![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jul 14, 2024, 6:47 PM IST
ಜಮ್ಮು: ಕಳೆದ ತಿಂಗಳು ಚೀನಾಬ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹ ಪಾಕಿಸ್ಥಾನದ ವಶದಲ್ಲಿದ್ದು, ಕುಟುಂಬವು ಅಂತಿಮ ವಿಧಿಗಳಿಗಾಗಿ ಪಾರ್ಥಿವ ಶರೀರವನ್ನು ಮರಳಿ ತರಲು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದೆ.
ಅಖ್ನೂರ್ ವಲಯದ ಗಡಿ ಗ್ರಾಮದ ನಿವಾಸಿ ಹರಶ್ ನಗೋತ್ರಾ ಜೂನ್ 11 ರಂದು ನಾಪತ್ತೆಯಾಗಿದ್ದು, ಅವರ ಮೋಟಾರ್ ಸೈಕಲ್ ನದಿಯ ದಡದಲ್ಲಿ ಪತ್ತೆಯಾಗಿತ್ತು. ಮರುದಿನ ನಾಗೋತ್ರಾ ಕುಟುಂಬದಿಂದ ಕಾಣೆಯಾದ ವರದಿಯನ್ನು ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 80,000 ರೂ.ಗೂ ಹೆಚ್ಚು ನಷ್ಟ ಅನುಭವಿಸಿದ ನಂತರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ.
ಖಾಸಗಿ ದೂರಸಂಪರ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗನ ಸಿಮ್ ಕಾರ್ಡ್ ಅನ್ನು ಪೋಷಕರು ಪುನಃ ಸಕ್ರಿಯಗೊಳಿಸಿದ ನಂತರ ಪಾಕಿಸ್ಥಾನಿ ಅಧಿಕಾರಿಯಿಂದ ವಾಟ್ಸಾಪ್ ಸಂದೇಶದ ಮೂಲಕ ನಗೋತ್ರಾ ಸಾವಿನ ಬಗ್ಗೆ ಕುಟುಂಬಕ್ಕೆ ದೃಢೀಕರಣ ಸಿಕ್ಕಿದೆ.
ಜೂನ್ 13 ರಂದು ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನ ಕಾಲುವೆಯಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವಿಭಾಗದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಪಾಕ್ ಅಧಿಕಾರಿಯ ವಾಟ್ಸಾಪ್ ಸಂದೇಶ ತಿಳಿಸಿದೆ ಎಂದು ನಾಗೋತ್ರಾ ತಂದೆ ಸುಭಾಷ್ ಶರ್ಮ ಹೇಳಿದ್ದಾರೆ.
ಮೃತದೇಹವನ್ನು ಸಮಾಧಿ ಮಾಡಲಾಗಿದೆ ಎಂದು ಅಧಿಕಾರಿಯು ಮೃತನ ತಂದೆಗೆ ತಿಳಿಸಿದ್ದರು. ಅವರು ನಗೋತ್ರಾ ಅವರ ಗುರುತಿನ ಚೀಟಿಯನ್ನು ವಾಟ್ಸಾಪ್ ಮೂಲಕ ದುಃಖಿತ ಕುಟುಂಬಕ್ಕೆ ಕಳುಹಿಸಲಾಗಿದ್ದು, ದೇಹವು ಅವರ ಮಗನದ್ದೇ ಎಂದು ಖಚಿತಪಡಿಸಿದ್ದಾರೆ.
“ನನ್ನ ಮಗನ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಮರಳಿ ಪಡೆಯಲು ನಮಗೆ ಸಹಾಯ ಮಾಡುವಂತೆ ನಾವು ನಮ್ಮ ಪ್ರಧಾನಿಯನ್ನು ಕೋರುತ್ತೇವೆ. ನಮ್ಮ ಧರ್ಮದ ಪ್ರಕಾರ ಅವರ ಅಂತಿಮ ಸಂಸ್ಕಾರವನ್ನು ಮಾಡಲು ನಾವು ಬಯಸುತ್ತೇವೆ ಎಂದು ಶರ್ಮ ಹೇಳಿದ್ದಾರೆ.
ನಗೋತ್ರಾ ಅವರ ಸಂಬಂಧಿ ಅಮೃತ್ ಭೂಷಣ್ ಅವರು ಈ ವಿಷಯದ ಬಗ್ಗೆ ಈಗಾಗಲೇ ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ.”ನಾವು ಆಘಾತ ಮತ್ತು ದುಃಖದ ಸ್ಥಿತಿಯಲ್ಲಿದ್ದು, ಮೃತ ದೇಹವನ್ನು ಮರಳಿ ಬಯಸುತ್ತೇವೆ. ದೇಹವನ್ನು ಹಸ್ತಾಂತರಿಸುವಂತೆ ನಾವು ಪಾಕಿಸ್ಥಾನದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಭೂಷಣ್ ಹೇಳಿದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.