5 ವರ್ಷಗಳಲ್ಲಿ ಇಸ್ರೋಗೆ 1,245 ಕೋ.ರೂ.ಆದಾಯ
Team Udayavani, Dec 24, 2019, 6:10 AM IST
ಕಳೆದ ಐದು ವರ್ಷಗಳಲ್ಲಿ ಇಸ್ರೋ 26 ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಸುಮಾರು 1,245 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ.
2018-19ರಲ್ಲಿ ಹೆಚ್ಚು ಆದಾಯ
2018-19ರ ಆರ್ಥಿಕ ವರ್ಷದಲ್ಲಿ ವಾಣಿಜ್ಯ ಉಪಗ್ರಹಗಳ ಉಡಾವಣೆಯಿಂದ ಒಟ್ಟು 324.19 ಕೋಟಿ ರೂ.ಗಳಷ್ಟು ಆದಾಯ ಗಳಿಸಿದ್ದು, ಇದು ಕಳೆದ ಐದು ವರ್ಷಗಳಲ್ಲೇ ಗಳಿಸಿದ ಅತಿ ಹೆಚ್ಚು ಆದಾಯವಾಗಿದೆ.
10ಕ್ಕೂ ಹೆಚ್ಚು ದೇಶಗಳೊಂದಿಗೆ ಒಪ್ಪಂದ
ಕಳೆದ ಐದು ವರ್ಷಗಳಲ್ಲಿ ಯುಎಸ್‌ಎ, ಯುನೈಟೆಡ್ ಕಿಂಗ್‌ಡಮ…, ಜರ್ಮನಿ, ಕೆನಡಾ, ಸಿಂಗಾಪುರ, ನೆದರ್ಲೆಂಡ್, ಜಪಾನ್, ಮಲೇಷ್ಯಾ, ಅಲ್ಜೀರಿಯಾ ಮತ್ತು ಫ್ರಾ®Õ… ದೇಶಗಳೊಂದಿಗೆ ಇಸ್ರೋ ಒಪ್ಪಂದಗಳನ್ನು ಮಾಡಿಕೊಂಡಿದೆ.
319 ವಾಣಿಜ್ಯ ಉಪಗ್ರಹಗಳ ಉಡಾವಣೆ
ಇಲ್ಲಿಯವರೆಗೆ ಇಸ್ರೋ 33 ದೇಶಗಳ ಒಟ್ಟು 319 ವಾಣಿಜ್ಯ ಉಪಗ್ರಹಗಳನ್ನು ಉಡ್ಡಯನ ಮಾಡಿದ್ದು, ಅವುಗಳಲ್ಲಿ 233 ಅಮೆರಿಕದ ಉಪಗ್ರಹಗಳಾಗಿವೆ.
ಪಿಎಸ್‌ಎಲ್‌ವಿ ಮೂಲಕ ಹೆಚ್ಚು ಉಡಾವಣೆ
ಇಸ್ರೋದ ಎಲ್ಲ ವಾಣಿಜ್ಯ ಉಡಾವಣೆಗಳನ್ನು ಪಿಎಸ್‌ಎಲ್‌ವಿ ಮೂಲಕ ಮಾಡಲಾಗಿದೆ. ಈ ಮೂಲಕ ಸಣ್ಣ ಉಪಗ್ರಹಗಳಿಗೆ ರೈಡರ್‌ಶೇರ್ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿ ವಿಶ್ವಾಸಾರ್ಹತೆಯನ್ನು ಗಳಿಸಿದೆ.
130ರಿಂದ 200 ಕೋಟಿ
ಪಿಎಸ್‌ಎಲ್‌ವಿ ಮೂಲಕ ಉಡಾವಣೆಯಾಗುವ ಪ್ರತಿ ಉಪಗ್ರಹಕ್ಕೆ ತಗಲುವ ವೆಚ್ಚ.
ಒಮ್ಮೆಲೇ 104 ಉಪಗ್ರಹಗಳ ಉಡಾವಣೆ
2014ರಲ್ಲಿ ದೇಶೀಯವಾಗಿ ನಿರ್ಮಿಸಲಾದ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಅತಿ ಹೆಚ್ಚು ಉಪಗ್ರಹಗಳನ್ನು ಒಮ್ಮೆಲೇ ಬಾಹ್ಯಾಕಾಶಕ್ಕೆ ಉಡಾಯಿಸುವ ಮೂಲಕ ಇಸ್ರೋ ವಿಶ್ವ ದಾಖಲೆ ಮಾಡಿದೆ. ಇದರಲ್ಲಿ 101 ವಿದೇಶಿ ಉಪಗ್ರಹಗಳಿದ್ದವು.
ಶೇ.94ರಷ್ಟು ಯಶಸ್ವಿ
ಈಗ ಜಗತ್ತಿನ ವಿವಿಧ ರಾಷ್ಟ್ರಗಳು ತಮ್ಮ ಉಪಗ್ರಹಗಳ ಉಡಾವಣೆಗಾಗಿ ಇಸ್ರೋ ಸಹಾಯವನ್ನು ಪಡೆದು ಕೊಳ್ಳುತ್ತವೆ. ಕಾರಣ ಮಿತವ್ಯಯದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಕೂರಿಸುವ ಕೆಲಸ ಮಾಡುತ್ತಿದೆ. ಪಿಎಸ್‌ಎಲ್‌ವಿ ಮೂಲಕ ಉಪಗ್ರಹ ಉಡ್ಡಯನ ಶೇ.94ರಷ್ಟು ಯಶಸ್ವಿಯಾಗಿದೆ.
ವಾಣಿಜ್ಯ ಉಪಗ್ರಹಗಳ ಉಡಾವಣೆಯಿಂದ ಲಾಭ
ಪಿಎಸ್‌ಎಲ್‌ವಿಯ 50ನೇ ಯಶಸ್ವಿ ಉಡ್ಡಯನದೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಇತ್ತೀಚೆಗೆ ಅಪೂರ್ವ ಸಾಧನೆ ಮಾಡಿದೆ. ಇದರೊಂದಿಗೆ ವಾಣಿಜ್ಯ ಉಪಗ್ರಹ ಉಡಾವಣೆ ಮೂಲಕ ಸುಮಾರು 1,245 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ. ಈ ಹಿನ್ನೆಲೆಯಲ್ಲಿ ಅದರ ಸಾಧನೆಯ ಕುರಿತ ವಿವರಗಳು ಇಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.