8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್!
ಉಗ್ರರಿಂದ ಟಾರ್ಗೆಟೆಡ್ ದಾಳಿ ಹಿನ್ನೆಲೆ ಈ ಕ್ರಮ; ಕಣಿವೆಯಲ್ಲಿ ಕಟ್ಟೆಚ್ಚರ ವಹಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆ
Team Udayavani, Oct 22, 2021, 9:15 PM IST
ಶ್ರೀನಗರ: ಕಳೆದ ಎರಡು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ “ನಾಗರಿಕರನ್ನು ಗುರಿಯಾಗಿಸಿ ಹತ್ಯೆ’ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಣಿವೆಯ ರಸ್ತೆಗಳಲ್ಲಿ ಸೆಕ್ಯೂರಿಟಿ ಬಂಕರ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಹೆಚ್ಚಿನ ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗಿದೆ.
ಈ ಮೂಲಕ, ಕೇಂದ್ರ ಸಶಸ್ತ್ರ ಅರೆಸೇನಾಪಡೆ (ಸಿಎಪಿಎಫ್) ಯೋಧರನ್ನು ಒಳಗೊಂಡ ಭದ್ರತಾ ಬಂಕರ್‌ಗಳು ಶ್ರೀನಗರದ ರಸ್ತೆಗಳಲ್ಲಿ ಸುಮಾರು 8 ವರ್ಷಗಳ ಬಳಿಕ ಮರುನಿಯೋಜನೆಗೊಂಡಂತಾಗಿದೆ. ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಗೊಂಡ ಹಿನ್ನೆಲೆಯಲ್ಲಿ 2011 ಮತ್ತು 2014ರ ಮಧ್ಯೆ ಈ ಎಲ್ಲ ಬಂಕರ್‌ಗಳನ್ನೂ ತೆರವು ಮಾಡಲಾಗಿತ್ತು. ಈಗ ಮತ್ತೆ ಸಮಸ್ಯೆ ತಲೆದೋರಿರುವ ಕಾರಣ ಇವುಗಳನ್ನು ಮರುನಿಯೋಜಿಸಲಾಗಿದೆ.
ಏಕೆ ಬೇಕು ಈ ಬಂಕರ್?:
ಉಗ್ರರ ಮುಕ್ತ ಸಂಚಾರಕ್ಕೆ ತಡೆಯೊಡ್ಡುವುದೇ ಇದರ ಉದ್ದೇಶ. ಉಗ್ರರು ನಾಗರಿಕರ ಮೇಲೆ ದಾಳಿ ನಡೆಸಿ ಕ್ಷಣಮಾತ್ರದಲ್ಲೇ ಆ ಸ್ಥಳದಿಂದ ಮತ್ತೂಂದೆಡೆಗೆ ತೆರಳುತ್ತಾರೆ. ಅವರು ಈ ರೀತಿ ಮುಕ್ತವಾಗಿ ಸಂಚರಿಸುವುದನ್ನು ತಡೆಯುವುದಕ್ಕಾಗಿ ಬಂಕರ್‌ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿ ಅರೆಸೇನಾ ಪಡೆಯ 50 ಕಂಪನಿಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ
ನಿರ್ಗತಿಕನ ಶವ ಪತ್ತೆ
ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಶುಕ್ರವಾರ ಸ್ಥಳೀಯೇತರ ನಿರ್ಗತಿಕನೊಬ್ಬರ ಮೃತದೇಹ ಪತ್ತೆಯಾಗಿದೆ. ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಇದು ಉಗ್ರರ ಕೃತ್ಯವೇ ಎಂಬುದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.