ಇಸ್ರೋಗೆ ದೈತ್ಯ ಯಶಸ್ಸು; ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡ್ಡಯನ
Team Udayavani, Jun 5, 2017, 5:35 PM IST
ಹೈದರಾಬಾದ್: ಉಪಗ್ರಹ ಆಧರಿತ ಮತ್ತು ವೇಗದ ಅಂತರ್ಜಾಲ ಒದಗಿಸುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ನಿರ್ಮಿಸಿದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್(ಫ್ಯಾಟ್ ಬಾಯ್ ಉಡಾವಣೆಗೆ ಕ್ಷಣಗಣನೆ) ಉಡ್ಡಯನ ಯಶಸ್ವಿಯಾಗಿದೆ. ಈ ಮೂಲಕ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದಂತಾಗಿದೆ. ರಾಕೆಟ್ ಉಡಾವಣೆ ಸಂದರ್ಭದಲ್ಲಿ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಉಪಸ್ಥಿತರಿದ್ದರು.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಸಂಜೆ 5.28ಕ್ಕೆ ನಭೋಮಂಡಲಕ್ಕೆ ಯಶಸ್ವಿಯಾಗಿ ನೆಗೆದಿದೆ. ದೈತ್ಯ ಸಾಮರ್ಥ್ಯದ ದೇಶದ ಚೊಚ್ಚಲ ರಾಕೆಟ್ ಇದಾಗಿದ್ದರಿಂದ ಇದನ್ನು ಫ್ಯಾಟ್ ಬಾಯ್ ಎಂದು ಕರೆಯಲಾಗುತ್ತಿದೆ.
6 ಟನ್‌ನಷ್ಟು ಭಾರ ಹೊಂದಿರುವ ಈ ರಾಕೆಟ್, ಯುರೋಪ್ ನಿರ್ಮಾಣದ ಅರಿಯೇನ್-6 ರಾಕೆಟ್‌ಗೆ ಹೋಲಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 15 ವರ್ಷಗಳ ಕಾಲ 300 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ನಿರ್ಮಿಸಲಾಗಿದೆ.
ಭಾರತಕ್ಕೇನು ಲಾಭ?
– ಮಾನವ ಸಹಿತ ಸೌಲಭ್ಯದ ಅಥವಾ 4 ಟನ್ ಭಾರದ ಉಪಗ್ರಹ ಉಡಾವಣೆ ಸಾಮರ್ಥ್ಯದ ರಾಕೆಟ್ ಆಗಿದ್ದರಿಂದ ವಿದೇಶಿ ರಾಕೆಟ್‌ಗಳ ಅವಲಂಬನೆ ತಪ್ಪುತ್ತದೆ
– ಬೇರೆ ದೇಶಗಳಿಗೂ ಉಡಾವಣೆಗೆ ರಾಕೆಟ್ ಪೂರೈಕೆ ಸಾಧ್ಯ.
– ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿಕೊಳ್ಳಲಿದೆ.
– ಇನ್ನಷ್ಟು ಸಂಶೋಧನೆಗೆ ದಾರಿ ಮಾಡಿಕೊಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.