ಮಾರ್ಚ್‌ನಲ್ಲಿ ಸಾರ್ಕ್ ಉಪಗ್ರಹ, ಎಪ್ರಿಲ್‌ನಲ್ಲಿ GSAT-19: ಇಸ್ರೋ
Team Udayavani, Feb 15, 2017, 3:18 PM IST
ಶ್ರೀಹರಿಕೋಟ, ಆಂಧ್ರ ಪ್ರದೇಶ : ಈ ವರ್ಷ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಎರಡು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲು ಉದ್ದೇಶಿಸಿದೆ. ಇವುಗಳಲ್ಲಿ ಒಂದು ಸಾರ್ಕ್ ಸದಸ್ಯ ರಾಷ್ಟ್ರಗಳ ಉಪಯೋಗಕ್ಕೆ ಮೀಸಲಿರುತ್ತದೆ ಎಂದು ಇಸ್ರೋ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಇಂದಿಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಜಿಎಸ್‌ಎಲ್‌ವಿ ಮಾರ್ಕ್ 2 ಸಾರ್ಕ್ ಉಪಗ್ರಹವನ್ನು ಒಯ್ಯಲಿದೆ; ಜಿಎಸ್‌ಎಲ್‌ವಿ ಮಾರ್ಕ್ 3 ಜಿಸ್ಯಾಟ್-19 ಉಪಗ್ರಹವನ್ನು ಒಯ್ಯಲಿದೆ ಎಂದವರು ಹೇಳಿದರು.
2014ರ ನವೆಂಬರ್‌ನಲ್ಲಿ ನವೆಂಬರ್‌ನಲ್ಲಿ ನೇಪಾಲದಲ್ಲಿ ನಡೆದಿದ್ದ ಸಾರ್ಕ್ ಸಮ್ಮೇಳನದಲ್ಲಿ ಭಾರತವು ಸಾರ್ಕ್ ಸದಸ್ಯ ರಾಷ್ಟ್ರಗಳ ಉಪಯೋಗಕ್ಕಾಗಿ ಸಾರ್ಕ್ ಉಪಗ್ರಹವನ್ನು ಕಕ್ಷೆಗೆ ಕಳುಹಿಸುವ ಯೋಜನೆ ಹೊಂದಿರುವುದಾಗಿ ಪ್ರಕಟಿಸಿದ್ದರು.
ಪಾಕಿಸ್ಥಾನವು ಈಗ ಈ ಯೋಜನೆಯಿಂದ ಹೊರಗುಳಿದಿರವುದರಿಂದ ಸಾರ್ಕ್ ಉಪಗ್ರಹಕ್ಕೆ ದಕ್ಷಿಣ ಏಶ್ಯ ಉಪಗ್ರಹವೆಂದು ಕರೆಯಲಾಗುತ್ತಿದೆ.
ಪಿಎಸ್ ಎಲ್ ವಿ-ಸಿ37 ಉಪಗ್ರಹ ವಾಹಕದ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಏಕಕಾಲಕ್ಕೆ ಅಮೆರಿಕದ 96, ಭಾರತದ 4 ಸೇರಿದಂತೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.