Jacqueline Fernandez ಉದ್ದೇಶಪೂರ್ವಕವಾಗಿ ವಂಚನೆಯ ಹಣವನ್ನು ಬಳಸಿದ್ದಾರೆ: ಇಡಿ ಹೇಳಿಕೆ
Team Udayavani, Jan 31, 2024, 10:40 AM IST
ನವದೆಹಲಿ: 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ವಂಚಕ ಸುಕೇಶ್ ಚಂದ್ರಶೇಖರ್ ಅವರ ಅಪರಾಧ ಎಸಗಿದ ಆದಾಯವನ್ನು ಉದ್ದೇಶಪೂರ್ವಕವಾಗಿ ಬಳಸಿಕೊಂಡಿದ್ದಾರೆ ಜೊತೆಗೆ ಅದರ ಬಳಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಜಾಕ್ವೆಲಿನ್ ಫರ್ನಾಂಡಿಸ್ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಡಿ ಈ ವಾದವನ್ನು ಮಾಡಿದೆ.
ಏಪ್ರಿಲ್ 15 ರಂದು ವಿಚಾರಣೆ:
ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ವಕೀಲರು ಇಡಿ ವಾದಕ್ಕೆ ಪ್ರತಿಕ್ರಿಯೆಯಾಗಿ ಉತ್ತರವನ್ನು ಸಲ್ಲಿಸಲು ಸಮಯ ಕೋರಿದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 15 ರಂದು ನಡೆಸಲಿದೆ.
ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರು “ಇಂದಿನವರೆಗೂ ಸತ್ಯವನ್ನು ಮರೆಮಾಚಿದ್ದಾರೆ” ಎಂದು ಇಡಿ ತನ್ನ ಉತ್ತರದಲ್ಲಿ ಹೇಳಿಕೊಂಡಿದೆ.
ಅವಳು ಇಂದಿಗೂ ಸತ್ಯವನ್ನು ಮರೆಮಾಚುತ್ತಲೇ ಇದ್ದಾಳೆ. ಸುಕೇಶ್ ಚಂದ್ರಶೇಖರ್ ಬಂಧನದ ನಂತರ ಫರ್ನಾಂಡೀಸ್ ತನ್ನ ಮೊಬೈಲ್ ಫೋನ್‌ನಿಂದ ಸಂಪೂರ್ಣ ಡೇಟಾವನ್ನು ಅಳಿಸಿಹಾಕಿ ಆ ಮೂಲಕ ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂಬುದೂ ಸತ್ಯ. ಅಷ್ಟು ಮಾತ್ರವಲ್ಲದೆ ಸಾಕ್ಷಿ ನಾಶಪಡಿಸುವಂತೆ ತನ್ನ ಸಹೋದ್ಯೋಗಿಗಳನ್ನು ಕೇಳಿದ್ದಾಳೆ. ಜೊತೆಗೆ ಅಕ್ರಮ ಆದಾಯವನ್ನು ಬಳಸಿಕೊಂಡಿದ್ದಳು ಎಂಬುದಕ್ಕೆ ಎಂಬುದಕ್ಕೆ ಪುರಾವೆಗಳು ನಿಸ್ಸಂದೇಹವಾಗಿ ಸಾಬೀತುಪಡಿಸುತ್ತವೆ” ಎಂದು ತನಿಖಾ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Fraud: ಐಷಾರಾಮಿ ಹೋಟೆಲ್ ಗೆ 6 ಲಕ್ಷ ಪಂಗನಾಮ ಹಾಕಿದ ಮಹಿಳೆಯ ಖಾತೆಯಲ್ಲಿದ್ದದ್ದು ಬರೇ 41ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.