ್ಧಪಡಿಸಿದ್ದೇವೆ. ಇಂಜಿನಿಯರಿಂಗ್ ಸಿಸ್ಟಂ ಕೂಡ ಸಿದ್ಧವಾಗಿದೆ. ಹಾರಾಟಕ್ಕೆ ಅಗತ್ಯ ನೆರವು ಬೇಕು ಎಂದು ವಾಯುಪಡೆಯ ನೆರವು ಕೇಳಿದ್ದೇವೆ. ಡಿಆರ್‌ಡಿಒ ಕೂಡ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.