ಸಾಮುದಾಯಿಕ ಪ್ರಸರಣ ಆಗಿದ್ದು ನಿಜ; ಕೊನೆಗೂ ಒಪ್ಪಿಕೊಂಡ ಸರಕಾರ
ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂದೂ ಸ್ಪಷ್ಟನೆ
Team Udayavani, Oct 19, 2020, 6:25 AM IST
ಯುಕೆಯಲ್ಲಿ ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಉತ್ಪಾದನೆಯು ಭರದಿಂದ ಸಾಗಿದೆ.
ಹೊಸದಿಲ್ಲಿ: “ಕೊರೊನಾ ಸೋಂಕು ಭಾರತ ದಲ್ಲಿ ಸಾಮುದಾಯಿಕ ಮಟ್ಟದಲ್ಲಿ ವ್ಯಾಪಿಸಿದೆ.’ ದೇಶದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಸುಮಾರು 9 ತಿಂಗಳ ಬಳಿಕ ಕೇಂದ್ರ ಸರಕಾರ, ಸೋಂಕು ಸಮುದಾಯ ಮಟ್ಟ ದಲ್ಲಿ ವ್ಯಾಪಿಸಿರುವು ದನ್ನು ಒಪ್ಪಿಕೊಂಡಿದೆ. ಆದರೆ, ಸಾಮುದಾ ಯಿಕ ಮಟ್ಟದ ವ್ಯಾಪಿ ಸುವಿಕೆಯು ಕೆಲವು ಜಿಲ್ಲೆಗಳಿಗಷ್ಟೇ ಸೀಮಿತ ವಾಗಿದೆ ಎಂದೂ ಸ್ಪಷ್ಟಪಡಿಸಿದೆ. ರವಿವಾರ “ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಈ ವಿಚಾರ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದೆ ಎಂದು ಹೇಳಿದ್ದರು. ಈ ಕುರಿತು ಹರ್ಷವರ್ಧನ್‌ರನ್ನು ಪ್ರಶ್ನಿಸಿದಾಗ ಅವರು, “ಪಶ್ಚಿಮ ಬಂಗಾಲ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು ಹರಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದರೆ ಇದು ಸೀಮಿತ ಜಿಲ್ಲೆಗಳಲ್ಲಿವೆ’ ಎಂದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕೇಂದ್ರ ಸರಕಾರವೇ ಸೋಂಕಿನ ಸಾಮುದಾಯಿಕ ವ್ಯಾಪಿಸುವಿಕೆ ಯನ್ನು ಒಪ್ಪಿದಂತಾಗಿದೆ.
ಚೀನದ ವಾದಕ್ಕೆ ಪುರಾವೆ ಇಲ್ಲ
“ಕೊರೊನಾ ವೈರಸ್ ಮೊದಲು ಕಂಡುಬಂದಿದ್ದು ನಮ್ಮ ದೇಶದಲ್ಲಲ್ಲ. ಕಳೆದ ವರ್ಷ ಹಲವು ದೇಶಗಳಲ್ಲಿ ಏಕಕಾಲಕ್ಕೆ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಅದನ್ನು ಮೊದಲು ಬಹಿರಂಗಪಡಿಸಿದ್ದು ಮಾತ್ರ ನಾವು’ ಎಂಬ ಚೀನದ ವಾದವನ್ನು ದೃಢೀಕರಿಸುವಂಥ ಯಾವುದೇ ಪುರಾವೆ ಸಿಕ್ಕಿಲ್ಲ. ಸದ್ಯ ಇರುವ ಮಾಹಿತಿ ಪ್ರಕಾರ, ಚೀನದ ವುಹಾನ್‌ನಲ್ಲೇ ಸೋಂಕು ಮೊದಲಿಗೆ ಕಾಣಿಸಿಕೊಂಡಿರುವುದು. ಅದನ್ನೇ ಜಗತ್ತು ಒಪ್ಪಿಕೊಂಡಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಮ್ಯುಟೇಷನ್ ಆಗಿಲ್ಲ
ದೇಶದಲ್ಲಿ ಈವರೆಗೆ ಕೋವಿಡ್ ವೈರಸ್‌ನ ಮ್ಯುಟೇಷನ್(ರೂಪಾಂತರ) ಆಗಿರುವುದು ಕಂಡುಬಂದಿಲ್ಲ ಎಂದೂ ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಬಯೋಟೆಕ್ನಾಲಜಿ ಇಲಾಖೆಯು ಭಾರತದಾದ್ಯಂತ ನಡೆಸಿದ ಅಧ್ಯಯನವೂ ಇದೇ ರೀತಿಯ ವರದಿ ನೀಡಿದೆ. ದೇಶದಲ್ಲಿ ಕಂಡುಬಂದ ಕೊರೊನಾ ವೈರಸ್‌ನ ಪ್ರಮುಖ ಎ2ಎ ಕಣವು, ಜೂನ್‌ನಿಂದ ಈವರೆಗೆ ಯಾವುದೇ ರೀತಿಯ ಮ್ಯುಟೇಷನ್‌ಗೆ ಒಳಗಾಗಿಲ್ಲ ಎಂದು ಈ ವರದಿ ಸ್ಪಷ್ಟಪಡಿಸಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್ ಸೇರಿದಂತೆ ದೇಶದ ಹಲವು ಸಂಸ್ಥೆಗಳು, 1058 ಜಿನೋಮ್‌ಗಳನ್ನು ಪ್ರತ್ಯೇಕಿಸಿ ಅಧ್ಯಯನ ನಡೆಸಿವೆ. ದೇಶದಲ್ಲಿ ಪ್ರಮುಖವಾಗಿ ಕಂಡುಬಂದಿದ್ದು ಎ2ಎ ಸ್ಟ್ರೈನ್. ಆನಂತರದಲ್ಲಿ ಯಾವುದೇ ರೂಪಾಂತರವು ಪತ್ತೆಯಾಗಿಲ್ಲ ಎಂದು ವರದಿ ಹೇಳಿದೆ.
ಆಕ್ಸಿಮೀಟರ್ ಖರೀದಿ
ಮಾರುಕಟ್ಟೆಯಲ್ಲಿ ಚೀನ ಮೂಲದ ಆಕ್ಸಿಮೀಟ ರ್‌ಗಳೇ ತುಂಬಿವೆ ಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ ರುವ ಸಚಿವರು, “ಗ್ರಾಹಕರು ಐಎಸ್‌ಒ ಅಥವಾ ಐಇಸಿ ಗುರುತು ಇರುವ ಎಫ್ಡಿಎ ಅಥವಾ ಸಿಇಯಿಂದ ಅನುಮತಿ ಪಡೆದ ಪಲ್ಸ್ ಆಕ್ಸಿಮೀಟರ್‌ಗಳನ್ನು ಖರೀದಿಸಲಿ. ಮಾರುಕಟ್ಟೆಯಲ್ಲೂ, ಆನ್‌ಲೈನ್‌ನಲ್ಲೂ ಅದು ಲಭ್ಯವಿದೆ’ ಎಂದಿದ್ದಾರೆ.
ಬೆಲೆ ತೆರುತ್ತಿದೆ ಕೇರಳ
ಓಣಂ ಅವಧಿಯಲ್ಲಿ ಕೇರಳ ಸರಕಾರ ನಿರ್ಬಂಧಗಳನ್ನು ಸಡಿಲಿಸಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದಾಗಿ ಅಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹಬ್ಬದ ಅವಧಿಯ ನಿರ್ಲಕ್ಷ್ಯಕ್ಕೆ ಈಗ ಕೇರಳ ಬೆಲೆ ತೆರುತ್ತಿದೆ. ಇದು ಎಲ್ಲ ರಾಜ್ಯಗಳಿಗೂ ಪಾಠ. ಜೀವ ಒತ್ತೆ ಇಟ್ಟು ಯಾವುದೇ ಹಬ್ಬಗಳನ್ನು ಆಚರಿಸಬೇಕು ಎಂದು ಯಾರೂ ಹೇಳುವುದಿಲ್ಲ. ದಯವಿಟ್ಟು ಎಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ ಎಂದಿದ್ದಾರೆ ಹರ್ಷವರ್ಧನ್.
ಪತ್ರಿಕೆಗಳು ಸೇಫ್
ಪತ್ರಿಕೆಗಳ ಮೂಲಕ ಸೋಂಕು ಹರಡುವುದಿಲ್ಲ. ಪತ್ರಿಕೆಗಳಿಂದ ಕೊರೊನಾ ಹಬ್ಬುತ್ತದೆ ಎನ್ನುವುದಕ್ಕೆ ಈವರೆಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ ಸೋಂಕಿನ ಸಂದರ್ಭದಲ್ಲಿ ಪತ್ರಿಕೆ ಓದುವುದರಿಂದ ಯಾವುದೇ ಹಾನಿ ಇಲ್ಲ ಎಂದೂ ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ.
ನೇಸಲ್ ಲಸಿಕೆ ಪ್ರಯೋಗ ಶೀಘ್ರ
ಪ್ರಸ್ತುತ ದೇಶದಲ್ಲಿ ಯಾವುದೇ ನೇಸಲ್ ವ್ಯಾಕ್ಸಿನ್(ಮೂಗಿನ ಮೂಲಕ ಹಾಕುವಂಥ ಲಸಿಕೆ) ಪ್ರಯೋಗ ನಡೆಯುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಭಾರತ್ ಬಯೋಟೆಕ್ ಹಾಗೂ ಸೇರಮ್ ಇನ್‌ಸ್ಟಿಟ್ಯೂಟ್ ಇಂಥ ಲಸಿಕೆಗಳ ಪ್ರಯೋಗವನ್ನೂ ನಡೆಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.