![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 2, 2023, 4:34 PM IST
ಶ್ರೀನಗರ: ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಭಯೋತ್ಪಾದಕರನ್ನು ವಿಶೇಷ ತನಿಖಾ ಸಂಸ್ಥೆ ಶನಿವಾರ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಬಂಧಿತ ಉಗ್ರರನ್ನು ಫಿರ್ದೌಸ್ ಅಹ್ಮದ್ ವಾನಿ ಮತ್ತು ಖುರ್ಷಿದ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಘಾಟ್ ಮತ್ತು ಭಾರತ್ ಗ್ರಾಮದವರು ಎನ್ನಲಾಗಿದೆ.
ಇವರಿಬ್ಬರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದರು. 1990 ರ ದಶಕದಲ್ಲಿ ತಮ್ಮ ತವರು ಜಿಲ್ಲೆಯಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಳೆದ ಹಲವು ದಶಕಗಳಿಂದ ಇವರು ಸ್ಥಳೀಯ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿನ ಬಂಧನಗಳೊಂದಿಗೆ ಆ. 31 ರಿಂದ ಜಮ್ಮು ಪ್ರದೇಶದಲ್ಲಿ ದಶಕಗಳಿಂದ ತಲೆಮರೆಸಿಕೊಂಡಿದ್ದ ಒಟ್ಟು 10 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರಲ್ಲಿ ಹೆಚ್ಚಿನವರು ದೋಡಾ ನಿವಾಸಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ವಿಶೇಷ ತನಿಖಾ ಸಂಸ್ಥೆ, ಜಮ್ಮು ಮತ್ತು ಕಾಶ್ಮೀರದಲ್ಲಿ “ಶೂನ್ಯ ಭಯೋತ್ಪಾದನೆಯನ್ನು ಸಾಧಿಸುವ ತನ್ನ ದೊಡ್ಡ ಉದ್ದೇಶ ಮತ್ತು ಆದೇಶದ ಅನುಸಾರವಾಗಿ, ಕಾನೂನಿನಡಿಯಲ್ಲಿ ವಿಚಾರಣೆಯನ್ನು ಎದುರಿಸಲು ಭಯೋತ್ಪಾದನೆ ಸಂಬಂಧಿತ ಎಲ್ಲಾ ಪರಾರಿ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಕಾಶ್ಮೀರದಲ್ಲಿ 417 ಮತ್ತು ಜಮ್ಮುವಿನಲ್ಲಿ 317 ಸೇರಿದಂತೆ ಒಟ್ಟು 734 ತಲೆಮರೆಸಿಕೊಂಡವರ ಪೈಕಿ 327 ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆ ಮತ್ತು ಭಯೋತ್ಪಾದನೆ ತಡೆ ಕಾಯ್ದೆಗಳಲ್ಲಿ ಬೇಕಾಗಿರುವವರು, ಎಸ್‌ಐಎ ಇದುವರೆಗೆ 369 ತಲೆಮರೆಸಿಕೊಂಡವರನ್ನು ಪರಿಶೀಲಿಸಿದೆ ಮತ್ತು ಗುರುತಿಸಿದೆ. ಈ ಪೈಕಿ ಜಮ್ಮುವಿನಲ್ಲಿ 215 ಮತ್ತು ಕಾಶ್ಮೀರದಲ್ಲಿ 154 ತಲೆಮರೆಸಿಕೊಂಡವರನ್ನು ಪರಿಶೀಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
369 ಪರಾರಿದಾರರಲ್ಲಿ 80 ಮಂದಿ ಸಾವನ್ನಪ್ಪಿದ್ದಾರೆ, 45 ಮಂದಿ ಪಾಕಿಸ್ತಾನ ಅಥವಾ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಇತರ ದೇಶಗಳಲ್ಲಿ ವಾಸಿಸುತ್ತಿದ್ದಾರೆ, 127 ಮಂದಿ ಪತ್ತೆಯಾಗಿಲ್ಲ ಮತ್ತು ನಾಲ್ವರು ಜೈಲಿನಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.