ಅಂತರಿಕ್ಷದಲ್ಲಿ ಭಾರತದ ಮತ್ತೂಬ್ಬ ಗೂಢಚಾರಿ
ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಲಗ್ಗೆಯಿಟ್ಟ "ರಿಸ್ಯಾಟ್-2ಬಿ'
Team Udayavani, May 23, 2019, 6:00 AM IST
ಶ್ರೀಹರಿಕೋಟಾ: ಭಾರತೀಯ ಸೇನಾ ಪಡೆಗಳ ಕಾರ್ಯಾಚರಣೆಗಳಲ್ಲಿ ನೆರವಾಗುವ ಹಾಗೂ ಶತ್ರು ರಾಷ್ಟ್ರಗಳ ಮೇಲೆ ಗುಪ್ತಚರ ನಡೆಸುವ ಸಾಮರ್ಥ್ಯವುಳ್ಳ “ರಿಸ್ಯಾಟ್- 2ಬಿ’ ಉಪಗ್ರಹವನ್ನು, ಬುಧವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿತು.
ತಿರುಪತಿ ಸಮೀಪದ ಶ್ರೀಹರಿ ಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಮುಂಜಾನೆ 5:30ಕ್ಕೆ ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ ರಾಕೆಟ್, 615 ಕೆಜಿ ತೂಕವುಳ್ಳ ಈ ಉಪಗ್ರಹವನ್ನು ಹೊತೊಯ್ದಿತು. ಉಡಾವಣೆಯಾಗಿ 15 ನಿಮಿಷ, 30 ಸೆಕೆಂಡುಗಳ ಅನಂತರ ಭೂಮಿಯಿಂದ 557 ಕಿ.ಮೀ. ಎತ್ತರದಲ್ಲಿರುವ ಕಕ್ಷೆಯಲ್ಲಿ ಉಪಗ್ರಹ ಯಶಸ್ವಿಯಾಗಿ ಸೇರಿ ಕೊಂಡಿತು.
ಈ ಹಿಂದೆ, ರಿಸ್ಯಾಟ್-1, ರಿಸ್ಯಾಟ್-2 ಎಂಬ ಎರಡು ಗೂಢಾಚಾರಿ ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟಿತ್ತು. ಇತ್ತೀಚೆಗೆ, ಬಾಲಕೋಟ್ ದಾಳಿ ನಡೆದಾಗ ಅಲ್ಲಿ ದಾಳಿಯಿಂದ ಹಾನಿಗೀಡಾದ ಕಟ್ಟಡಗಳ ಚಿತ್ರಗಳನ್ನು ತೆಗೆಯುವಲ್ಲಿ ಈ ಉಪಗ್ರಹಗಳು ವಿಫಲವಾಗಿದ್ದವು. ಭೂಮಿಯ ಚಿತ್ರಗಳನ್ನು ಪಡೆಯಲೆಂದೇ ಹಾರಿಬಿಡಲಾಗಿರುವ ಕಾಟೋìಸ್ಯಾಟ್ ಉಪಗ್ರಹವೂ ಮೋಡ ಮುಚ್ಚಿದಾಗ ಸಮರ್ಪಕ ಚಿತ್ರಗಳನ್ನು ಕಳಿಸುವುದಿಲ್ಲ. ಈ ತಾಂತ್ರಿಕ ಹಿನ್ನಡೆಯಿಂದ ಹೊರ ಬರುವ ಉದ್ದೇಶದಿಂದಲೇ ರಿಸ್ಯಾಟ್-2ಬಿ ಉಡಾವಣೆ ಮಾಡಲಾಗಿದೆ. ಸೇನಾ ಕಾರ್ಯಾಚರಣೆ, ಗೂಢಚರ್ಯೆ ಜತೆಗೆ, ಕೃಷಿ, ಅರಣ್ಯ, ನೈಸರ್ಗಿಕ ಪ್ರಕೋಪ ನಿರ್ವಹಣೆಗಳಿಗೂ ಈ ಉಪಗ್ರಹ ಪ್ರಯೋಜನಕಾರಿ ಎಂದು ಇಸ್ರೋ ಹೇಳಿದೆ.
“ಚಂದ್ರಯಾನ’ ಅವಧಿ ಪ್ರಕಟ
ಇಸ್ರೋದ ಮಹತ್ವಾಕಾಂಕ್ಷೆಯ “ಚಂದ್ರಯಾನ-2′ ಯೋ ಜನೆ ಜುಲೈ 9ರಿಂದ 16ರೊಳಗೆ ಅನುಷ್ಠಾನಗೊಳ್ಳಲಿದ್ದು, ಭೂಮಿಯಿಂದ ಕಳಿಸಲಾದ ಉಪಗ್ರಹವು, ಸೆ. 6ರಂದು ಚಂದ್ರನ ಮೇಲ್ಮೆ„ ಮೇಲೆ ಇಳಿಯುವ ನಿರೀಕ್ಷೆಯಿದೆ.
ಇಂಧನ ಸ್ವಾವಲಂಬನೆ
ರಾಕೆಟ್‌ಗಳ ಇಂಧನವಾದ ದ್ರವರೂಪದ ಜಲಜನಕವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಉದ್ದೇಶ ದಿಂದ ನಿರ್ಮಿಸಲಾಗಿರುವ ಬೃಹತ್ ಟ್ಯಾಂಕ್‌ನ ಸಾಗಾಣಿ ಕೆಗೆ ಇಸ್ರೋ ಅಧ್ಯಕ್ಷ ಕೆ. ಶಿವನ್, ಬುಧವಾರ ಚಾಲನೆ ನೀಡಿದರು. 120 ಕಿ.ಲೀ.ಸಾಮರ್ಥ್ಯದ ಈ ಟ್ಯಾಂಕನ್ನು ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ವಿಆರ್‌ವಿ ಪೆಸಿಫಿಕ್ ತಯಾರಿಕಾ ಘಟಕದಿಂದ ಶ್ರೀಹರಿಕೋಟಾಕ್ಕೆ ರವಾನಿಸಲಾ ಯಿತು. “ಮೇಕ್ ಇನ್ ಇಂಡಿಯಾ’ ಯೋಜನೆಯಡಿ, ಈ ಟ್ಯಾಂಕ್ ನಿರ್ಮಿಸಲಾಗಿದೆ. ಈ ಮೂಲಕ, ರಾಕೆಟ್ ಇಂಧನ ಸ್ವಾವಲಂಬನೆಯಲ್ಲೂ ಭಾರತ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.
557 ಕಿ.ಮೀ- ರಿಸ್ಯಾಟ್ 2 ಬಿ ಸೇರಿಕೊಂಡ ಕಕ್ಷೆಗೂ ಭೂಮಿಗೂ ನಡುವಿನ ದೂರ
615 ಕೆ.ಜಿ. – ಉಪಗ್ರಹದ ತೂಕ
ಗೂಢಚರ್ಯೆ, ಕೃಷಿ, ಅರಣ್ಯ, ನೈಸರ್ಗಿಕ ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಬಳಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.