ದಂತದ ಅಸ್ತಿಪಂಜರ ಆಕರ್ಷಣೆ
Team Udayavani, Aug 7, 2017, 7:55 AM IST
ತಿರುವನಂತಪುರಂ: ಶತಮಾನ ಹಿಂದಿನ ಮಾತು, ಆಗಿನ್ನೂ ಪಾಶ್ಚಾತ್ಯ ವೈದ್ಯ ಪದ್ಧತಿ ಭಾರತದಲ್ಲಿ ಜನಪ್ರಿಯವಾಗಿರಲಿಲ್ಲ. ಆಗ ತಿರುವಾಂಕೂರ್‌ನ ರಾಜನೊಬ್ಬ ಮನುಷ್ಯನ ಅಂಗ ರಚನೆಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ದಂತದ ಅಸ್ತಿಪಂಜರ ಮಾಡಿಸಿದ್ದ. 1853ರ ಅವಧಿಯಲ್ಲಿ ರೂಪಿಸಿರುವ ಈ ಅಸ್ತಿಪಂಜರ, ನಿಜವಾದ ಅಸ್ತಿ ಪಂಜರವನ್ನು ನಾಚಿಸುವಂತಿದ್ದು, ಪ್ರಸ್ತುತ ತಿರುವನಂತಪುರದ ಪ್ರಾಣಿ ಸಂಗ್ರಹಾಲಯ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿದೆ.
ಆಗೆಲ್ಲಾ ಮೃತ ದೇಹವನ್ನಾಗಲಿ, ಅಸ್ತಿ ಯನ್ನಾಗಲೀ ಮುಟ್ಟುವುದನ್ನು ಸಮಾಜ ಒಪ್ಪುತ್ತಿರಲಿಲ್ಲ. ಹೀಗಾಗಿ ಸ್ಥಳೀಯ ಕುಶಲ ಕರ್ಮಿಯೊಬ್ಬನಿಂದ ದಂತಗಳನ್ನು ಬಳಸಿ ಅಸ್ತಿಪಂಜರದ ತದ್ರೂಪ ಮಾಡಿಸಿಕೊಂಡ ದೊರೆ ಉತ್ರಮ್ ತಿರುನಾಳ್ ಮಾರ್ತಾಂಡ ವರ್ಮ, ಅಂಗರಚನೆ ಶಾಸ್ತ್ರ ಅಧ್ಯಯನಕ್ಕೆ ಅದನ್ನು ಬಳಸಿಕೊಂಡಿದ್ದ ಎಂದು ದಾಖಲೆ ಗಳು ಹೇಳುತ್ತವೆ. ಆದರೆ ಈಗ ಇತಿಹಾಸ ಕಾರರು ಹಾಗೂ ತಜ್ಞರು ರಾಜನ ಮೂಲ ಬಿಟ್ಟು ಅಸ್ತಿಪಂಜರ ರೂಪಿಸಿದ ಕುಶಲಕರ್ಮಿಯ ಸುಳಿವೇನಾದರೂ ಸಿಗುತ್ತದಾ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಮೂಳೆಗಳ ಗಾತ್ರ, ಆಕಾರ ಸೇರಿ ಒಂದೊಂದು ಗೆರೆ ಕೂಡ ನೈಜ ಅಸ್ತಿಪಂಜರವನ್ನೇ ಹೋಲುವಂತೆ ರೂಪಿಸಿದ ಕಲಾವಿದ ಯಾರಿರಬ ಹುದು ಎಂಬ ಕುತೂಹಲ ಮನೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.