ಗ್ಯಾಂಗ್ ರೇಪ್,ಚಿತ್ರಹಿಂಸೆ: 3ನೇ ಮಹಡಿಯಿಂದ ನಗ್ನಳಾಗಿ ಹಾರಿದ ಮಹಿಳೆ
Team Udayavani, Oct 22, 2018, 11:09 AM IST
ಜೈಪುರ : ಇಬ್ಬರು ಕಾಮಾಂಧರಿಂದ ಗ್ಯಾಂಗ್ ರೇಪ್ ಮತ್ತು ಲೈಂಗಿಕ ಚಿತ್ರಹಿಂಸೆಗೆ ಗುರಿಯಾದ ನೇಪಾಲೀ ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ನಗ್ನಳಾಗಿ ಹಾರಿ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ರೇಪ್ ಮತ್ತು ಚಿತ್ರಹಿಂಸೆಗೆ ಗುರಿಯಾಗಿ ಕಟ್ಟಡದ 3ನೇ ಮಹಡಿಯಿಂದ ಕೆಳಗೆ ಹಾರಿ ಗಂಭೀರವಾಗಿ ಗಾಯಗೊಂಡರೂ ಬದುಕಿರುವ ಸಂತ್ರಸ್ತೆ ಕೊಟ್ಟಿರುವ ಹೇಳಿಕೆಯ ಪ್ರಕಾರ ಆರೋಪಿಗಳಾದ ಲೋಕೇಶ್ ಸಾಯಿನಿ (19) ಮತ್ತು ಕಮಲ್ ಸಾಯಿನಿ (24) ಎಂಬವರನ್ನು ನಿನ್ನೆ ಶನಿವಾರ ತಡರಾತ್ರಿ ಬಂಧಿಸಿದರು. ಘಟನೆಯು ಕಳೆದ ಶುಕ್ರವಾರ ರಾತ್ರಿ ಮುಹಾನಾ ಎಂಬಲ್ಲಿ ನಡೆದಿತ್ತು ಎಂದು ಎಸಿಪಿ (ಜೈಪರ ದಕ್ಷಿಣ) ಕೆ ಕೆ ಅವಸ್ಥಿ ತಿಳಿಸಿದ್ದಾರೆ.
ಮುಹಾನಾ ಪೊಲೀಸ್ ಠಾಣೆಯ ಎಸ್‌ಎಚ್‌ಓ ದೇವೇಂದ್ರ ಕುಮಾರ್ ಅವರು ಘಟನೆಯ ಮಾಹಿತಿ ನೀಡಿ, ರೇಪ್ ಸಂತ್ರಸ್ತೆಯು ಅತ್ಯಾಚಾರಿಗಳಿಂದ ಲೈಂಗಿಕ ಚಿತ್ರಹಿಂಸೆಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಕಟ್ಟಡದ 3ನೇ ಮಹಡಿಯಿಂದ ನಗ್ನಳಾಗಿ ಹಾರಿದ್ದಾಳೆ ಎಂದು ತಿಳಿಸಿದ್ದಾರೆ.
ರೇಪ್ ಸಂತ್ರಸ್ತೆಯು ಪ್ರಕೃತ ಜೈಪುರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ