ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು:ಮಿತ್ರ ಪಕ್ಷ ಜೆಡಿಯು ಆಕ್ಷೇಪ, ಬಿಎಸ್‌ಪಿ, ಬಿಜೆಡಿ ಸ್ವಾಗತ
Team Udayavani, Aug 5, 2019, 3:03 PM IST
ಕಾಶ್ಮೀರ: ಕಲಂ 370 ಹಾಗೂ 35ಎ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಎನ್‌ಡಿಎ ಮೈತ್ರಿಕೂಟದ ಪ್ರಬಲ ಪಕ್ಷ ಜೆಡಿಯು ಸಹಮತ ವ್ಯಕ್ತಪಡಿಸಿಲ್ಲ.
ಜೆಡಿಯುನ ರಾಜ್ಯಸಭಾ ಸದಸ್ಯ ಕೆ.ಸಿ. ತ್ಯಾಗಿ, “ಜಯಪ್ರಕಾಶ ನಾರಾಯಣ್, ರಾಮ್ ಮನೋಹರ್ ಲೋಹಿಯಾ ಹಾಗೂ ಜಾರ್ಜ್ ಫರ್ನಾಂಡಿಸ್ ಅವರಂತಹ ನಾಯಕರ ಆದರ್ಶವನ್ನು ಪಕ್ಷ ಪಾಲಿಸಿಕೊಂಡು ಬಂದಿದೆ. ಅದೇ ನಮ್ಮ ತಳಹದಿ ಎಂದಿದ್ದಾರೆ. ಪಕ್ಷದ ಪ್ರಮುಖರಿಂದ ಹಿಡಿದು ನಮ್ಮ ಕಾರ್ಯಕರ್ತರೂ ಇದೇ ಹಾದಿಯಲ್ಲಿ ನಡೆಯುತ್ತಾರೆ. ಈ ಕಾರಣಕ್ಕೆ ಕಲಂ 370 ರದ್ದತಿಗೆ ಜೆಡಿಯುನ ಬೆಂಬಲ ಇಲ್ಲ ಎಂದಿದ್ದಾರೆ. ಈ ಮೂಲಕ ಬಹಿರಂಗವಾಗಿ ಎನ್‌ಡಿಎ ಮಿತ್ರಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರಕಾರ ಆಡಳಿತದಲ್ಲಿದೆ. ಮಾತ್ರವಲ್ಲದೇ 2019 ಲೋಕಸಭೆ ಚುನಾವಣೆಯನ್ನೂ ಒಟ್ಟಾಗಿ ಎದುರಿಸಿತ್ತು.
ಕೇಂದ್ರದ ಈ ನಿರ್ಧಾರವನ್ನು ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ), ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ), ಶಿವಸೇನೆ, ಆಮ್ ಆದ್ಮಿ, ವೈಎಸ್ಸಾರ್ ಕಾಂಗ್ರೆಸ್ ಮೊದಲಾದ ಪಕ್ಷಗಳು ಮುಕ್ತ ಕಂಠದಿಂದ ಸ್ವಾಗತಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.