ದೀಪಾವಳಿಗೆ ಇಸ್ರೋ ಮಹಾನ್ ಸಾಧನೆ; 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಅತ್ಯಂತ ಭಾರದ ರಾಕೆಟ್
Team Udayavani, Oct 23, 2022, 9:19 AM IST
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ} ಅತಿ ಭಾರದ ರಾಕೆಟ್ ಎಲ್‌ವಿಎಂ3-ಎಂ2 ತನ್ನ ಮೊದಲ ಕಮರ್ಷಿಯಲ್ ಕಾರ್ಯಾಚರಣೆಯಲ್ಲಿ ಯುನೈಟೆಡ್ ಕಿಂಗ್ ಡಮ್ ಮೂಲದ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಭಾನುವಾರ ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಇದೊಂದು ಐತಿಹಾಸಿಕ ಮಿಷನ್ ಎಂದು ಇಸ್ರೋ ಹೇಳಿದೆ.
36 ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಹೊತ್ತ ಎಲ್‌ವಿಎಂ3-ಎಂ2 ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಲ್ಲಿರುವ 2ನೇ ಲಾಂಚ್ ಪ್ಯಾಡ್ ನಿಂದ ಶನಿವಾರ ಮಧ್ಯರಾತ್ರಿ 12.07ಕ್ಕೆ ನಭಕ್ಕೆ ಹಾರಿದ ರಾಕೆಟ್ ಕಕ್ಷೆಗೆ ಯಶಸ್ವಿಯಾಗಿ ಉಪಗ್ರಹಗಳನ್ನು ಕೂರಿಸಿದೆ.
ಇದನ್ನೂ ಓದಿ:ಮಣಿಪಾಲ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಕಾಮಗಾರಿ; ಮಳೆಯಲ್ಲಿ ವಾಹನ ಸವಾರರು ಪರದಾಟ
ಒನ್ ವೆಬ್ ಖಾಸಗಿ ಸ್ಯಾಟಲೈಟ್ ಸಂವಹನ ಸಂಸ್ಥೆಯಾಗಿದ್ದು, ಭಾರತದ ಭಾರ್ತಿ ಎಂಟರ್ ಪ್ರೈಸಸ್ ಈ ಸಂಸ್ಥೆಯಲ್ಲಿ ಪ್ರಮುಖ ಹೂಡಿಕೆದಾರ ಹಾಗೂ ಷೇರು ಹೊಂದಿರುವ ಸಂಸ್ಥೆಯಾಗಿದೆ. 5,796 ಕೆಜಿಯಷ್ಟು ಭಾರವಾದ ಪೇಲೋಡ್‌ನೊಂದಿಗೆ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
ಭಾರಿ ತೂಕದ ಉಪಗ್ರಹಗಳನ್ನು ಹಾರಿಬಿಡಲೆಂದೇ ತಯಾರಿಸಿರುವ ಈ ರಾಕೆಟ್ 8 ಟನ್ ಪೇಲೋಡ್ ಹೊತ್ತೊಯ್ಯಬಲ್ಲದಾಗಿದೆ. ಇದು 43.5 ಮೀ ಎತ್ತರದ ರಾಕೆಟ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.