ಜಯಲಲಿತಾ ಸಾವು: CCTV switch off ಬಗ್ಗೆ ಅಪೋಲೋ ಆಸ್ಪತ್ರೆ ಅಫಿದಾವಿತ್
Team Udayavani, Oct 6, 2018, 3:26 PM IST
ಚೆನ್ನೈ : ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಚಿಕಿತ್ಸೆಗಾಗಿ ಅವರ ಕೋಣೆಯಿಂದ ಹೊರಗೊಯ್ಯುವಾಗ ಮತ್ತು ಪುನಃ ಕೋಣೆಗೆ ಕರೆತರುವ ತನಕದ ಅವಧಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಏಕೆ ಸ್ವಿಚ್ ಆಫ್ ಮಾಡಿಡಲಾಯಿತು ಎಂಬುದಕ್ಕೆ ಕಾರಣ ನೀಡಿ ಇಲ್ಲಿನ ಅಪೋಲೋ ಆಸ್ಪತ್ರೆ ಆರ್ಮುಗಸ್ವಾಮಿ ತನಿಖಾ ಆಯೋಗಕ್ಕೆ ಐದು ಪುಟಗಳ ಅಫಿದಾವಿತ್ ಸಲ್ಲಿಸಿದೆ.
ಐಜಿ (ಗುಪ್ತಚರ) ಕೆ ಎನ್ ಸತ್ಯಮೂರ್ತಿ ಸಹಿತ ನಾಲ್ಕು ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಸ್ವಿಚ್ ಆಫ್ ಮಾಡಿಡುವಂತೆ ಆಸ್ಪತ್ರೆಯ ಆಡಳಿತೆಯನ್ನು ಕೇಳಿಕೊಂಡಿದ್ದರು. ಆ ಪ್ರಕಾರ ಸ್ವಿಚ್ ಆಫ್ ಮಾಡಿಡಲಾಯಿತು ಎಂದು ಅಪೋಲೋ ಆಸ್ಪತ್ರೆ ತನ್ನ ಅಫಿದಾವಿತ್‌ನಲ್ಲಿ ಹೇಳಿದೆ.
ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿ 2016ರ ಸೆ.22ರಿಂದ 75 ದಿನಗಳ ಕಾಲ ಚಿಕಿತ್ಸೆ ಪಡೆದು ಅದೇ ವರ್ಷ ಡಿ.5ರಂದು ನಿಧನ ಹೊಂದಿದ್ದರು.
ಜಯಲಲಿತಾ ಅವರನ್ನು ಅವರಿದ್ದ ಕೋಣೆಯಿಂದ ಚಿಕಿತ್ಸೆಗಾಗಿ ಹೊರಗೊಯ್ಯುವಾಗ ಮತ್ತು ಪುನಃ ಕೋಣೆಗೆ ತರುವ ವರೆಗಿನ ಅವಧಿಯಲ್ಲಿ ಸಿಸಿಟಿವಿ ಸ್ವಿಚ್ ಆಫ್ ಮಾಡಿಡಲಾಗಿದ್ದುದು ಎಲ್ಲ ಹುಬ್ಬೇರಿಸಿತ್ತು. ಈ ವಿಷಯದಲ್ಲಿ ಆಸ್ಪತ್ರೆಯ ವೈದ್ಯರನ್ನು ನಾನಾ ರೀತಿಯಲ್ಲಿ ಪ್ರಶ್ನಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.