ISRO; ಶೀಘ್ರ ದೇಸಿ ನ್ಯಾವಿಗೇಶನ್ ವ್ಯವಸ್ಥೆ ಜಾರಿ
Team Udayavani, Nov 10, 2024, 7:20 AM IST
ಹೊಸದಿಲ್ಲಿ: ತನ್ನದೇ ಆದ ನ್ಯಾವಿಗೇಶನ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿರುವ ಇಸ್ರೋ, ಶೀಘ್ರ ಜನರಿಗೆ ಈ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಹೇಳಿದೆ. ಇದಕ್ಕಾಗಿ 7 ನ್ಯಾವಿಗೇಶನ್ ಉಪಗ್ರಹಗಳನ್ನು ಉಡಾವಣೆ ಮಾಡಬೇಕಿದ್ದು, ಇದಾದ ಬಳಿಕ ಸಾರ್ವಜನಿಕರಿಗೆ ಸಿಗ್ನಲ್‌ಗಳು ಲಭ್ಯವಾಗಲಿದೆ ಎಂದು ಇನ್‌ಸ್ಪೇನ್‌ನ ಮುಖ್ಯಸ್ಥ ಪವನ್ ಗೋಯೆಂಕಾ ಹೇಳಿದ್ದಾರೆ.
2025ರ ಬಳಿಕ ಪ್ರತೀ ವರ್ಷ 12ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಯನ್ನು ಭಾರತ ಹೊಂದಿದೆ. ಇದರಲ್ಲಿ 6 ಜಿಎಸ್‌ಎಲ್‌ವಿ ಉಡಾವಣೆಯಾಗಿರಲಿವೆ. ಭಾರತದಲ್ಲಿ ಬ್ಯಾಂಡ್-1 ನ್ಯಾವಿಗೇಶನ್ ವ್ಯವಸ್ಥೆ ಒದಗಿಸಲು 7 ಉಪಗ್ರಹಗಳ ಆವಶ್ಯಕತೆ ಇದೆ. ಈಗಾಗಲೇ 1 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಉಳಿದ 6 ಉಪಗ್ರಹಗಳನ್ನು ಶೀಘ್ರ ಉಡಾವಣೆ ಮಾಡುವ ಮೂಲಕ ಈ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತದ ವ್ಯವಸ್ಥೆ ಹೆಚ್ಚು ನಿಖರ: ಭಾರತದ ನ್ಯಾವಿಗೇಶನ್ ವ್ಯವಸ್ಥೆ, ಈಗಾಗಲೇ ಜಗತ್ತಿನಲ್ಲಿರುವ ಎಲ್ಲ ವ್ಯವಸ್ಥೆಗಳಿಗಿಂತ ಹೆಚ್ಚು ನಿಖರವಾಗಿರುತ್ತದೆ. 10 ಮೀ. ಅಂತರವನ್ನಷ್ಟೇ ಇದು ಹೊಂದಿರಲಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
U.P: ಪತ್ನಿ, ಮಕ್ಕಳ ಕೊಂದು ಸ್ಟೇಟಸ್ ಹಾಕಿದ!
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.