ಜಯಾ ಪುತ್ರಿ: ದಾವೆ ತಿರಸ್ಕರಿಸಿದ ಸುಪ್ರೀಂ
Team Udayavani, Nov 28, 2017, 6:15 AM IST
ಹೊಸದಿಲ್ಲಿ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪುತ್ರಿ ಎಂದು ಹೇಳಿಕೊಂಡಿದ್ದ ಬೆಂಗಳೂರಿನ ಅಮೃತಾ ಅವರ ದೂರನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆಕೆಯೇ ತನ್ನ ತಾಯಿ ಎಂಬುದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಅಮೃತಾ ಮನವಿ ಮಾಡಿದ್ದರು. ಈ ದೂರಿನ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ತಿರಸ್ಕರಿಸಿದ್ದಾರೆ. ಜಯಲಲಿತಾ ಅಯ್ಯಂಗಾರ್ ಬ್ರಾಹ್ಮಣ ವಂಶಸ್ಥರಾಗಿದ್ದು, ಈ ಸಮುದಾಯದ ರೂಢಿಗೆ ಅನುಗುಣವಾಗಿಯೇ ಜಯಾ ಉತ್ತರ ಕ್ರಿಯೆಗಳನ್ನು ನಡೆಸಬೇಕೆಂದು ಅಮೃತಾ ಪರ ವಕೀಲ ಇಂದಿಯಾ ಜೈಸಿಂಗ್ ಕೋರ್ಟ್ಗೆ ಮನವಿ ಮಾಡಿದರು.
ಈಗಾಗಲೇ ಹಲವು ಬಾರಿ ಮಾಧ್ಯಮ ಗಳಲ್ಲಿ ಕಾಣಿಸಿಕೊಂಡಿದ್ದ ಅಮೃತಾ, ಜಯಲಲಿತಾ ಮರಣಾನಂತರ ತಾನೇ ಅವರ ಪುತ್ರಿ ಎಂದು ಹೇಳಿಕೊಂಡಿದ್ದರು. ಜಯ ಲಲಿತಾ ಅವರ ಸೋದರಿ ಎಂದು ಹೇಳಿ ಕೊಂಡಿದ್ದ ಶೈಲಜಾ ಜತೆ ತನ್ನನ್ನು ಬೆಳೆಸಲಾ ಯಿತು ಎಂದು ಅಮೃತಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.