ಲೆವೆಲ್ ಕ್ರಾಸಿಂಗ್ನಲ್ಲಿ ಇಸ್ರೋ ಎಚ್ಚರಿಕೆ ವ್ಯವಸ್ಥೆ
Team Udayavani, Jun 26, 2017, 3:45 AM IST
ಹೊಸದಿಲ್ಲಿ: ಮಾನವ ರಹಿತ ರೈಲ್ವೇ ಲೆವೆಲ್ಕ್ರಾಸಿಂಗ್ಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಾಗಿದೆ.
ಈ ನಿಟ್ಟಿನಲ್ಲಿ ರೈಲ್ವೆ ಹಳಿ ದಾಟುವವರನ್ನು ಎಚ್ಚರಿಸಲು ಅದು ಹೊಸ ಮಾದರಿಯ ವ್ಯವಸ್ಥೆಯೊಂದನ್ನು ತಂದಿದೆ. ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಮುಂಬೈ ಮತ್ತು ಗುವಾಹಟಿ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಅಳವಡಿಸಲಾಗುತ್ತಿದೆ. ಮುನ್ನೆಚ್ಚರಿಕೆ ವ್ಯವಸ್ಥೆಯ ಈ ಸಾಧನಗಳಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ ಇಂಟೆಗ್ರೇಟೆಡ್ ಚಿಪ್ಗ್ಳಿದ್ದು, ಅವುಗಳನ್ನು ರೈಲಿ® ಎಂಜಿನ್ ಭಾಗದಲ್ಲಿ ಅಳವಡಿಸಲಾಗುತ್ತದೆ.
ರೈಲು ಲೆವೆಲ್ ಕ್ರಾಸಿಂಗ್ಗೆ ಬರುತ್ತಿದ್ದಂತೆಯೇ 500 ಮೀ. ಮೊದಲು, ಅಲ್ಲಿ ಅಳವಡಿಸಿರುವ ಸೈರನ್ ಮೊಳಗುವಂತೆ ಮಾಡುತ್ತದೆ. ಇದರಿಂದಾಗಿ ರೈಲು ಬರುವುದು ಮುಂಚಿತವಾಗಿಯೇ ತಿಳಿಯುತ್ತದೆ. ಸದ್ಯ ಪ್ರಾಯೋಗಿಕ ಮಾರ್ಗದಲ್ಲಿ 20 ಕಡೆ ಸೈರನ್ ಅಳವಡಿಸಲಾಗಿದೆ. ರೈಲು ಹತ್ತಿರ ಬರುತ್ತಿದ್ದಂತೆಯೇ ಶಬ್ದ ಜೋರಾಗುತ್ತಾ ಹೋಗುತ್ತದೆ. ಈ ವ್ಯವಸ್ಥೆ ಉಪಗ್ರಹ ಆಧಾರಿತವಾಗಿದ್ದು, ರೈಲು ಚಾಲಕನಿಗೂ ಎಚ್ಚರಿಕೆ ರವಾನಿಸುತ್ತದೆ. ದೇಶಾದ್ಯಂತ 10 ಸಾವಿರ ಲೆವೆಲ್ ಕ್ರಾಸಿಂಗ್ಗಳಿದ್ದು, ಶೇ.40ರಷ್ಟು ರೈಲು ಅಪಘಾತಗಳು ಇಲ್ಲೇ ಸಂಭವಿಸುತ್ತವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.