ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ
Team Udayavani, Jan 10, 2025, 1:25 AM IST
ಶಬರಿಮಲೆ: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ ಜ.14ರಂದು ರಾತ್ರಿ 8.55ಕ್ಕೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಜ.12ರಂದು ಸಂಜೆ 5ಕ್ಕೆ ತಂತ್ರಿವರ್ಯ ಕಂಠರಾರ್ ಬ್ರಹ್ಮದತ್ತನ್ ನೇತೃತ್ವದಲ್ಲಿ ಪ್ರಾಸಾದ ಶುದ್ಧಿ, 13ರಂದು ಬಿಂಬ ಶುದ್ಧಿ ಕ್ರಿಯೆ ನಡೆಯಲಿದೆ.
ಮಕರ ಸಂಕ್ರಮಣ ಸಮೀಪಿಸುತ್ತಿದ್ದಂತೆ ಸನ್ನಿಧಾನದಲ್ಲಿ ಭಕ್ತರ ದಟ್ಟಣೆ ವಿಪರೀತವಾಗಿ ಹೆಚ್ಚುತ್ತಿದೆ. ಪ್ರಸ್ತುತ ದಿನಂಪ್ರತಿ ಒಂದು ಲಕ್ಷದಷ್ಟು ಭಕ್ತರು ದೇವರ ದರ್ಶನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದ್ದು, ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಡು ದಾರಿ ಮೂಲಕ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಕರಿಮಲೆಯಲ್ಲಿ ಸರಕಾರಿ ಡಿಸ್ಪೆನ್ಸರಿ ಆರಂಭಿಸಲಾಗಿದೆ. ಸನ್ನಿಧಾನ ಹಾಗೂ ಪರಿಸರದಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಮಕರ ಜ್ಯೋತಿ ಉತ್ಸವ ಕಾಲದ ಪ್ರಮುಖ ಕಾರ್ಯಕ್ರಮವಾದ ಕಳ ಬರೆಯುವಿಕೆ ಜ.14ರಂದು ಆರಂಭಗೊಳ್ಳಲಿದೆ. ಜ.14ರಂದು ಬಾಲಕ ಮಣಿಕಂಠ, 15ರಂದು ವಿಲ್ಲಾಳಿವೀರ, 16ರಂದು ರಾಜಕುಮಾರ, 17ರಂದು ಹುಲಿ ಮೇಲೆ ಕುಳಿತ ಅಯ್ಯಪ್ಪ, 18ರಂದು ತಿರುವಾಭರಣ ಧರಿಸಿದ ಅಯ್ಯಪ್ಪ ರೂಪದಲ್ಲಿ ಕಳ ಬರೆಯಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.