Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್
Team Udayavani, Oct 13, 2024, 10:20 PM IST
ಮುಂಬಯಿ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ನಾಲ್ಕನೇ ಆರೋಪಿ ಮೊಹಮ್ಮದ್ ಜೀಶನ್ ಅಖ್ತರ್ ಎಂಬಾತನನ್ನು ಗುರುತಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣದ ನಂಟು ಜಲಂಧರ್‌ನಲ್ಲಿ ಹೊರಹೊಮ್ಮಿದ್ದು, ಪಂಜಾಬ್‌ನ ನಾಕೋಡರ್‌ನ ಶಾಕರ್ ಗ್ರಾಮದ ಮೊಹಮ್ಮದ್ ಜೀಶನ್ ಅಖ್ತರ್ ಎಂದು ಗುರುತಿಸಲಾದ ನಾಲ್ಕನೇ ಆರೋಪಿ ಭಾಗಿಯಾಗಿದ್ದಾನೆ ಎಂದು ವರದಿಗಳು ಸೂಚಿಸಿವೆ. ಪೊಲೀಸರ ಪ್ರಕಾರ, ಅಖ್ತರ್‌ನನ್ನು 2022 ರಲ್ಲಿ ಜಲಂಧರ್ ಗ್ರಾಮಾಂತರ ಪೊಲೀಸರು ಸಂಘಟಿತ ಅಪರಾಧ, ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಬಂಧಿಸಿದ್ದರು. ಅಖ್ತರ್ ಹೊರಗಿನಿಂದ ಕೃತ್ಯ ನಡೆಸಿದ ಮೂವರು ಶೂಟರ್‌ಗಳಿಗೆ ನಿರ್ದೇಶನ ನೀಡುತ್ತಿದ್ದ ಎಂದು ಹೇಳಲಾಗಿದೆ.
ಹತ್ಯೆಯನ್ನು ಮೂವರು ಶೂಟರ್‌ಗಳು ನಡೆಸಿದ್ದು, ಆ ಪೈಕಿ ಒಬ್ಬನಾದ ಗುರ್ಮೆಲ್ ಸಿಂಗ್ ಹರಿಯಾಣದ ಕೈತಾಲ್ ಜಿಲ್ಲೆಯ ನಾರದ ಗ್ರಾಮದವನು . ಉಳಿದ ಇಬ್ಬರು ಶೂಟರ್‌ಗಳು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯವರು. ಗುರ್ಮೆಲ್ ಮತ್ತು ಇನ್ನೊಬ್ಬ ಶೂಟರ್ ಧರ್ಮರಾಜ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ಮೂರನೇ ಶೂಟರ್ ಶಿವಕುಮಾರ್ ತಲೆಮರೆಸಿಕೊಂಡಿದ್ದಾನೆ.
ಬಾಬಾ ಸಿದ್ದಿಕ್ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವದ ಸಲ್ಲಿಸಿ ಬಡಾ ಕಬ್ರಸ್ಥಾನ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
#WATCH | Mumbai: Baba Siddique’s mortal remains taken for burial after he was accorded with state honour
Visuals from Bada Qabrastan, Mumbai Lines pic.twitter.com/azWf8NY7XU
— ANI (@ANI) October 13, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.