JEE Mains 2017: ಉದಯಪುರದ ಕಾಂಪೌಂಡರ್ ಮಗ ಟಾಪರ್, 360/360 ಅಂಕ
Team Udayavani, Apr 27, 2017, 4:15 PM IST
ಹೊಸದಿಲ್ಲಿ : 2017ರ JEE Mains ಪರೀಕ್ಷೆಯಲ್ಲಿ ರಾಜಸ್ಥಾನದ ಉದಯಪುರದ, ಕಾಂಪೌಂಡರ್ ಓರ್ವರ ಮಗನಾಗಿರುವ, ಕಲ್ಪಿತ್ ವೀರವಾಲ್ 360ರಲ್ಲಿ 360 ಅಂಕಗಳನ್ನು ಪಡೆದುಕೊಂಡು All India Rank No.1 ಪಡೆದ ಮಹೋನ್ನತ ಸಾಧನೆಯನ್ನು ದಾಖಲಿಸಿದ್ದಾರೆ. ಜೆಇಇ ಫಲಿತಾಂಶಗಳು ಇಂದು ಬಹಿರಂಗವಾಗಿವೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್‌ಇ) ಇದರ ಅಧ್ಯಕ್ಷರಾಗಿರುವ ಆರ್ ಕೆ ಚತುರ್ವೇದಿ ಅವರು ಉದಯಪುರದಿಂದ ನನಗೆ ಫೋನ್ ಮಾಡಿ ನಾನು ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ ವಿಭಾಗದಲ್ಲಿ ಟಾಪರ್ ಆಗಿರುವುದಾಗಿ ತಿಳಿಸಿದ್ದಾರೆ; ಪರೀಕ್ಷೆಯಲ್ಲಿ 360ರಲ್ಲಿ 360 ಅಂಕಗಳನ್ನು ನಾನು ಪಡೆದಿರುವುದಾಗಿ ತಿಳಿಸಿ ಅಭಿನಂದಿಸಿದ್ದಾರೆ ಎಂದು ವೀರವಾಲ್ ಅವರು ಮಾಧ್ಯಮಕ್ಕೆ ತಿಳಿಸಿದರು.
17ರ ಹರೆಯದ ವೀರವಾಲ್ ಅವರು ಎಂಡಿಎಸ್ ಪಬ್ಲಿಕ್ ಸ್ಕೂಲ್‌ನಿಂದ ಖಾಸಗಿಯಾಗಿ 12ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದು ಇದೀಗ ಅದರ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
“ಜೆಇಇ ಮೇನ್ಸ್‌ನಲ್ಲಿ ನಾನು ಟಾಪರ್ ಆಗಿರುವುದು ನನಗೆ ಅತ್ಯಂತ ಸಂತಸದ ವಿಷಯವಾಗಿದೆ. ಆದರೆ ನಾನಿದನ್ನು ಈಗ ಮಾಮೂಲಿಯಾಗಿ ಕಾಣುತ್ತಿದ್ದೇನೆ; ಕಾರಣ ನಾನೀಗ ಮುಂಧಿನ ತಿಂಗಳು ನಡೆಯಲಿರುವ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯ ಮೇಲೆ ದೃಷ್ಟಿ ನೆಟ್ಟಿದ್ದೇನೆ’ ಎಂದು ವೀರವಾಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.