ಬಾಹ್ಯಾಕಾಶದಲ್ಲಿ ಭಾರತ- ರಷ್ಯಾ ಉಪಗ್ರಹ ಮುಖಾಮುಖಿ: ಅಲ್ಪ ಅಂತರದಲ್ಲಿ ತಪ್ಪಿದ ಘರ್ಷಣೆ !
Team Udayavani, Nov 29, 2020, 12:55 PM IST
ನವದೆಹಲಿ: ಭಾರತ ಮತ್ತು ರಷ್ಯಾದ ಉಪಗ್ರಹಗಳು ಶುಕ್ರವಾರ (ನ.29) ಬಾಹ್ಯಾಕಾಶದಲ್ಲಿ ಮುಖಾಮುಖಿಯಾದ ಘಟನೆ ನಡೆದಿದ್ದು, ಅಲ್ಪ ಅಂತರದಲ್ಲಿ, ಘರ್ಷಣೆಯನ್ನು ತಪ್ಪಿಸಲಾಗಿದೆ ಎಂದು ವರದಿಯಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ರಿಮೋಟ್ ಸೆನ್ಸಿಂಗ್ ಉಪಗ್ರಹವು, ರಷ್ಯಾದ ಭೂ ವೀಕ್ಷಣಾ ಉಪಗ್ರಹ ‘ಕನೋಪಸ್-ವಿ’ ಗೆ ಅಪಾಯಕಾರಿಯಾಗಿ ಸಮೀಪಕ್ಕೆ ಬಂದಿದ್ದು , ಕೂಡಲೇ ನಡೆಯಬಹುದಾದ ಭಾರೀ ಘರ್ಷಣೆಯನ್ನು ತಪ್ಪಿಸಲಾಗಿದೆ. ಈ ಘಟನೆಯು ಭೂಮಿಯ ಸಮೀಪ ಕಕ್ಷೆಯಲ್ಲಿ ಸಂಭವಿಸಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ರಷ್ಯಾದ ಬಾಹ್ಯಕಾಶ ಸಂಸ್ಥೆಯಾದ ರೋಸ್ಕೋಸ್ ಮೊಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತದ ಉಪಗ್ರಹವು ರಷ್ಯಾದ ಸ್ಯಾಟಿಲೈಟ್ ಗೆ 224 ಮೀಟರ್ ನಷ್ಟು ಸಮೀಪ ಬಂದಿದ್ದು, ಕೂಡಲೇ ನಡೆಯಬಹುದಾಗಿದ್ದ ಘರ್ಷಣೆಯನ್ನು ತಪ್ಪಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಲವ್ ಜಿಹಾದ್ ಕಾಯ್ದೆ ತರುವಮೊದಲು ಯಾವ ನಾಯಕರ ಮಕ್ಕಳುಯಾರನ್ನು ಲವ್ ಮಾಡಿದ್ದಾರೆ ನೋಡಲಿ:ಡಿಕೆಶಿ
ಈ ಕುರಿತು ಪ್ರತಿಕ್ರಿಯೆ ನೀಡಿದ ಇಸ್ರೋ, ರಷ್ಯಾದ ಉಪಗ್ರಹವು ಸುಮಾರು 420 ಮೀಟರ್ ದೂರದಲ್ಲಿತ್ತು. ಕಳೆದ 4 ದಿನಗಳಿಂದ ಇದನ್ನು ನಿರಂತರವಾಗಿ ಪರಿಶೀಲನೆ ಮಾಡಲಾಗುತ್ತಿತ್ತು. 150 ಮೀಟರ್ ಸಮೀಪಕ್ಕೆ ಬಂದಿದ್ದರೇ ಮಾತ್ರ ಅಪಾಯಕಾರಿಯಾಗಿ ಪರಣಮಿಸುವ ಸಾಧ್ಯತೆಯಿತ್ತು ಎಂದು ತಿಳಿಸಿದೆ.
ಬಾಹ್ಯಾಕಾಶದಲ್ಲಿ ಈ ರೀತಿಯ ವಿದ್ಯಾಮಾನ ಜರಗುವುದು ಸಾಮಾನ್ಯ. ಸಾವಿರಾರು ಉಪಗ್ರಹಗಳು ಇರುವ ಸಂದರ್ಭದಲ್ಲಿ ಎದುರುಬದುರಾಗುವುದು ನಿರೀಕ್ಷಿತ. ಇದೀಗ ಎರಡು ಬಾಹ್ಯಾಕಾಶ ಸಂಸ್ಥೆಗಳು ನಡೆಯಬಹುದಾಗಿದ್ದ ಘರ್ಷಣೆಯನ್ನು ತಪ್ಪಿಸಿವೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.