ಚಂದ್ರನ ಮಡಿಲಲ್ಲಿ ಜಲಮೂಲ ರುಜುವಾತು
Team Udayavani, Aug 12, 2021, 7:00 PM IST
ಚಂದ್ರನಲ್ಲಿ ಇರಬಹುದಾದ ನೀರನ್ನು ಪತ್ತೆ ಹಚ್ಚುವ ಸಲುವಾಗಿಯೇ ಇಸ್ರೋ 2019ರಲ್ಲಿ ಅನುಷ್ಠಾನಗೊಳಿಸಿದ್ದ “ಚಂದ್ರಯಾನ-2′ ತನ್ನ ಸಾರ್ಥಕತೆ ಮೆರೆದಿದೆ.
ಚಂದ್ರನಲ್ಲಿ ನೀರಿನ ಅಂಶವಿರುವುದನ್ನು ಚಂದ್ರಯಾನ-2ರ ಭಾಗವಾಗಿದ್ದ ಆರ್ಬಿಟರ್ ಪತ್ತೆ ಹಚ್ಚಿದೆ. 2019ರ ಜು. 22ರಂದು “ಚಂದ್ರಯಾನ-2′ ಅನುಷ್ಠಾನಗೊಂಡಿತ್ತು. ಅದರಲ್ಲಿದ್ದ ಆರ್ಬಿಟರ್, ವಿಕ್ರಮ್ ಎಂಬ ಲ್ಯಾಂಡರ್ ಹಾಗೂ ಪ್ರಗ್ಯಾನ್ ಎಂಬ ರೋವರ್‌ಗಳನ್ನು ಹೊತ್ತಿದ್ದ “ಜಿಎಸ್‌ಎಲ್‌ವಿ ಮಾರ್ಕ್ 3′ ಎಂಬ ರಾಕೆಟ್, ಚಂದ್ರನತ್ತ ಪ್ರಯಾಣಿಸಿತ್ತು. ಆಕಾಶಕಾಯವು ಚಂದ್ರನನ್ನು ಪ್ರವೇಶಿಸುವ ಮೊದಲು ಅದರಲ್ಲಿದ್ದ ಆರ್ಬಿಟರ್, ಆಕಾಶಕಾಯದಿಂದ ಬೇರ್ಪಟ್ಟು ಚಂದ್ರನನ್ನು ಗಿರಕಿ ಹೊಡೆಯಲು ಆರಂಭಿಸಿತ್ತು. ಅದರಲ್ಲಿನ ಸ್ವದೇಶಿ ನಿರ್ಮಿತ “ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್’ (ಐಐಆರ್‌ಎಸ್) ಎಂಬ ಇಮೇಜಿಂಗ್ ಪರಿಕರ, ಚಂದ್ರನ ವಿದ್ಯುದಯಸ್ಕಾಂತ ತರಂಗ ಗುತ್ಛಗಳನ್ನು ಅವಲೋಕಿಸಿ, ಚಂದ್ರನ ವಾತಾವರಣದಲ್ಲಿ ತೇವಾಂಶಕ್ಕೆ ಕಾರಣವಾಗುವ ಹೈಡ್ರಾಕ್ಸಿಲ್ ಹಾಗೂ ನೀರಿನ ಕಣಗಳನ್ನು ಪತ್ತೆ ಮಾಡಿದೆ.
ಸಂಶೋಧನೆಯ ಮಹತ್ವ :
2008ರ ಅ. 22ರಂದು ಅನುಷ್ಠಾನಗೊಂಡಿದ್ದ ಚಂದ್ರಯಾನ-1ರಲ್ಲಿಯೂ ಚಂದ್ರನ ನೀರಿನ ಅಂಶವನ್ನು ಪತ್ತೆ ಹಚ್ಚುವ ಮೂನ್ ಮಿನರಾಲಜಿ ಮ್ಯಾಪರ್ (ಎಂ3) ಎಂಬ ಪರಿಕರವನ್ನು ಕಳುಹಿಸಲಾಗಿತ್ತು. ಅದು ಚಂದ್ರನ ವಿದ್ಯುದಯ ಸ್ಕಾಂತ ಸ್ಪೆಕ್ಟ್ರಂಗಳ 0.4ರಿಂದ 3 ಮೈಕ್ರೋಮಿಟರ್‌ವರೆಗಿನ ತರಂಗಾಂತರಗಳನ್ನು ಮಾತ್ರ ಅವಲೋ ಕಿಸಿತ್ತು. ಅದು ಕಳುಹಿಸಿದ ಮಾಹಿತಿಯಲ್ಲಿ ಚಂದ್ರನಲ್ಲಿ ನೀರಿನ ಅಂಶ ಪತ್ತೆಯಾಗಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಹಾಗಾಗಿ, ಚಂದ್ರಯಾನ-2ರಲ್ಲಿ ಹೆಚ್ಚು ಶಕ್ತಿಶಾಲಿ ಸೆನ್ಸರ್‌ಗಳುಳ್ಳ ಐಐಆರ್ ಅಳವಡಿಸಲಾಗಿತ್ತು. ಈಗ ಬಂದಿರುವ ಮಾಹಿತಿ ಚಂದ್ರನ ಬಗ್ಗೆ ದಶಕಗಳಿಂದ ನಡೆಯುತ್ತಿದ್ದ ಅಧ್ಯಯನಕ್ಕೆ ಹೊಸ ತಿರುವನ್ನು ಕೊಟ್ಟಿದೆ.
ಏನಿದು ಹೈಡ್ರಾಕ್ಸಿಲ್? :
ಒಂದು ಹೈಡ್ರಾಕ್ಸಿಲ್ ಕಣದಲ್ಲಿ ಒಂದು ಆಮ್ಲಜನಕ, ಮತ್ತೂಂದು ಜಲಜನಕ ವೆಂದು ಕರೆಯಲಾಗುತ್ತದೆ. ಇದು ಇಂಗಾಲದ ಯಾವುದೇ ಕಣ ಅಥವಾ ಧಾತುವಿನೊಂದಿಗೆ ಸಮ್ಮಿಳಿತಗೊಂಡರೆ ಆ ಕಣ ಅಥವಾ ಧಾತುವಿಗೆ “ನೀರಿನಲ್ಲಿ ಸುಲಭವಾಗಿ ಕರಗುವಂಥ ಗುಣ’ ಕೊಡುತ್ತದೆ. ಈ ಕಣಗಳು ಚಂದ್ರನಲ್ಲಿ ಇರಬಹುದಾದ ಕೆಲವು ಅನ್ಯ ಹೈಡ್ರಾಕ್ಸಿಲ್ ಕಣಗಳೊಂದಿಗೆ ಸಮ್ಮಿಳಿತಗೊಂಡಿರುವುದರಿಂದ ಅಲ್ಲಿ ನೀರಿನ ಕಣ ಪತ್ತೆಯಾಗಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.