ಕಾಶ್ಮೀರದಲ್ಲಿ ಭಾರೀ ಹಿಮಪಾತ : ಜಮ್ಮು -ಶ್ರೀನಗರ ಹೆದ್ದಾರಿ ಬಂದ್
Team Udayavani, Jan 11, 2019, 5:43 AM IST
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗಿದ್ದು ಜನಜೀವನಕ್ಕೆ ತೀವ್ರ ಬಾಧಿತವಾಗಿದೆ. ಶುಕ್ರವಾರ ಶ್ರೀನಗರದಲ್ಲಿ – 1.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಪಹಲ್‌ಗಾಮ್‌ನಲ್ಲಿ – 3.0 ಮತ್ತು ಗುಲ್‌ಮಾರ್ಗ್‌ನಲ್ಲಿ ಕನಿಷ್ಠ – 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಹಿಮ ವಿಪರೀತ ಪ್ರಮಾಣದಲ್ಲಿ ಸುರಿಯುತ್ತಿರುವ ಕಾರಣ ಜಮ್ಮು ಮತ್ತು ಶ್ರೀಗರ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಜವಹಾರ್ ಸುರಂಗದಲ್ಲಿ ಸಂಚಾರ ಅಸಾಧ್ಯವಾಗಿದೆ ಎಂದು ವರದಿಯಾಗಿದೆ.
ಗುರುವಾರ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶ್ರೀನಗರದಿಂದ ಜಮ್ಮು ಕಡೆಗೆ ವಾಹನಗಳು ಸಂಚರಿಸಿದ್ದವು.
ಮುಂದಿನ 72 ಗಂಟೆಗಳ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದ್ರಾಸ್ ಪ್ರದೇಶದಲ್ಲಿ – 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜಮ್ಮು ನಗರದಲ್ಲಿ 8.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕತ್ರಾದಲ್ಲಿ 7.8, ಬಟೊಟೆಯಲ್ಲಿ 1.5, ಬನ್ನಿಹಾಲ್‌ನಲ್ಲಿ 2.1 ಮತ್ತು ಬದೆರ್‌ವಾಹದಲ್ಲಿ 0.4 ತಾಪಮಾನ ದಾಖಲಾಗಿದೆ.
ಜನವರಿ 31 ರ ವರೆಗೆ ಕಾಶ್ಮೀರದಲ್ಲಿ ಕಠಿಣ ದಿನಗಳು ಎದುರಾಗಿದ್ದು ಆ ಬಳಿಕ ಹಿಮಪಾತ ಕಡಿಮೆಯಾಗುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.