ಭದ್ರತೆ ಹೆಚ್ಚಳಕ್ಕಾಗಿ ಸೇನೆಗೆ ಆರ್ಥಿಕ ಸ್ವಾತಂತ್ರ್ಯ

Team Udayavani, Jul 29, 2017, 9:40 AM IST

Arun-Jaitley-8-600.jpg

ಹೊಸದಿಲ್ಲಿ: ಇತ್ತೀಚೆಗೆ ಸೇನಾ ಪಡೆಗೆ ಬೇಕಾದ ಶಸ್ತ್ರ ಖರೀದಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ಕೊಟ್ಟ ಬೆನ್ನಲ್ಲೇ ಕೇಂದ್ರ ಸರಕಾರ, ದೇಶಾದ್ಯಂತ ಸೂಕ್ಷ್ಮ ಸೇನಾ ನೆಲೆಗಳ ಭದ್ರತೆ ಹೆಚ್ಚಳಕ್ಕೆ ಮೂರೂ ಪಡೆಗಳಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡಲು ಮುಂದಾಗಿದೆ. ಇದರೊಂದಿಗೆ ಪಡೆಗಳಿಗೆ ನಿರ್ದಿಷ್ಟ ಸಮಯ ಮತ್ತು ಆದ್ಯತೆ ಮೇರೆಗೆ ಸೂಕ್ಷ್ಮ ಸೇನಾ ನೆಲೆಗಳ ಸಂಪೂರ್ಣ ಭದ್ರತೆ ಕೈಗೊಳ್ಳಲು ಕೇಂದ್ರ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಖಡಕ್ಕಾಗಿ ಸೂಚಿಸಿದ್ದಾರೆ.

ಇದಕ್ಕಾಗಿ ಭೂಸೇನೆ, ವಾಯು ಸೇನೆ, ನೌಕಾಸೇನೆಗ ಉಪಮುಖ್ಯಸ್ಥರಿಗೆ ತಲಾ 800 ಕೋಟಿ ರೂ.ವರೆಗೆ ಹಣಕಾಸು ವೆಚ್ಚಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. 3 ಸಾವಿರ ಸೂಕ್ಷ್ಮ ಸೇನಾ ನೆಲೆಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಮೂರು ಪಡೆಗಳಿಗೆ ಸೇರಿದ 600 ಅತಿ ಸೂಕ್ಷ್ಮ ನೆಲೆಗಳಿವೆ ಎನ್ನಲಾಗಿದೆ. ಇತ್ತೀಚೆಗೆ ಸಶಸ್ತ್ರಪಡೆಗಳು ಸರಕಾರದಿಂದ ನೆಲೆಗಳ ಭದ್ರತೆ ಹೆಚ್ಚಳಕ್ಕೆ 2 ಸಾವಿರ ಕೋಟಿ ರೂ. ಅನುದಾನ ಕೇಳಿದ್ದವು. 

ಚೀನ ಅಧ್ಯಕ್ಷರ ಜೊತೆ ದೋವಲ್‌ ಭೇಟಿ:

ಇತ್ತ ಬ್ರಿಕ್ಸ್‌ ದೇಶಗಳ ರಕ್ಷಣಾ ಸಲಹೆಗಾರರೊಂದಿಗೆ ಭಾರತೀಯ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್‌ ಅವರು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿದ್ದಾರೆ. ಆದರೆ ಭೇಟಿಯ ಅವಧಿಯಲ್ಲಿ ಸಿಕ್ಕಿಂ-ಡೋಕ್ಲಾಂ ವಿಚಾರವೇನಾದರೂ ಪ್ರಸ್ತಾವ ಆಗಿದೆಯೇ ಎಂಬುದರ ಬಗ್ಗೆ ಸರಕಾರದ ಮೂಲಗಳು ಏನನ್ನೂ ಹೇಳಿಲ್ಲ. ಬ್ರಿಕ್ಸ್‌ ದೇಶಗಳು ಪ್ರಮುಖ ಸಮಸ್ಯೆಗಳು ಮತ್ತು ದ್ವಿಪಕ್ಷೀಯ ಅಂಶಗಳ ಬಗ್ಗೆಯಷ್ಟೇ ಕ್ಸಿ ಜತೆಗಿನ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ ಎಂದು ಚೀನದ ಸುದ್ದಿಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ.

ನಿಫ್ಟಿ ಕೊಡಿ, ಡೋಕ್ಲಾ ತಗೊಳ್ಳಿ!: ಚೀನ-ಭಾರತ ಮಧ್ಯೆ ಡೋಕ್ಲಾ ಗಡಿ ತಕರಾರಿನ ನಡುವೆಯೇ, ‘ನಿಮ್ಮ ನಿಫ್ಟಿ ಕೊಡಿ, ಡೋಕ್ಲಾಂ ತಗೊಳ್ಳಿ’ ಎಂಬ ಮಾತುಗಳು ಕೇಳಿಬಂದಿವೆ. ಕಾರಣ ಭಾರತದ ನಿಫ್ಟಿ ಷೇರು ಸೂಚ್ಯಂತ ಸತತ ಏರಿಕೆ ದಾಖಲಿಸುತ್ತಿದ್ದು, ಚೀನ ಷೇರು ಮಾರುಕಟ್ಟೆ ಗಮನಾರ್ಹ ಏರಿಕೆಯೇ ಕಂಡಿಲ್ಲ. ಈ ಬಗ್ಗೆ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದನ್ನು ಚೀನದ ಪೀಪಲ್ಸ್‌ ಡೈಲಿ ಪತ್ರಿಕೆ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ನಿಫ್ಟಿ  10 ಸಾವಿರದ ಗಡಿ ದಾಟಿರುವುದಲ್ಲದೆ, ಶೇ.22ರಷ್ಟು ಏರಿಕೆ ಕಂಡಿದೆ. ಅದೇ ಅವಧಿಯಲ್ಲಿ ಚೀನದ ಶಾಂಘೈ ಮತ್ತು ಶೆನ್‌ಝೆನ್‌ ಮಾರುಕಟ್ಟೆ ಕೇವಲ ಶೇ.5ರಷ್ಟು ಏರಿಕೆ ಕಂಡಿದೆ ಎನ್ನಲಾಗಿದೆ.

ಆಕಾಶ್‌ ಕ್ಷಿಪಣಿ ವಿಫ‌ಲ
ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಹಿನ್ನಡೆ ಆಗುವಂಥ ಅಂಶವೊಂದು ಹೊರಬಿದ್ದಿದ್ದು, ಆಕಾಶ್‌ ಕ್ಷಿಪಣಿ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ವಿಫ‌ಲವಾಗಿದೆ. ಹೀಗೆಂದು ಮಹಾಲೇಖಪಾಲರ ವರದಿ ಉಲ್ಲೇಖೀಸಿದೆ. ಅದಕ್ಕಾಗಿ ಒಟ್ಟು 3,600 ಕೋಟಿ ರೂ. ವಿನಿಯೋಗಿಸಲಾಗಿದೆ. ಅದರ ತಯಾರಿಕೆಯಲ್ಲಿ ಉಂಟಾದ ಹಿನ್ನಡೆ ಯುದ್ಧ ಸಂದರ್ಭಗಳಲ್ಲಿ ಆತಂಕ ತಂದೊಡ್ಡಲಿದೆ ಎಂದು ಹೇಳಲಾಗಿದೆ. ಸರಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಅದನ್ನು ಉತ್ಪಾದಿಸಲಾಗುತ್ತಿದೆ. ಒಟ್ಟು ಆರು ಕೇಂದ್ರಗಳನ್ನು ನಿಗದಿ ಮಾಡಲಾಗಿದ್ದರೂ ಹಿಂದಿನ 7 ವರ್ಷಗಳಲ್ಲಿ ಒಂದರಲ್ಲಿಯೂ ಕ್ಷಿಪಣಿಯನ್ನು ಅಳವಡಿಸಲಾಗಿಲ್ಲ ಎಂದು ವರದಿಯಲ್ಲಿ ಆಕ್ಷೇಪಿಸಲಾಗಿದೆ. ವರದಿ ಬಗ್ಗೆ ಐಎಎಫ್ ಮೌನ ವಹಿಸಿದೆ.

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.