ಭೀಕರ ರಸ್ತೆ ಅಪಘಾತ: ನಿಂತಿದ್ದ ಟ್ರಕ್ ಗೆ ಜೀಪು ಢಿಕ್ಕಿ ಹೊಡೆದು 7ಮಂದಿ ಸಾವು, 8 ಮಂದಿ ಗಂಭೀರ
Team Udayavani, Feb 16, 2023, 3:50 PM IST
ಗುಜರಾತ್ : ನಿಂತಿದ್ದ ಟ್ರಕ್ ಗೆ ಜೀಪೊಂದು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಗುಜರಾತ್ ನ ಪಠಾಣ್ ಜಿಲ್ಲೆಯಲ್ಲಿ ಸಂಭವಿಸಿದೆ.
ಜೀಪಿನಲ್ಲಿ ಒಟ್ಟು ಹದಿನೈದು ಮಂದಿ ಪ್ರಯಾಣಿಸುತ್ತಿದ್ದ ವೇಳೆ ಜೀಪಿನ ಟಯರ್ ಸ್ಪೋಟಗೊಂಡು ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಏಳು ಮಂದಿ ಸಾವನ್ನಪ್ಪಿದರೆ, ಎಂಟು ಮಂದಿ ಗಂಭೀರ ಗಾಯಗೊಂಡು ರಾಧಾನ್ ಪುರ ಹಾಗೂ ಪಠಾಣ್ ನಗರದ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಪಿನಾಲ್ ವಂಜಾರಾ (7), ಕಾಜಲ್ ಪರ್ಮಾರ್ (9), ಅಮಿತಾ ಖೇಮ್ರಾಜಭಾಯ್ ವಂಜಾರಾ (15), ಸೀಮಾಬೆನ್ ಮಿಥುನ್‌ಭಾಯ್ ವಂಜಾರಾ (24), ರಾಧಾಬೆನ್ ಮೋಹನ್‌ಭಾಯ್ ಪರ್ಮಾರ್ (35), ಸಂಜುಭಾಯ್ ಫುಲ್ವಾಡಿ (50), ಮತ್ತು ದುಘಾಭಾಯಿ ರಾಥೋಡ್ (50) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿಯಂತೆ ಜೀಪಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿ.ಟಿ ರವಿಗೆ ಶಾಕ್; ಬಿಜೆಪಿಗೆ ಗುಡ್ ಬೈ ಹೇಳಿದ ಲಿಂಗಾಯತ ಮುಖಂಡ ತಮ್ಮಯ್ಯ
Gujarat | Seven people were killed in a road accident near Varahi in Patan district today. The incident occurred when their jeep rammed into a truck.
Case registered, investigation underway. pic.twitter.com/RS57MN4YZC
— ANI (@ANI) February 16, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.