ಹಿಮಾಚಲದಲ್ಲಿ ಠಾಕೂರ್ ಶಕೆ ಆರಂಭ
Team Udayavani, Dec 28, 2017, 6:45 AM IST
ಶಿಮ್ಲಾ: ಮುಖ್ಯಮಂತ್ರಿ ಗಾದಿಗೆ ಏರ್ಪಟ್ಟಿದ್ದ ರೇಸ್ನಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾದ ಬಿಜೆಪಿ ನಾಯಕ ಜೈರಾಂ ಠಾಕೂರ್ ಅವರು ಬುಧವಾರ ಹಿಮಾಚಲ ಪ್ರದೇಶದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ, 52 ವರ್ಷದ ಠಾಕೂರ್ ಅವರು ಹಿಮಾಚಲದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಭಾಜನರಾದರು.
ಬುಧವಾರ ನಡೆದ ಸಮಾರಂಭದಲ್ಲಿ, ರಾಜ್ಯಪಾಲ ಆಚಾರ್ಯ ದೇವ್ರತ್, ಠಾಕೂರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಧುರೀಣ ಎಲ್.ಕೆ. ಆಡ್ವಾಣಿ ಹಾಗೂ ಕೇಂದ್ರದ ಹಲವಾರು ಸಚಿವರು ಭಾಗಿಯಾಗಿದ್ದರು. ಠಾಕೂರ್ ಜತೆಗೆ 12 ಸಚಿವರು ಪ್ರಮಾಣ ಸ್ವೀಕರಿಸಿದರು. ಇವರಲ್ಲಿ ಸುರೇಶ್ ಭಾರದ್ವಾಜ್ ಹಾಗೂ ಗೋವಿಂದ್ ಸಿಂಗ್ ಠಾಕೂರ್ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಆರು ಮಂದಿಯದ್ದು ಚೊಚ್ಚಲ ಸಂಪುಟ ಪ್ರವೇಶ. ಸಾರ್ವಿನ್ ಚೌಧರಿ ಅವರು ಮಂತ್ರಿ ಮಂಡಲದಲ್ಲಿರುವ ಏಕೈಕ ಮಹಿಳಾ ಸಚಿವೆ.
ಮೋದಿ, ಅಮಿತ್ ಹೊಸ ಪ್ಲಾನ್
ಠಾಕೂರ್ರನ್ನು ಮುಖ್ಯಮಂತ್ರಿಯ ನ್ನಾಗಿಸಿರುವುದು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದ್ವಿತೀಯ ಸಾಲಿನ ನಾಯಕರನ್ನು ಮಂಚೂಣಿಗೆ ತರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ದೂರಾಲೋ ಚನೆಯ ಫಲ ಎಂದು ವಿಶ್ಲೇಷಿಸಲಾ ಗಿದೆ. ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮುಖ್ಯಮಂತ್ರಿ ಗಳು 40ರಿಂದ 70 ವರ್ಷದೊಳಗಿನ ನಾಯಕರೇ. ದೇವೇಂದ್ರ ಫಡ್ನವೀಸ್ (47), ಯೋಗಿ ಆದಿತ್ಯನಾಥ್ (45), ತ್ರಿವೇಂದ್ರ ಸಿಂಗ್ ರಾವತ್ (57), ರಘುಬಾರ್ ದಾಸ್ (62) ಹಾಗೂ ಮನೋಹರ್ ಲಾಲ್ ಖಟ್ಟರ್ (62) ಅವರ ಸಾಲಿಗೆ ಠಾಕೂರ್ ಕೂಡ ಸೇರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.