JDU ವಕ್ತಾರ ಪ್ರಗತಿ ಮೆಹ್ತಾ ಪತ್ನಿ ಆತ್ಮಹತ್ಯೆ; ಡೆತ್ ನೋಟ್ ಇಲ್ಲ
Team Udayavani, May 23, 2018, 4:08 PM IST
ಪಟ್ನಾ : ಜೆಡಿಯು ವಕ್ತಾರ ಮತ್ತು ಮಾಧ್ಯಮ ಪ್ರಭಾರಿಯಾಗಿರುವ ಪ್ರಗತಿ ಮೆಹ್ತಾ ಅವರ ಪತ್ನಿ ಖುಷ್‌ಬೂ ಕುಮಾರಿ ಅವರು ನಿನ್ನೆ ಮಂಗಳವಾರ ರಾತ್ರಿ ಜಮೂಯಿ ಜಿಲ್ಲೆಯ ಗಿಧೋರ್ ಎಂಬಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಮನೆಯವರೆಲ್ಲರೂ ಊಟ ಮುಗಿಸಿ ಟೆರೇಸ್‌ನಲ್ಲಿ ಮಲಗಲು ಹೋದಾಗ ಖುಷ್‌ಬೂ ಅವರು ತಮ್ಮ ಮಗಳೊಂದಿಗೆ ಕೋಣೆಗೆ ಹೋದರು. ನಸುಕಿನ 4 ಗಂಟೆಯ ವೇಳೆಗೆ ಆಕೆಯ ದೇಹ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂತು. ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಬಂದು ತನಿಖೆ ನಡೆಸಿದರು.
ಖುಷ್‌ಬೂ ಅವರ ಆತ್ಮಹತ್ಯೆಯ ಕಾರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಆಕೆಯ ಮನೆಯವರ ಪ್ರಕಾರ ಎಲ್ಲವೂ ಸರಿಯೇ ಇದ್ದು ಆಕೆಯ ಈ ಅತಿರೇಕದ ಕ್ರಮಕ್ಕೆ ಯಾವುದೇ ಕಾರಣಗಳು ಕಂಡು ಬರುತ್ತಿಲ್ಲ ಎನ್ನಲಾಗಿದೆ.
ಖುಷ್‌ಬೂ ಅವರಿಗೆ ಆರು ವರ್ಷಗಳ ಹಿಂದೆ ಪ್ರಗತಿ ಮೆಹ್ತಾ ಜತೆಗೆ ಮದುವೆಯಾಗಿತ್ತು. ಮೆಹ್ತಾ ಅವರು ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿ ಅನಂತರ ಆರ್‌ಜೆಡಿಯಲ್ಲಿ ರಾಜಕೀಯ ಅಧ್ಯಾಯ ಆರಂಭಿಸಿದ್ದರು. ಬಳಿಕ ಅವರು ನಿತೀಶ್ ಕುಮಾರ್ ಪಾಳಯ ಸೇರಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
MUST WATCH
ಹೊಸ ಸೇರ್ಪಡೆ
Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ
R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ
Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು
BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್ ಸುರೇಶ್; ಬಿಗ್‌ಬಾಸ್ ಆಟದಲ್ಲಿ ರಾದ್ಧಾಂತ
Katpadi: ಅಂಚಿಗೆ ಬ್ಯಾರಿಕೇಡ್ ಇರಿಸಿ ರಿಬ್ಬನ್ ಅಳವಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.