Jammu Kashmir; ಇಂಡಿಯಾ ಗೆದ್ದಾಯ್ತು, ಕಾಶ್ಮೀರದಲ್ಲಿ ಮುಂದೇನು?
ಪಾಕಿಸ್ತಾನ ಜತೆ ಮಾತುಕತೆ ಬೇಡಿಕೆಗೆ ಬಲ ಬರಬಹುದು | ಕಾಶ್ಮೀರಕ್ಕೆ ಹೆಚ್ಚಿನ ಅಧಿಕಾರ, ಅನುದಾನಕ್ಕೆ ಒತ್ತಾಯ?
Team Udayavani, Oct 9, 2024, 6:24 AM IST
ಹೊಸದಿಲ್ಲಿ: ಜಮ್ಮು- ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಎಲ್ಲ ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದು, 10 ವರ್ಷಗಳ ಬಳಿಕ ಸರ್ಕಾರ ರಚಿಸಲಿದೆ. ಇತ್ತ, ಸಾಕಷ್ಟು ಗೆಲುವಿನ ನಿರೀಕ್ಷೆಯನ್ನು ಹೊಂದಿದ್ದ ಬಿಜೆಪಿ, ಜಮ್ಮು ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆಯಾದರೂ ಸರ್ಕಾರ ರಚಿಸಲು ಬೇಕಾಗುವಷ್ಟು(46) ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಈಗ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಏರಿರುವುದರಿಂದ ಕಾಶ್ಮೀರದಲ್ಲಿ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆಯಾಗುತ್ತಿದೆ.
1 ರಾಜ್ಯ ಸ್ಥಾನಮಾನ ಬೇಡಿಕೆ: ಎನ್‌ಸಿ-ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ಬೇಡಿಕೆಗೆ ಹೆಚ್ಚು ಬಲಬರಲಿದೆ. ಕಾಂಗ್ರೆಸ್ ಮೈತ್ರಿ ಕೂಟ ಚುನಾವಣೆಯಲ್ಲಿ ಈ ಭರವಸೆಯನ್ನೂ ನೀಡಿತ್ತು.
2 ಪಾಕಿಸ್ತಾನ ಜತೆ ಮಾತುಕತೆ: ನ್ಯಾಷನಲ್ ಕಾನ್ಫರೆನ್ಸ್ ಮೊದಲಿ ನಿಂದಲೂ ಪಾಕಿಸ್ತಾನ ಜತೆ ಮಾತು ಕತೆ ನಡೆಸಬೇಕು ಎಂದು ಒತ್ತಾಯಿ ಸುತ್ತಿದೆ. ಈಗ ಈ ಬೇಡಿಕೆಗೆ ಇನ್ನಷ್ಟು ಬಲ ಬರಬಹುದು. ಕೇಂದ್ರದ ಮೇಲೆ ಒತ್ತಡ ಹೇರಬಹುದು.
3 ಪ್ರತ್ಯೇಕತಾವಾದಿಗಳು: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರತ್ಯೇಕತಾವಾದಿಗಳು ಚಿಗುರಿಕೊಳ್ಳಲಾರರು. ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ರುವು ದರಿಂದ ಗಂಭೀರ ಕಾನೂನು ಸುವ್ಯ ವಸ್ಥೆ ಮೇಲೆ ಕೇಂದ್ರ ಪ್ರಭಾವ ಸಹಜ.
4 ಪ್ರವಾಸೋದ್ಯಮಕ್ಕೆ ಬಲ: ಕಾಶ್ಮೀರದಲ್ಲಿ ಪ್ರವಾ ಸೋದ್ಯ ಮಕ್ಕೆ ಸಾಕಷ್ಟು ಅವಕಾಶಗಳಿವೆ. ಕೇಂದ್ರ ಸರ್ಕಾರವು ಸಾಕಷ್ಟು ಹೂಡಿಕೆ ಮಾಡುತ್ತಿರುವುದರಿಂದ ಈ ನಿಟ್ಟಿನಲ್ಲಿ ಇನ್ನಷ್ಟು ಚಟುವಟಿ ಕೆಗಳು ಹೆಚ್ಚಾಗಬಹುದು.
5 ಉಗ್ರ ನಿಗ್ರಹ: ಭಯೋತ್ಪಾದನೆ ನಿಗ್ರಹವೂ ಎಂದಿನಂತೆ ಮುಂದುವರಿಯಲಿದೆ. ಈ ವಿಷ ಯದಲ್ಲಿ ಯಾವುದೇ ಪಕ್ಷ ರಾಜಿ ಮಾಡಿಕೊಳ್ಳಲು ತಯಾರಿಲ್ಲ. ಈ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.