ಇಸ್ರೋಗೆ ಬಿಡುವೇ ಇಲ್ಲ
Team Udayavani, Sep 4, 2018, 6:00 AM IST
ಹೊಸದಿಲ್ಲಿ: ಐದು ತಿಂಗಳ ವಿರಾಮದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆ.15ರಿಂದ 7 ತಿಂಗಳ ಕಾಲ ಬಿಡುವಿಲ್ಲದ ಉಪಗ್ರಹ ಉಡಾವಣೆಗಳಲ್ಲಿ ತೊಡಗಿಸಿಕೊಳ್ಳಲಿದೆ. ಅದರಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಸೇರಿದೆ. ಹತ್ತು ಉಪಗ್ರಹ ಉಡಾವಣೆ, 9 ಉಪಗ್ರಹ ವಾಹಕಗಳು ನಡೆಯಲಿವೆ. ಈ ಪೈಕಿ ಸೆ.15ರಂದು ಉಪಗ್ರಹ ವಾಹಕ ನೌಕೆ ಪಿಎಸ್‌ಎಲ್‌ವಿ-ಸಿ4ನ ಸಂಪೂರ್ಣ ವಾಣಿಜ್ಯಿಕ ಉಡಾವಣೆ ನಡೆಯ ಲಿದೆ. ಅದರಲ್ಲಿ ಯು.ಕೆ.ಯ ನೊವಸಾರ್ ಮತ್ತು ಎಸ್1-4 ಎಂಬ ಸ್ಯಾಟಲೈಟ್‌ಗಳನ್ನು ಮುಖ್ಯ ಪೇಲೋಡ್‌ಗಳಲ್ಲಿಯೇ ಅಳವಡಿಸಿ ನಭಕ್ಕೆ ಕಳುಹಿಸಲಾಗುತ್ತದೆ.
ಮುಂದಿನ ತಿಂಗಳು ಜಿಎಸ್‌ಎಲ್‌ವಿ ಎಂ.ಕೆ 2- ಡಿ2 ಅನ್ನು ಉಡಾಯಿಸಲಾಗುತ್ತದೆ. ಅದಕ್ಕೆ “ಬಾಹುಬಲಿ’ ಎಂದು ಹೆಸರಿಸಲಾಗಿದೆ. ಅದು ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್‌ನ 2ನೇ ಉಡಾವಣೆಯಾಗಲಿದೆ. ಮುಂದಿನ ತಿಂಗಳು ಪಿಎಸ್‌ಎಲ್‌ವಿ ಸಿ43, ನವೆಂಬರ್‌ನಲ್ಲಿ ಐಎಎಫ್ಗೆ ಅನುಕೂಲವಾಗುವ ಜಿಸ್ಯಾಟ್ 7ಎ ಸ್ಯಾಟಲೈಟ್, ನ.30ರಂದು ಜಿಸ್ಯಾಟ್ 11 ಉಪಗ್ರಹ ಉಡಾಯಿಸಲಾಗುತ್ತದೆ. ಚಂದ್ರಯಾನ-2 2019ರ ಜ.3ರಿಂದ ಫೆ.16ರ ನಡುವೆ ನಡೆಯಲಿದೆ. ಚೀನಾ, ಅಮೆರಿಕ, ರಷ್ಯಾ, ಇಸ್ರೇಲ್ ಅದೇ ಸಮಯದಲ್ಲಿ ಚಂದ್ರನಲ್ಲಿಗೆ ಉಪಗ್ರಹ ಉಡಾವಣೆ ನಡೆಸುತ್ತಿವೆ. ಫೆಬ್ರವರಿ, ಮಾರ್ಚ್‌ನಲ್ಲಿ ಕಾರ್ಟೊ ಸ್ಯಾಟ್, ರಿಯಾಸ್ಯಾಟ್-2ಬಿಆರ್1 ಸ್ಯಾಟಲೈಟ್ ನಭಕ್ಕೆ ನೆಗೆಯಲಿವೆ.
ಭಾರತಕ್ಕೆ ನೆರವು: ಆಕ್ಷೇಪ
ಲಂಡನ್: ಭಾರತಕ್ಕೆ ಬ್ರಿಟನ್ ನೀಡುತ್ತಿರುವ ವಾರ್ಷಿಕ 600 ಕೋಟಿ ರೂ. ಅನುದಾನದ ಬಗ್ಗೆ ಇಂಗ್ಲೆಂಡ್ ಸಂಸದರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ಗೆ ಹಣದ ಅಗತ್ಯವಿರುವಾಗ ಚಂದ್ರಯಾನ ನಡೆಸುವ ಸಾಮರ್ಥ್ಯ ಇರುವ ದೇಶಕ್ಕೆ ಯಾಕೆ ಅನುದಾನ ನೀಡಬೇಕು ಎಂದು ಸಂಸದರು ಆಕ್ಷೇಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.