![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
Team Udayavani, Jan 29, 2025, 11:40 PM IST
ಶ್ರೀಹರಿಕೋಟಾ: ಬುಧವಾರ ಬೆಳಗ್ಗೆ 100ನೇ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.
ನ್ಯಾವಿಗೇಶನ್ ಉಪಗ್ರಹ ಎನ್‌ವಿಎಸ್-02 ಅನ್ನು ಹೊತ್ತ, 50.9 ಮೀಟರ್ ಎತ್ತರದ ಜಿಎಸ್‌ಎಲ್‌ವಿ- ಎಫ್ 15 ರಾಕೆಟ್ ಬೆಳಗ್ಗೆ 6.23ಕ್ಕೆ ನಭಕ್ಕೆ ಚಿಮ್ಮಿತು. ನೂತನ ಅಧ್ಯಕ್ಷ ವಿ. ನಾರಾಯಣನ್ ಅವರ ನೇತೃತ್ವದಲ್ಲಿ ನಡೆದ ಮೊದಲ ಯಶಸ್ವಿ ಉಡಾವಣೆ ಇದಾಗಿದೆ. 19 ನಿಮಿಷಗಳ ಕಾಲ ಕತ್ತಲೆ ಮತ್ತು ಮೋಡ ಮುಸುಕಿದ ವಾತಾವಾರಣದಲ್ಲಿ ಪ್ರಯಾಣಿಸಿದ ರಾಕೆಟ್, ಬಳಿಕ ನಿಗದಿತ ಕಕ್ಷೆಗೆ ಸೇರ್ಪಡೆಗೊಂಡಿತು.
ಉಪಗ್ರಹದ ವೈಶಿಷ್ಟ್ಯ: ಬುಧವಾರ ಉಡಾವಣೆಯಾದ ಉಪಗ್ರಹವು ನಾವಿಕ್ ಸರಣಿಯ 2ನೇ ಉಪಗ್ರಹವಾಗಿದೆ. ಎನ್‌ವಿಸ್-02 ಉಪಗ್ರಹದ ಪ್ರಮುಖ ಅನ್ವಯಕಗಳಿಂದ ಭೂ ಮಂಡಲ, ವೈಮಾನಿಕ ಮತ್ತು ಸಮುದ್ರ ದಿಕ್ಸೂಚಿ, ಫ್ಲೀಟ್ ನಿರ್ವಹಣೆ, ಮೊಬೈಲ್ ಸಾಧನಗಳಲ್ಲಿ ಸ್ಥಳ ಆಧಾರಿತ ಸೇವೆಗಳು, ಉಪಗ್ರಹಗಳಿಗೆ ಕಕ್ಷೆಯ ನಿರ್ಣಯ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ಸೇವೆಗೆ ನೆರವು ದೊರೆಯಲಿದೆ. ಎನ್‌ವಿಎಸ್-02 ಉಪಗ್ರಹವನ್ನು ಬೆಂಗಳೂರು ಮೂಲದ ಯು.ಆರ್.ರಾವ್ ಉಪ ಗ್ರಹ ಕೇಂದ್ರದಲ್ಲಿ ತಯಾರಿಸಲಾಗಿದೆ. ಇದು ಒಟ್ಟು 2,250 ಕೆಜಿ ತೂಕ ಹೊಂದಿದ್ದು, ಎಲ್1, ಎಲ್5 ಮತ್ತು ಎಸ್ ಬಾಂಡ್ ಹಾಗೂ ಟ್ರೈ- ಬಾಂಡ್ ಆ್ಯಂಟೇನಾ ಒಳಗೊಂಡಿದೆ.
ಈವರೆಗೆ 548 ಉಪಗ್ರಹ ಉಡಾವಣೆ
ಬುಧವಾರ ಯಶಸ್ವಿಯಾಗಿ ಉಡಾವಣೆಯಾದ ಉಪಗ್ರಹ ಸೇರಿದಂತೆ ಈವರೆಗೆ ಇಸ್ರೋ 548 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 433 ವಿದೇಶಿ ಉಪಗ್ರಹಳ 23 ಪೇಲೋಡ್ ಸೇರಿದಂತೆ ಒಟ್ಟು 120 ಟನ್ ಪೇಲೋಡ್ ಉಡಾವಣೆ ಮಾಡಿದ್ದೇವೆ ಎಂದು ವಿ.ನಾರಾಯಣನ್ ತಿಳಿಸಿದ್ದಾರೆ.
5 ವರ್ಷದಲ್ಲಿ 200ನೇ ಉಡಾವಣೆ: ಇಸ್ರೋ
ಇಸ್ರೋ 100 ಉಡಾವಣೆಗಳಿಗೆ 46 ವರ್ಷಗಳಷ್ಟು ದೀರ್ಘ ಸಮಯವನ್ನು ತೆಗೆದುಕೊಂಡಿರಬಹುದು. ಆದರೆ ಅರ್ಧ ದಶಕದಲ್ಲೇ ಮತ್ತೆ 100 ಉಡಾವಣೆಗಳನ್ನು ಕೈಗೊಳ್ಳುವ ಆತ್ಮವಿಶ್ವಾಸ ಹೊಂದಿದೆ. ಬುಧವಾರ ಇಸ್ರೋದ 100ನೇ ಉಡಾವಣೆ ನೇತೃತ್ವ ವಹಿಸಿದ್ದ ಅಧ್ಯಕ್ಷ ವಿ.ನಾರಾಯಣನ್ ಅವರು ಮುಂದಿನ 5 ವರ್ಷಗಳಲ್ಲಿ 200ನೇ ಉಡಾವಣೆ ಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಉಪಗ್ರಹಗಳ ಬಿಡಿ ಭಾಗಗಳನ್ನು ಸೈಕಲ್ ಹಾಗೂ ಚಕ್ಕಡಿ ಮೂಲಕ ಸಾರಿಗೆ ಮಾಡುವ ಕಾಲದಿಂದ ಈಗ ಜಗತ್ತಿನಲ್ಲಿ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದಿದೆ.
You seem to have an Ad Blocker on.
To continue reading, please turn it off or whitelist Udayavani.