Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ರಾಣಾ ನಿಧನ
Team Udayavani, Nov 1, 2024, 10:59 AM IST
ಜಮ್ಮು: ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಅವರ ಸಹೋದರ, ಬಿಜೆಪಿಯ ಹಿರಿಯ ನಾಯಕ ಮತ್ತು ನಗ್ರೋಟಾ ಶಾಸಕ ದೇವೇಂದ್ರ ಸಿಂಗ್ ರಾಣಾ (Devendra Singh Rana) ಅವರು ಹರಿಯಾಣದ ಫರಿದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ಅ.31) ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.
ರಾಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇವೇಂದ್ರ ಸಿಂಗ್ ರಾಣಾ ಪತ್ನಿ ಗುಂಜನ್ ರಾಣಾ, ಅವರ ಪುತ್ರಿಯರಾದ ದೇವಯಾನಿ ಮತ್ತು ಕೇತ್ಕಿ ಮತ್ತು ಪುತ್ರ ಅಧಿರಾಜ್ ಸಿಂಗ್ ಅವರನ್ನು ಅಗಲಿದ್ದಾರೆ.
ರಾಣಾ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಜನರು ಜಮ್ಮುವಿನ ಗಾಂಧಿನಗರದ ಅವರ ಮನೆಯ ಮುಂದೆ ಸೇರಿದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕೂಡಾ ಧಾವಿಸಿದರು.
ಮೊದಲಿನಿಂದಲೂ ಬಹುಕೋಟಿ ವ್ಯವಹಾರವನ್ನು ಕಟ್ಟಿ ಬೆಳೆಸಿದ ರಾಣಾ, ವ್ಯಾಪಾರದಿಂದ ರಾಜಕೀಯದತ್ತ ಮುಖಮಾಡಿ ಜಮ್ಮುವಿನ ಡೋಗ್ರಾ ಸಮುದಾಯಕ್ಕೆ ಪ್ರಬಲ ಧ್ವನಿಯಾಗಿದ್ದರು.
ರಾಣಾ ಅವರು ಇತ್ತೀಚೆಗೆ ಜಮ್ಮು ಜಿಲ್ಲೆಯ ನಗ್ರೋಟಾ ವಿಭಾಗದಿಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮರು ಆಯ್ಕೆಯಾದರು, ಎರಡನೇ ಅವಧಿಗೆ ಶಾಸಕ ಸ್ಥಾನವನ್ನು ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
Raichur: ವಕ್ಫ್ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.