ಜಾಧವ್ ಪತ್ನಿ, ತಾಯಿಗೆ ಅವಮಾನ: ಪಾಕ್ ವಿರುದ್ಧ ಆಕ್ರೋಶ
Team Udayavani, Dec 29, 2017, 6:00 AM IST
ಹೊಸದಿಲ್ಲಿ /ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಪಡೆ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ಪತ್ನಿ, ತಾಯಿಗೆ ಅವಮಾನ ಮಾಡಿದ ವಿಚಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಸ್ತಾವವಾಯಿತು.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡು ಸದನಗಳಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿ ಪಾಕಿಸ್ಥಾನ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ದೂರಿದ್ದಾರೆ. ಮಾನವೀಯತೆಯ ನೆರವಿನ ನೆಪದಲ್ಲಿ ಜಾಧವ್ ಪತ್ನಿ, ತಾಯಿ ಧರಿಸಿದ್ದ ಮಂಗಳ ಸೂತ್ರ, ಕೈಗಳಲ್ಲಿದ್ದ ಬಳೆಗಳು, ಕುಂಕುಮ ತೆಗೆಸಿ ಅವಮಾನ ಮಾಡಲಾಗಿದೆ. ಮದುವೆಯಾಗಿರುವ ಇಬ್ಬರನ್ನೂ ವಿಧವೆಯರಂತೆ ಚಿತ್ರಿಸಲಾಗಿದೆ ಎಂದು ಪಾಕಿಸ್ಥಾನ ಸರಕಾರದ ವಿರುದ್ಧ ಸ್ವರಾಜ್ ಹರಿಹಾಯ್ದರು.
ಇದೀಗ ಪಾಕಿಸ್ಥಾನ ಅಧಿಕಾರಿಗಳು ಜಾಧವ್ ಪತ್ನಿ ಚಪ್ಪಲಿಯಲ್ಲಿ ಚಿಪ್, ಕ್ಯಾಮರಾ ಇದೆ ಎಂದು ಆರೋಪಿಸಿ ದ್ದಾರೆ. ಇದು ಯಾವ ಕ್ರಮ ಎಂದು ಪ್ರಶ್ನಿಸಿದರು. ಈ ಬಗ್ಗೆ ಪಾಕಿಸ್ಥಾನ ಸರಕಾರಕ್ಕೆ ಅಧಿಕೃತ ಟಿಪ್ಪಣಿ ಮೂಲಕ ಪ್ರತಿಭಟನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಕ್ರಮಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸ ಬೇಕು ಎಂದು ಕಠಿಣ ಮಾತುಗಳಿಂದ ಸೂಚಿಸಲಾಗಿದೆ ಎಂದಿದ್ದಾರೆ. ಈ ಸಭೆ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತು ಹಾಲಿ ಸಮಸ್ಯೆ ನಿವಾರಣೆಗೆ ಒಂದು ದಾರಿಯಾಗಬಹುದಿತ್ತು. ಆದರೆ ಆ ರೀತಿ ಆಗಲಿಲ್ಲ ಎಂದು ವಿಷಾದಿಸಿದರು. ನೆರೆಯ ರಾಷ್ಟ್ರದಲ್ಲಿ ಜಾಧವ್ ಜೀವಕ್ಕೆ ಇದ್ದ ಬೆದರಿಕೆಯನ್ನು ಸದ್ಯಕ್ಕೆ ತಪ್ಪಿಸಲಾಗಿದೆ ಎಂದರು.
ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಪಾಕಿಸ್ಥಾನ ಮುರ್ದಾಬಾದ್ ಎಂಬ ಘೋಷಣೆ ಕೂಗಿದರು. ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ ದೇಶದ ಪ್ರಜೆಗಳಿಗೆ ಪಾಕಿಸ್ಥಾನದಲ್ಲಿ ಮಾಡಿರುವ ಅವಮಾನ ಸಹಿಸಲಸಾಧ್ಯ. ಜಾಧವ್ ತಾಯಿ ಮತ್ತು ಪತ್ನಿ ಜತೆಗೆ ಪಾಕಿಸ್ಥಾನ ಸರಕಾರ ನಡೆದುಕೊಂಡದ್ದು 130 ಕೋಟಿ ಭಾರತೀಯರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಸದನಗಳಲ್ಲಿ ಪಾಕಿಸ್ಥಾನದ ವರ್ತನೆ ಖಂಡಿಸಿ ಮಾತನಾಡಿದರು.
ಸತ್ಯವನ್ನೇ ಹೇಳು ಎಂದು ಒತ್ತಾಯಿಸಿದ ತಾಯಿ
“ನೀನೇಕೆ ಅದನ್ನೆಲ್ಲ ಹೇಳುತ್ತಿದ್ದೀಯ? ಇರಾನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ನಿನ್ನನ್ನು ಅಪಹರಿಸಲಾಗಿತ್ತು. ನೀನು ಸತ್ಯವನ್ನೇ ಹೇಳಬೇಕು’ ಹೀಗೆಂದು ಒತ್ತಾಯಿಸಿದ್ದು ಕುಲಭೂಷಣ ಜಾಧವ್ ತಾಯಿ. ಪಾಕಿಸ್ಥಾನದ ಬಿಗಿ ಭದ್ರತೆಯಲ್ಲಿಯೂ ಕೂಡ ತಾಯಿ ಅವಂತಿ ಜಾಧವ್ ಪುತ್ರನ ನಿರಂತರ ಮಾತುಗಳನ್ನು ತುಂಡರಿಸಿ ಮಾತಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪದೇ ಪದೆ ಮಧ್ಯ ಪ್ರವೇಶ ಮಾಡುತ್ತಿರುವ ಪಾಕಿಸ್ಥಾನದ ಅಧಿಕಾರಿಗಳ ನಡುವೆಯೇ ಅವರು ನೆರೆಯ ರಾಷ್ಟ್ರದ ಅಧಿಕಾರಿಗಳು ಮಾತಿಗೆ ಅಡ್ಡಿ ಮಾಡುತ್ತಿದ್ದರೂ ಲೆಕ್ಕಿಸದೆ ಮಾತಾಡಿದ್ದಾರೆ. ಈ ಮೂಲಕ ಪಾಕಿಸ್ಥಾನ ಅಧಿಕಾರಿಗಳು ಒಟ್ಟಾರೆ ಮಾತುಕತೆಯನ್ನು ರೆಕಾರ್ಡ್ ಮಾಡುವ ನಿರಂತರ ಪ್ರಯತ್ನಕ್ಕೆ ತಡೆಯೊಡ್ಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಚಿಪ್ ಇದೆ ಎನ್ನಲು ವಿಡಿಯೋ ದಾಖಲೆ
ಈ ನಡುವೆ ಜಾಧವ್ ಪತ್ನಿ ಚಪ್ಪಲಿಯಲ್ಲಿ ಚಿಪ್ ಇದೆ ಎಂದು ಹೇಳಿ ನಗೆಪಾಟಲಿಗೀಡಾಗಿರುವ ಪಾಕಿಸ್ಥಾನ ಇದೀಗ ತನ್ನ ಸುಳ್ಳನ್ನು ಸಾಬೀತು ಮಾಡಲು ಅದಕ್ಕೆ ವಿಡಿಯೋ ದಾಖಲೆ ಇದೆ ಎನ್ನಲು ಮತ್ತೂಂದು ನಾಟಕ ಮಾಡಲು ಮುಂದಾಗಿದೆ.
ಮೀನುಗಾರರ ಬಿಡುಗಡೆ
ಇತ್ತೀಚೆಗಷ್ಟೇ ಬಂಧಿಸಿದ್ದ ಭಾರತೀಯ 145 ಮೀನುಗಾರ ರನ್ನು ಪಾಕಿಸ್ಥಾನ ಮಾನವೀಯತೆ ದೃಷ್ಟಿ ಯಿಂದ ಬಿಡುಗಡೆ ಮಾಡಿದೆ. ಕುಲಭೂಷಣ್ ಜಾಧವ್ ವಿಚಾರವಾಗಿ ಉಭಯ ದೇಶಗಳ ಮಧ್ಯ ಅಹಿತಕರ ವಾತಾವರಣ ಏರ್ಪಟ್ಟಿರುವಾಗಲೇ ಪಾಕ್ ಇಂಥದ್ದೊಂದು ನಿರ್ಧಾರ ತೆಗೆದು ಕೊಂಡಿದೆ. ಕಳೆದವಾರ ಪಾಕ್ ವಿದೇಶಾಂಗ ವಕ್ತಾರ ಮಹಮ್ಮದ್ ಫೈಸಲ್ ಜ.8ರ ಒಳಗಾಗಿ 291 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಜ.8 ರಂದು ಉಳಿದ ಮೀನುಗಾರರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.