ಸರ್ಜಿಕಲ್ ದಾಳಿಗೆ ಇನ್ನು ಸಿಗಲಿದೆ ಉಪಗ್ರಹ ಬಲ
Team Udayavani, Jun 23, 2017, 3:45 AM IST
ಹೈದರಾಬಾದ್/ಚೆನ್ನೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಸರ್ಜಿಕಲ್ ದಾಳಿ ನಡೆಸಿತ್ತು. ಈ ಮೂಲಕ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿ 38 ಮಂದಿ ಯನ್ನು ಕೊಂದಿತ್ತು ನಮ್ಮ ಸೇನೆ. ಅದಕ್ಕೆ ನೆರವಾದದ್ದು ಇಸ್ರೋದ ಕಾಟೋìಸ್ಯಾಟ್ ಉಪಗ್ರಹ.
ಮುಂದಿನ ದಿನಗಳಲ್ಲಿ ಇಂಥ ದಾಳಿಗಳನ್ನು ಕರಾರುವಾಕ್ಕಾಗಿ ನಡೆ ಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಕಾಟೋìಸ್ಯಾಟ್ ಸರಣಿಯ 3ನೇ ಉಪಗ್ರಹವನ್ನು ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುತ್ತದೆ. ಈ ಮೂಲಕ ಗಗನದಿಂದಲೇ ವೈರಿಗಳ ಬಗ್ಗೆ ನಿಖರ ನಿಗಾಕ್ಕೆ ವೈಜ್ಞಾನಿಕ ನೆರವೂ ಇನ್ನು ಭರಪೂರ ಸಿಗಲಿದೆ. ಅಂದ ಹಾಗೆ ಕಾಟೋìಸ್ಯಾಟ್ ಸರಣಿಯ 3 ನೇ ಉಪಗ್ರಹದ ಹೆಗ್ಗಳಿಕೆಯೇನೆಂದರೆ ಸಣ್ಣ ಚುಕ್ಕಿಯಂತಿರುವ ವಸ್ತು ಮತ್ತು ಅದಕ್ಕಿಂತ ಸಣ್ಣದಾಗಿರುವ ವಸ್ತು(0.6ಗಿ0.6ಮೀ) ವನ್ನು ನಿಖರವಾಗಿ ಕಂಡುಹಿಡಿಯುತ್ತದೆ.
ಇನ್ನು ಇಸ್ರೋದ ಉಪಗ್ರಹ ವಾಹಕ ನೌಕೆ ಪಿಎಸ್‌ಎಲ್‌ವಿ-ಸಿ38ಕ್ಕೆ ಇದು ಬರೋಬ್ಬರಿ 40ನೇ ಯಾನವೂ ಹೌದು. ಹೆಸರು ಬಹಿರಂಗಪಡಿಸಲಿಚ್ಛಿಸದ ಇಸ್ರೋ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ, ಶುಕ್ರವಾರ ಬೆಳಗ್ಗೆ 9.20ಕ್ಕೆ ನಭಕ್ಕೆ ಚಿಮ್ಮಲಿರುವ ಉಪಗ್ರಹ ಕಾರ್ಯಾರಂಭ ಗೊಂಡ ಕೂಡಲೇ ರಕ್ಷಣಾ ನಿಗಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಮತ್ತು ಅದನ್ನು ಇಲಾಖೆಗೇ ಹಸ್ತಾಂತರಿ ಸಲಾಗುತ್ತದೆ. ಉಗ್ರರ ಬಂಕರ್ ಮತ್ತು ಕ್ಯಾಂಪ್‌ಗ್ಳನ್ನು ಕರಾರುವಾಕ್ಕಾಗಿ ಗುರುತಿಸಲು ಅದು ನೆರವಾಗುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ಸೇನಾನೆಲೆ ಸ್ಥಾಪಿಸಲು ಅನುಕೂ ಲವಾಗುತ್ತದೆ ಎಂದಿದ್ದಾರೆ. ಎಲ್ಲಿಯ ಫೋಟೋ ಬೇಕಾ ಗಿದೆಯೋ ಅದನ್ನು ಪಡೆಯಲು ಮುಂಚಿತ ಪ್ರೋಗ್ರಾ ಮಿಂಗ್ ಮಾಡಿರಬೇಕು. ಇದೇ ವೇಳೆ 14 ದೇಶಗಳ 30 ಉಪಗ್ರಹಗಳೂ ಶುಕ್ರವಾರ ಉಡಾವಣೆಯಾಗಲಿವೆ.
ವಿಶೇಷತೆಗಳೇನು?
ಪಿಎಸ್‌ಎಲ್‌ಸಿ- ಸಿ38ಕ್ಕೆ 40ನೇ ಯಾನ
03- ಕಾಟೋìಸ್ಯಾಟ್ ಸರಣಿಯ ಉಪಗ್ರಹ
712 ಕೆಜಿ- ಉಪಗ್ರಹ ತೂಕ
30- ಇತರ ಉಪಗ್ರಹಗಳು
243 ಕೆಜಿ- ಅವುಗಳ ತೂಕ
14- ಇತರ ರಾಷ್ಟ್ರಗಳು- ಆಸ್ಟ್ರಿಯಾ, ಬೆಲ್ಜಿಯಂ, ಚಿಲಿ, ಚೆಕ್ ಗಣರಾಜ್ಯ, ಫಿನ್‌ಲಾÂಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲಿಥೂನಿಯಾ, ಸ್ಲೊವಾಕಿಯಾ, ಯು.ಕೆ, ಅಮೆರಿಕ
505- ಕೇಂದ್ರದಿಂದ ಕಕ್ಷೆಗಿರುವ ದೂರ (ಸನ್ ಸಿಂಕ್ರೊನಸ್ ಆರ್ಬಿಟ್)
09.20- ಉಪಗ್ರಹ ನಭಕ್ಕೆ ನೆಗೆಯುವ ಸಮಯ
ಅನುಕೂಲತೆಗಳೇನು?
– ಉಗ್ರರ ಶಿಬಿರಗಳು, ಬಂಕರ್‌ಗಳ ಪತ್ತೆಗೆ ಅನುಕೂಲ
– ಗಗನದಿಂದಲೇ ವೈರಿಗಳ ಮೇಲೆ ನಿಗಾ
– ಎಲ್ಲೆಲ್ಲಿ ಸೇನಾನೆಲೆಗಳನ್ನು ಸ್ಥಾಪಿಸಬೇಕೆಂಬ ಬಗ್ಗೆ ಫೋಟೋ ಮಾಹಿತಿ
ಉಪಗ್ರಹ ಉಡಾವಣೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡು ಅಂತಿಮ ಹಂತ ಕ್ಕಾಗಿ ಕಾಯುತ್ತಿದ್ದೇವೆ. ಮಂಗಳಯಾನ 1 ಸಾವಿರ ದಿನ ಪೂರ್ತಿಗೊಳಿಸಿದ್ದು ನಮಗೆ ಹೆಮ್ಮೆಯೇ ಸರಿ.
– ಕಿರಣ್‌ಕುಮಾರ್, ಇಸ್ರೋ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.