“ಛೋಟಾ ಭೀಮ್’ ಸೇರಿ 31 ಉಪಗ್ರಹ ನಭಕ್ಕೆ
Team Udayavani, Nov 30, 2018, 6:00 AM IST
ಶ್ರೀಹರಿಕೋಟಾ: ಇಸ್ರೋ ಅಭಿವೃದ್ಧಿಪಡಿಸಿದ ಭೂ ಪರಿ ವೀಕ್ಷಣೆ ಉಪಗ್ರಹ ಸೇರಿದಂತೆ ವಿದೇಶದ 30 ಉಪಗ್ರಹ ಗಳನ್ನು ಗುರುವಾರ ಶ್ರೀಹರಿಕೋಟಾ ಉಡಾವಣೆ ಕೇಂದ್ರ ದಿಂದ ಉಡಾವಣೆ ಮಾಡಲಾಗಿದೆ. ಪಿಎಸ್‌ಎಲ್‌ವಿ ಸಿ43 ರಾಕೆಟ್ ಬಳಸಿ ಈ ಉಡಾವಣೆ ನಡೆದಿದ್ದು, ಒಟ್ಟು ಎಂಟು ದೇಶಗಳ ಉಪಗ್ರಹಗಳು ಕಕ್ಷೆ ಸೇರಿವೆ. ಬೆಳಗ್ಗೆ 9.57ಕ್ಕೆ ಸರಿಯಾಗಿ ರಾಕೆಟ್ ಉಡಾವಣೆಗೊಂಡಿದೆ. ಭಾರತದ ಎಚ್‌ವೈಎಸ್‌ಐಎಸ್ (ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ಸೆಟಲೈಟ್) ಎನ್ನುವುದು ಹೈ ರೆಸೊಲ್ಯೂಷನ್ ಭೂ ಪರಿ ವೀಕ್ಷಣೆ ಉಪಗ್ರಹವಾಗಿದ್ದು, ಇದನ್ನು ಅನೌಪಚಾರಿಕವಾಗಿ “ಛೋಟಾ ಭೀಮ್) ಎಂದೂ ಕರೆಯಲಾಗುತ್ತಿದೆ.
ಬೃಹತ್ ಜಿಸ್ಯಾಟ್ 11 ಉಡಾವಣೆ ಡಿ. 5 ರಂದು: ಭಾರತದ ಅತ್ಯಂತ ಭಾರದ ಉಪಗ್ರಹ ಜಿಸ್ಯಾಟ್ 11 ಅನ್ನು ಡಿ.5ರಂದು ಉಡಾವಣೆ ಮಾಡಲಾಗುತ್ತದೆ. ಫ್ರೆಂಚ್ ಗಯಾನ ದಿಂದ ಅಂದು ರಾತ್ರಿ 2.08 ಕ್ಕೆ ಉಡಾವಣೆ ಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಹೇಳಿದ್ದಾರೆ. ಮುಂದಿನ ತಿಂಗಳು ಜಿಎಸ್ಯಾಟ್ 7ಎ ಕೂಡ ಉಡಾವಣೆ ಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹಲವು ಉಡಾವಣೆ ಯೋಜನೆಗಳು ಜಾರಿಯಲ್ಲಿವೆ ಎಂದು ಸಿವನ್ ಹೇಳಿದ್ದಾರೆ. ಮುಂದಿನ ವರ್ಷ ಚಂದ್ರಯಾನ 2 ಕೂಡ ನಡೆಯಲಿದೆ.
ಭೂಪರಿವೀಕ್ಷಣೆ ಉಪಗ್ರಹದ ಉಪಯೋಗಗಳು
ಕೃಷಿ, ಅರಣ್ಯ, ಮಣ್ಣು ಸಮೀಕ್ಷೆ, ಕರಾವಳಿ ವಲಯ ಅಧ್ಯಯನ
ಒಳನಾಡು ನೀರು ಅಧ್ಯಯನ, ಪರಿಸರ ಹಾಗೂ ಮಾಲಿನ್ಯದ ಮೇಲೆ ನಿಗಾ
5 ವರ್ಷಗಳ ಬಾಳಿಕೆ ಅವಧಿ
ಭೂಮಿಯ ಸಮೀಪದ ಚಿತ್ರಣ ಪಡೆಯಲು ಸಾಧ್ಯ
ಅತ್ಯಾಧುನಿಕ ಹೈಪರ್‌ಸ್ಪೆಕ್ಟರಲ್ ಉಪಗ್ರಹದಲ್ಲಿದೆ ಇಮೇಜಿಂಗ್ ಡಿಟೆಕ್ಟರ್ ಚಿಪ್
ಉಪಗ್ರಹಕ್ಕೆ ಅಗತ್ಯವಾದ ಚಿಪ್ ದೇಶದಲ್ಲೇ ತಯಾರಿಕೆ
ಈ ಅದ್ಭುತ ಸಾಧನೆಗೈದ ಇಸ್ರೋ ತಂಡಕ್ಕೆ ನನ್ನ ಅಭಿನಂದನೆ ಗಳು. ದೇಶದಲ್ಲೇ ಇರುವಂಥ ಸೌಲಭ್ಯ ಬಳಸಿ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯನ್ನು ಎಷ್ಟು ಸಾಧ್ಯವೋ ಅಷ್ಟು ದೇಶೀಯವಾಗಿಸಲು ಪ್ರಯತ್ನಿಸುತ್ತಿದ್ದೇವೆ.
ಕೆ.ಸಿವನ್, ಇಸ್ರೋ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.