ದೇಶದ ಎರಡನೇ ಅತಿ ಸುದೀರ್ಘ‌ ಕೋರ್ಟ್‌ ಕಲಾಪ


Team Udayavani, Nov 10, 2019, 4:05 AM IST

deshada

ಅಯೋಧ್ಯೆಯಲ್ಲಿನ 2.77 ಎಕರೆ ಜಮೀನು ಯಾರಿಗೆ ಸೇರಬೇಕು ಎಂಬುದರ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಲವತ್ತು ದಿನಗಳ ಕಾಲ ವಿಚಾರಣೆ ನಡೆದು ತೀರ್ಪು ಕಾಯ್ದಿರಿಸಲ್ಪಟ್ಟಿತ್ತು. ಈ ಬಗ್ಗೆ “ಉದಯವಾಣಿ’ ಪತ್ರಿಕೆ ಸತತವಾಗಿ ವರದಿ ಮಾಡಿದೆ. ಆ.6ರಿಂದ ಅ.17ರ ವರೆಗೆ ಸತತವಾಗಿ ಸುಪ್ರೀಂಕೋರ್ಟ್‌ನಲ್ಲಿ ನಡೆದ ಕಾನೂನು ಹೋರಾಟದ ಬಗ್ಗೆ ಸಮಗ್ರ ವರದಿ ಮಾಡಿತ್ತು. ದೇಶದ ಎರಡನೇ ಅತಿ ಸುದೀರ್ಘ‌ ಕೋರ್ಟ್‌ ಕಲಾಪದ ಕೆಲ ಅಂಶಗಳನ್ನು ಇಲ್ಲಿ ನೀಡಲಾಗಿದೆ…

ಹಲವು ಶತಮಾನಗಳ ನಂತರ ರಾಮ ಜನಿಸಿದ್ದಕ್ಕೆ ಸಾಕ್ಷ್ಯಗಳೇನಿದೆ ಎಂದು ಪ್ರಶ್ನೆ ಮಾಡಿದರೆ ಹೇಗೆ ಸಾಧ್ಯ? ಅದಕ್ಕೆ ಶತಮಾನಗಳಿಂದ ಜನರು ಇರಿಸಿಕೊಂಡು ಬಂದಿರುವ ನಂಬಿಕೆಯೇ ಸಾಕ್ಷಿ. ಈ ಹಿಂದೆ ಕ್ರಿಸ್ತ ಬೆತ್‌ ಹೇಮ್‌ನಲ್ಲಿಯೇ ಜನಿಸಿದ್ದ ಬಗ್ಗೆ ಪ್ರಶ್ನಿಸಲಾಗಿತ್ತೇ?. 
-ಕೆ. ಪರಾಶರನ್‌, ರಾಮಲಲ್ಲಾ ವಿರಾಜಮಾನ್‌ ಪರ ವಕೀಲ

ಹಿಂದೂ ಧರ್ಮದಲ್ಲಿ ಪೂಜಿಸುವ ಸ್ಥಳ ಎಂದು ಪರಿಗಣಿಸಲು ಅಲ್ಲಿ ಮೂರ್ತಿಯೇ ಇರಬೇಕೆಂದು ಇಲ್ಲ. ನದಿಗಳು, ಸೂರ್ಯನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಹೀಗಾಗಿ ಜನ್ಮಸ್ಥಾನವನ್ನು ನ್ಯಾಯಿಕ ವ್ಯಕ್ತಿ ಎಂದು ಪರಿಗಣಿಸಬಹುದು.
-ಕೆ. ಪರಾಶರನ್‌, ರಾಮಲಲ್ಲಾ ವಿರಾಜಮಾನ್‌ ಪರ ವಕೀಲ

ವಾರದ ಐದು ದಿನಗಳು ವಿಚಾರಣೆ ನಡೆಸಿದರೆ, ಸಿದ್ಧತೆ ನಡೆಸಲು ಕಷ್ಟವಾಗುತ್ತದೆ.
-ರಾಜೀವ್‌ ಧವನ್‌, ಮುಸ್ಲಿಂ ಸಂಘಟನೆಗಳ ಪರ ವಕೀಲ

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮೊದಲು ದೇಗುಲವಿತ್ತು. ಅದನ್ನು ಕೆಡವಿ ಮಸೀದಿ (ಬಾಬರಿ ಮಸೀದಿ) ನಿರ್ಮಿಸಲಾಗಿತ್ತು.
-ರಾಮ ಲಲ್ಲಾ ವಿರಾಜಮಾನ್‌ ಪರ ವಕೀಲರು

ಅಯೋಧ್ಯೆಯಲ್ಲಿ ರಾಮನು ಹುಟ್ಟಿದ್ದಾನೆ ಎನ್ನುವುದು ಹಿಂದೂಗಳ ನಂಬಿಕೆ. ಈ ಬಗ್ಗೆ ಪುರಾಣಗಳಲ್ಲಿ ಮತ್ತು ಹಲವು ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸಿ ಕಥನದಲ್ಲಿ ಉಲ್ಲೇಖೀಸಿದ್ದಾರೆ.
-ಸಿ.ಎಸ್‌. ವೈದ್ಯನಾಥನ್‌, ರಾಮ ಲಲ್ಲಾ ವಿರಾಜಮಾನ್‌ ಪರ ವಕೀಲ

ಅಯೋಧ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದರು ಎಂದ ಮಾತ್ರಕ್ಕೆ ಆ ಸ್ಥಳ ಅವರದು ಎಂದು ಹೇಳಲಾಗದು. ಮುಸ್ಲಿಮರು ಬೀದಿ ಬದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದ ಮಾತ್ರಕ್ಕೆ ಆ ಬೀದಿಗಳು ಅವರದ್ದೇ ಎಂದು ಹಕ್ಕು ಮಂಡಿಸಲು ಸಾಧ್ಯವೇ?.
-ಕೆ. ಪರಾಶರನ್‌

ರಾಮ ಜನ್ಮಭೂಮಿ ಪ್ರಕರಣದ ವಿವಾದಿತ ಸ್ಥಳದಲ್ಲಿ ಶತಮಾನಗಳ ಹಿಂದೆಯೇ ದೇಗುಲವಿತ್ತು. ಅದನ್ನು ಕೆಡವಿ ಮಸೀದಿ ಕಟ್ಟಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಲ್ಲಿ ದೊರೆತಿರುವ ಅವಶೇಷಗಳ ಮೇಲೆ ಆಮೆ, ಮೊಸಳೆಗಳ ಚಿತ್ರಗಳಿವೆ.
-ಸಿ.ಎಸ್‌. ವೈದ್ಯನಾಥನ್‌

ರಾಮನು ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವೀ ಮಾನ್ಯತೆ ಸಿಕ್ಕಿದೆ. ಹಾಗಾಗಿ, ಅದು ಹಿಂದೂಗಳಿಗೆ ಸೇರಿದ ಜಾಗವಾಗಿದ್ದು, ಬೇರೆ ಯಾರೋ ಆ ಸ್ಥಳದ ಮೇಲೆ ಹಕ್ಕು ಸಾಧಿಸುವಂತಿಲ್ಲ.
-ರಾಮ ಲಲ್ಲಾ ಪರ ವಕೀಲರು

ಭೂಮಾಲೀಕತ್ವದ ವಿಚಾರಣೆ ವೇಳೆ ಭಕ್ತನು ದೇವರಿಗಿಂತ ದೊಡ್ಡವನಾಗಬಾರದು
-ನ್ಯಾಯಪೀಠ

ಅಯೋಧ್ಯೆಯ ರಾಮ ಜನ್ಮಸ್ಥಳದಲ್ಲಿ ಬಾಬರ್‌ನ ಆಸ್ಥೆಯ ಮೇರೆಗೆ ಮಸೀದಿ ನಿರ್ಮಾಣವಾಯಿತೇ, ಇಲ್ಲವೇ ಎಂಬುದನ್ನು 500 ವರ್ಷಗಳಾದ ನಂತರ ಈಗ ಅದನ್ನು ಪರೀಕ್ಷಿಸಿ ಸತ್ಯಾಂಶ ಕಂಡುಹಿಡಿಯುವುದು ಕಷ್ಟದ ಕೆಲಸ.
-ಸುಪ್ರೀಂಕೋರ್ಟ್‌ ಅಭಿಪ್ರಾಯ

ವಿವಾದಿತ ರಾಮ ಜನ್ಮಭೂಮಿಯಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ಪ್ರಕಾರ ನೀಡಲಾಗಿರುವ ಒಂದು ಪಾಲನ್ನು ಹಿಂದೂಗಳಿಗೆ ಬಿಟ್ಟುಕೊಡಲು ಸಿದ್ಧ.
-ಶಿಯಾ ವಕ್ಫ್ ಮಂಡಳಿ ಪರ ವಕೀಲರು

ಅಯೋಧ್ಯೆಯ ವಿವಾದಿತ ಜಮೀನಿನ ಮಾಲೀಕತ್ವದ ಬಗೆಗಿನ ವಿಚಾರಣೆ ನಡುವೆ ಮಹತ್ವದ ಬೆಳವಣಿಗೆ ನಡೆಯಿತು. ಸುನ್ನಿ ವಕ್ಫ್ ಬೋರ್ಡ್‌ ಮತ್ತು ಇತರ ಮುಸ್ಲಿಂ ಸಂಘಟನೆಗಳ ಪರವಾಗಿ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌ ತಮಗೆ ಮುಸ್ಲಿಂ ಸಂಘಟನೆಗಳ ಪರವಾಗಿ ವಾದಿಸಬಾರದು ಎಂದು ಬೆದರಿಕೆ ಬಂದಿದೆ ಎಂದು ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿಕೊಂಡರು. ಅದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ರಿಂದ ಇಬ್ಬರಿಗೆ ನೋಟಿಸ್‌ ಜಾರಿ.

ವಿವಾದಿತ ರಾಮ ಜನ್ಮಭೂಮಿಯ ಹೊರವಲಯಕ್ಕೆ ನಿರ್ಮೋಹಿ ಅಖಾಡ ಮಾಲೀಕತ್ವ ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳುತ್ತೀರೋ?.
-ಮುಸ್ಲಿಂ ದಾವೇದಾರರಿಗೆ ಸುಪ್ರೀಂ ಪ್ರಶ್ನೆ

ನಿರ್ಮೋಹಿ ಅಖಾಡಾ ಮಂಡಿಸಿದ ವಾದವನ್ನು ಒಪ್ಪಲು ಮುಸ್ಲಿಂ ಸಂಘಟನೆಗಳು ಸಿದ್ಧವಾಗಿವೆಯೇ?.
-ಸುಪ್ರೀಂ ಪ್ರಶ್ನೆ

ಅಯೋಧ್ಯೆಯ ವಿವಾದಿತ ಜಾಗದಲ್ಲಿ ಮುಸ್ಲಿಮರು 1934ರಿಂದ 1949ರ ಅವಧಿಯಲ್ಲಿ ನಿಯಮಿತವಾಗಿ ನಮಾಜ್‌ ಮಾಡುತ್ತಿರಲಿಲ್ಲ. ಹೀಗಾಗಿ, ವಿವಾದಿತ ಪ್ರದೇಶದ ಹಕ್ಕು ಸಾಧಿಸಲು ಬರುವುದಿಲ್ಲ ಎನ್ನುವ ನಿರ್ಮೋಹಿ ಅಖಾಡಾದ ವಾದವನ್ನು ನಾವು ಒಪ್ಪುವುದಿಲ್ಲ.
-ಮುಸ್ಲಿಂ ಅರ್ಜಿದಾರರು

ಆಸ್ತಿಯ ಹಕ್ಕಿನಲ್ಲಿ ಇರುವಂತೆ ಶ್ರೀರಾಮನ ಜನ್ಮಸ್ಥಾನದ ವಿಚಾರದಲ್ಲಿ ಏಕೆ ಕಾನೂನಾತ್ಮಕ ಹಕ್ಕುಗಳು ಇರಬಾರದು?.
-ಮುಸ್ಲಿಂ ಸಂಘಟನೆಗಳಿಗೆ ನ್ಯಾಯಪೀಠ ಪ್ರಶ್ನೆ

ಅಯೋಧ್ಯೆ ವಿಚಾರದಲ್ಲಿ ಸಂಧಾನ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿ ಒಂದು ತಿಂಗಳು ಕಳೆದ ಬಳಿಕ ಮತ್ತೆ ಮಧ್ಯಸ್ಥಿಕೆ ವಹಿಸಬೇಕು ಎಂಬ ಆಗ್ರಹ ಬಂತು. ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾಡ ಈ ಬಗ್ಗೆ ಸುಪ್ರೀಂನ ಮಧ್ಯಸ್ಥಿಕೆ ಮಂಡಳಿಗೆ ಪತ್ರ ಬರೆಯಿತು.

ಬಾಬರಿ ಮಸೀದಿಯಿದ್ದ ಸ್ಥಳವೇ ರಾಮನ ಜನ್ಮಸ್ಥಳ ಎಂದು ಹಿಂದೂಗಳು ನಂಬಿಕೆ ಇಟ್ಟಿದ್ದರಿಂದ ಮಸೀದಿಯಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. 1855ರಲ್ಲಿ ಮಸೀದಿ ಪ್ರವೇಶ ನಿರ್ಬಂಧವಾದ ನಂತರ ಹಿಂದೂಗಳು ಮಸೀದಿ ಪಕ್ಕದಲ್ಲೇ “ರಾಮ್‌ ಚಬೂತರಾ’ ಎಂಬ ಪ್ರಾರ್ಥನಾ ಸ್ಥಳ ನಿರ್ಮಿಸಿದ್ದರು.
-ಸುಪ್ರೀಂನ ಈ ಅನಿಸಿಕೆಗೆ ಮುಸ್ಲಿಂ ಸಂಘಟನೆಗಳ ಖಂಡನೆ

ಜಡ್ಜ್ ಮಾತಿನ ಧ್ವನಿಯೇ ಸರಿಯಿಲ್ಲ.
-ರಾಜೀವ್‌ ಧವನ್‌, ಮುಸ್ಲಿಂ ದಾವೆದಾರರ ಪರ ವಕೀಲ

ರಾಮ ಲಲ್ಲಾ ಹೆಸರಿನಲ್ಲಿ 1989ರಲ್ಲಿ ದಾವೆ ಸಲ್ಲಿಸಿರುವುದು ಬಾಬ್ರಿ ಮಸೀದಿ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ.
-ವಕೀಲ ರಾಜೀವ್‌ ಧವನ್‌ ಆರೋಪ

ಅಯೋಧ್ಯೆ ಶ್ರೀರಾಮ ಜನ್ಮಸ್ಥಳವೆಂದು ಹಿಂದೂಗಳು ಭಾವಿಸಿದ್ದಾರೆ. ಈ ನಂಬಿಕೆಯನ್ನು ಪ್ರಶ್ನೆ ಮಾಡುವುದು ಕಷ್ಟ.
-ಸುಪ್ರೀಂಕೋರ್ಟ್‌ ಅಭಿಮತ

ಹಿಂದೂಗಳ ಎರಡು ಪವಿತ್ರ ಗ್ರಂಥಗಳಾದ “ವಾಲ್ಮೀಕಿ ರಾಮಾಯಣ’ ಹಾಗೂ “ರಾಮಚರಿತ ಮಾನಸ’ದಲ್ಲಿ ಎಲ್ಲೂ ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂಬುದು ನಿಖರವಾಗಿ ಉಲ್ಲೇಖೀಸಿಲ್ಲ ಎನ್ನುವ ಮುಸ್ಲಿಂ ಸಂಘಟನೆಗಳ ವಾದ ಸರಿಯಲ್ಲ.
-ಸುಪ್ರೀಂಕೋರ್ಟ್‌ ಆಕ್ಷೇಪ

ಅಯೋಧ್ಯೆ ರಾಮ ಮಂದಿರದ ಹೊರ ಭಾಗದ ಪ್ರದೇಶವು ರಾಮ ಜನ್ಮಸ್ಥಾನ ಎಂಬ ಈ ಹಿಂದಿನ ಹೇಳಿಕೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಮುಸ್ಲಿಂ ದಾವೆದಾರರು ಹಿಂಪಡೆದರು.

ವರದಿ ಪ್ರಶ್ನಿಸಿದ್ದಕ್ಕೆ ವಕೀಲರಿಂದ ಹಲ್ಲೆ. ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಇಲಾಖೆ 2003ರಲ್ಲಿ ಸಲ್ಲಿಸಿದ್ದ ವರದಿ ಪ್ರಶ್ನೆ ಮಾಡಿದ್ದ ಮುಸ್ಲಿಂ ಸಂಘಟನೆಗಳಿಂದ ಕ್ಷಮೆಯಾಚನೆ.

ವಿವಾದಿತ ಪ್ರದೇಶದ ಕುರಿತು 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಸಲ್ಲಿಸಿದ ವರದಿಯು ಸಾಮಾನ್ಯ ಅಭಿಪ್ರಾಯವಲ್ಲ.ಆ ಸಮಿತಿಯಲ್ಲಿದ್ದ ಪುರಾತತ್ವ ತಜ್ಞರು ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಈ ವರದಿ ನೀಡಿದ್ದರು.
-ಸುಪ್ರೀಂ ಅಭಿಪ್ರಾಯ

ಜಮೀನು ಮಾಲೀಕತ್ವ ವಿಚಾರಣೆ ವೇಳೆ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಯಾವುದೇ ಅಂಶ ಸಲ್ಲಿಸಿಲ್ಲ. ಕೋರ್ಟ್‌ಗೆ ಹಿಂದೂ ಸಂಘಟನೆಗಳಿಂದ ಅರಿಕೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಡ ನಿರ್ಮಾಣಕ್ಕಿಂತ ಮೊದಲು ಬೃಹತ್‌ ಕಟ್ಟrಡ ನಿರ್ಮಾಣವಾಗಿತ್ತು. ಈ ಹಿಂದೆ ನಡೆಸಿದ ಉತ್ಖನನದಿಂದ ಅದು ಸಾಬೀತಾಗಿದೆ.
-ರಾಮಲಲ್ಲಾ ಪರ ವಕೀಲ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಸಂಧಾನ ಪ್ರಕ್ರಿಯೆಯ ವಿವರ ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ ಮೂಲಕ ಸೋರಿಕೆಯಾಗಿದೆ.
-ಮುಸ್ಲಿಂ ಸಂಘಟನೆಗಳ ಪರ ವಕೀಲ

ನೀವು ಕೇವಲ ಮುಸ್ಲಿಂ ಅರ್ಜಿದಾರರಿಗೆ ಮಾತ್ರವೇ ಪ್ರಶ್ನೆ ಕೇಳುತ್ತೀರಿ. ಹಿಂದೂ ಅರ್ಜಿದಾರರಿಗೆ ಯಾವ ಪ್ರಶ್ನೆಯನ್ನೂ ಕೇಳುತ್ತಿಲ್ಲ.
-ಮುಸ್ಲಿಂ ಸಂಘಟನೆಗಳ ಪರ ವಕೀಲ

ಬಾಬರ್‌ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದಾನೆ ಎಂಬ ವಾದವನ್ನು ಪುಷ್ಟೀಕರಿಸಲು ಸುನ್ನಿ ವಕ್ಫ್ ಮಂಡಳಿ ವಿಫ‌ಲವಾಗಿದೆ. ಜತೆಗೆ ಇನ್ನೂ ಹಲವಾರು ಮುಸ್ಲಿಂ ಸಂಘಟನೆಗಳಿಗೆ ಈ ವಾದವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ.
-ಸಿ.ಎಸ್‌. ವೈದ್ಯನಾಥನ್‌, ಹಿಂದೂ ಸಂಘಟನೆಗಳ ಪರ ವಕೀಲ

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.