ಐಟಿಬಿಪಿ ಸಿಬ್ಬಂದಿಗೆ ಯುದ್ಧ ತಂತ್ರಗಳ ತರಬೇತಿ
ಬೇಸಿಕ್ ಟ್ರೈನಿಂಗ್ ಸೆಂಟರ್‌ನಲ್ಲಿ ಮೂರು ತಿಂಗಳ ಕಾಲ ತರಬೇತಿ
Team Udayavani, Oct 31, 2022, 7:40 AM IST
ಭಾನು (ಪಂಚಕುಲ):ಚೀನ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ರಕ್ಷಣೆಗಾಗಿ ನಿಯೋಜಿಸಿರುವ ಇಂಡೊ ಟಿಬೇಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ಶಸ್ತ್ರಾಸ್ತ್ರ ರಹಿತ ಆಕ್ರಮಣಕಾರಿ ಯುದ್ಧ ತಂತ್ರಗಳ ಕುರಿತು ತರಬೇತಿ ನೀಡಲು ಭಾರತೀಯ ಸೇನೆ ನಿರ್ಧರಿಸಿದೆ.
ಜೂಡೊ, ಕರಾಟೆ, ಕ್ರಾವ್ ಮಾಗಾದಂತಹ ಸಮರ ಕಲೆ ಪ್ರಕಾರಗಳಿಂದ ಆಯ್ದ ಪಂಚಿಂಗ್, ಒದೆಯುವುದು, ಎತ್ತಿ ಬಿಸಾಕುವುದು, ಜಾಯಿಂಟ್ ಲಾಕ್ ಸೇರಿದಂತೆ 15ರಿಂದ 20 ರಕ್ಷಣಾ ತಂತ್ರಗಳ ಕುರಿತು ಮೂರು ತಿಂಗಳ ಕಾಲ ಬೇಸಿಕ್ ಟ್ರೈನಿಂಗ್ ಸೆಂಟರ್‌ನಲ್ಲಿ(ಬಿಟಿಸಿ) ಐಟಿಬಿಪಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.
ಆಕ್ರಮಣಕಾರಿ ಕೌಶಲಗಳ ತರಬೇತಿ:
“ಐಟಿಬಿಪಿಯ ನಿವೃತ್ತ ಮಹಾ ನಿರ್ದೇಶಕ ಸಂಜಯ್ ಅರೋರಾ ನಿರ್ದೇಶನದಂತೆ ಕಳೆದ ವರ್ಷದಿಂದಲೇ ಸಿಬ್ಬಂದಿಗೆ ಈ ಬಗೆಯ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಸಿಬ್ಬಂದಿಗೆ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಕೌಶಲಗಳನ್ನು ಕಲಿಸಲಾಗುತ್ತದೆ. ಎದುರಾಳಿ ಸೈನಿಕರನ್ನು ಹಣಿಯಲು ಮತ್ತು ಅಶಕ್ತಗೊಳಿಸಲು ಈ ಯುದ್ಧ ತಂತ್ರಗಳು ಸಹಕಾರಿಯಾಗಿವೆ,’ ಎಂದು ಐಟಿಬಿಪಿ ಐಜಿ ಈಶ್ವರ್ ಸಿಂಗ್ ದುಹಾನ್ ಹೇಳಿದರು.
ಪ್ರತಿ 90 ದಿನಗಳಿಗೆ ಬದಲಿ ತುಕಡಿ ನಿಯೋಜನೆ:
“ಇನ್ನೊಂದೆಡೆ, ಗಡಿಗಳಲ್ಲಿ ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಯ ಕಾರ್ಯದಕ್ಷತೆ ಕುಗ್ಗದಂತೆ ತಡೆಯಲು ಯೋಜನೆ ರೂಪಿಸಲಾಗಿದೆ. ಪ್ರತಿ 90 ದಿನಗಳಿಗೆ ಬದಲಿ ತುಕಡಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ,’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.