ವಿಧಾನಸಭೆ ವಿಸರ್ಜನೆ: ಶುರುವಾದ ವಾಗ್ಯುದ್ಧ
Team Udayavani, Nov 23, 2018, 6:00 AM IST
ಜಮ್ಮು: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸರಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ ಕೆಲವೇ ಗಂಟೆಗಳಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜನೆ ಮಾಡಿದ ರಾಜ್ಯಪಾಲ ಸತ್ಯಪಾಲ ಮಲಿಕ್ ಕ್ರಮಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ತನ್ನ ಕ್ರಮವನ್ನು ರಾಜ್ಯಪಾಲರು ಸಮರ್ಥಿಸಿಕೊಂಡಿದ್ದಾರೆ.
ಕುದುರೆ ವ್ಯಾಪಾರವನ್ನು ತಪ್ಪಿಸಲು ನಾನು ಈ ಕ್ರಮ ಕೈಗೊಳ್ಳಬೇಕಾಯಿತು. ಅಲ್ಲದೆ, ತದ್ವಿರುದ್ಧ ಸಿದ್ಧಾಂತ ಹೊಂದಿರುವ ಪಕ್ಷಗಳಿಂದ ಸ್ಥಿರ ಸರಕಾರ ನಡೆಸಲು ಸಾಧ್ಯವಿಲ್ಲ. ಜತೆಗೆ, ಯಾವ ಪಕ್ಷವೂ ತಾನು ಸಂಪೂರ್ಣ ಬಹುಮತ ಹೊಂದಿದ್ದೇನೆ ಎಂದು ಹೇಳಲು ಆತ್ಮವಿಶ್ವಾಸ ಹೊಂದಿರ ಲಿಲ್ಲ. ಕಳೆದ ಕೆಲವು ತಿಂಗಳಿನಿಂದ ರಾಜ್ಯ ತಹಬಂದಿಗೆ ಬಂದಿದೆ. ಕಲ್ಲು ತೂರಾಟದ ಪ್ರಕರಣಗಳು ಕಡಿಮೆಯಾಗಿವೆ. ಸ್ಥಳೀಯ ಚುನಾವಣೆಗಳು ಯಶಸ್ವಿಯಾಗಿ ನಡೆದಿವೆ. ಗೊಂದಲ ಸೃಷ್ಟಿಸುವುದು ರಾಜ್ಯದ ಹಿತಾ ಸಕ್ತಿ ಯಿಂದ ಒಳ್ಳೆಯ ನಿರ್ಧಾರವಲ್ಲ. ಹೀಗಾಗಿ ಸರಿಯಾದ ಸಮಯದಲ್ಲೇ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಲಿಕ್ ಹೇಳಿದ್ದಾರೆ.
ಊಟ ಕೊಡಲೂ ಯಾರೂ ಇರಲಿಲ್ಲ: ಗುರುವಾರ ರಾಜಭವನದಲ್ಲಿ ಫ್ಯಾಕ್ಸ್ ಯಂತ್ರ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಸರಕಾರ ರಚನೆಗೆ ಅವಕಾಶ ಕೋರಿ ಪತ್ರ ಕಳುಹಿಸಲು ಸಾಧ್ಯವಾಗಲಿಲ್ಲ ಎಂಬ ಮೆಹ ಬೂಬಾ ಮುಫ್ತಿ ಆರೋಪಕ್ಕೆ ರಾಜ್ಯ ಪಾಲ ಮಲಿಕ್ ಪ್ರತಿಕ್ರಿಯಿಸಿ, ಈದ್ ಮಿಲಾದ್ ಹಿನ್ನೆಲೆಯಲ್ಲಿ ರಾಜಭವನ ಮುಚ್ಚಿತ್ತು. ನನಗೆ ಊಟ ಕೊಡಲೂ ಯಾರೂ ರಾಜಭವನದಲ್ಲಿ ಇರಲಿಲ್ಲ. ಒಂದು ವೇಳೆ ಫ್ಯಾಕ್ಸ್ ನನಗೆ ಸಿಕ್ಕಿದ್ದರೂ ನನ್ನ ನಿರ್ಧಾರ ಇದೇ ಆಗಿರುತ್ತಿತ್ತು ಎಂದು ಮಲಿಕ್ ಹೇಳಿದ್ದಾರೆ.
ಒಂದು ಫ್ಯಾಕ್ಸ್ ಮಶಿನ್ ಇಡೀ ಪ್ರಜಾ ಪ್ರಭುತ್ವವನ್ನು ಕೊಂದಿದೆ ಎಂದು ನ್ಯಾಷ ನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ. ರಾಜಭವನ ದಲ್ಲಿ ಸಿಬಂದಿ ಇರಲಿಲ್ಲ ಎಂದು ರಾಜ್ಯಪಾಲರು ಹೇಳುತ್ತಾರೆ. ಹಾಗಾದರೆ ಪತ್ರ ಕಳುಹಿಸಲು ಫ್ಯಾಕ್ಸ್ ಕೆಲಸ ಮಾಡುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.
ಒಮರ್, ರಾಮ್ ವಾಗ್ಧಾಳಿ: ಗಡಿಯಾಚೆಗಿಂದ ಬಂದ ನಿರ್ದೇಶನದ ಮೇರೆಗೆ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಸ್ಥಳೀಯ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಬಹುಶಃ ಈಗಲೂ ಮತ್ತೂಮ್ಮೆ ಗಡಿಯಾಚೆಗಿನಿಂದ ಸರಕಾರ ರಚನೆಗೆ ಸೂಚನೆ ಬಂದಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಆರೋಪಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಒಮರ್, “ನಿಮ್ಮ ಬಳಿ ರಾ, ಎನ್‌ಐಎ ಹಾಗೂ ಗುಪ್ತಚರ ದಳಗಳಿವೆ. ಧೈರ್ಯವಿದ್ದರೆ ನಿಮ್ಮ ಆರೋಪಕ್ಕೆ ಸಾಕ್ಷಿ ನೀಡಿ’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಮ್ ಮಾಧವ್, ತನ್ನ ಮಾತನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ವಿಧಾನಸಭೆ ವಿಸರ್ಜನೆ ನಿರ್ಧಾರವು ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಬಣ್ಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.