Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
ಝಾನ್ಸಿ ಆಸ್ಪತ್ರೆ ದುರಂತದಲ್ಲಿ ಹೀರೋ ಆದವನ ಕಥೆ
Team Udayavani, Nov 17, 2024, 11:59 PM IST
ಝಾನ್ಸಿ: ಇಲ್ಲಿನ ಮಹಾರಾಣಿ ಲಕ್ಷ್ಮೀ ಬಾಯಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಒಳನುಗ್ಗಿದ 20 ವರ್ಷದ ಯುವಕ ಹಲವು ಮಕ್ಕಳನ್ನು ರಕ್ಷಿಸಿ ಹೀರೋ ಎನಿಸಿಕೊಂಡ. ಆದರೆ ತನ್ನ ಅವಳಿ ಮಕ್ಕಳನ್ನು ರಕ್ಷಿಸಿಕೊಳ್ಳಲು ವಿಫಲನಾಗಿದ್ದಾನೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಯಾಕುಬ್ ಎಂಬ ವ್ಯಕ್ತಿ ಕಿಟಕಿಯ ಗಾಜನ್ನು ಒಡೆದು ಒಳನುಗ್ಗಿ ಕಣ್ಣಿಗೆ ಕಾಣಿಸಿದ ಮಕ್ಕಳನ್ನು ಎತ್ತಿಕೊಂಡು ಐಸಿಯುನಿಂದ ಹೊರತಂದಿದ್ದಾನೆ. ಆದರೆ ತನ್ನ ಮಕ್ಕಳನ್ನು ಹುಡುಕಿ ಕರೆತರಲು ವಿಫಲನಾದ ಕಾರಣ 8 ದಿನಗಳ ಹಿಂದಷ್ಟೇ ಹುಟ್ಟಿದ್ದ ಆತನ ಅವಳಿ ಮಕ್ಕಳು ಬೆಂಕಿಗಾಹುತಿಯಾಗಿವೆ.
ಆಗಷ್ಟೇ ಹುಟ್ಟಿದ್ದ ಮಗುಭಸ್ಮ: ದುರಂತ ನಡೆಯವ ಕೆಲ ಗಂಟೆಗಳ ಮೊದಲಷ್ಟೇ ಸಂಜನಾ ಕುಮಾರಿ ಎಂಬುವವರಿಗೆ ಹೆರಿಗೆಯಾ ಗಿತ್ತು. ಮಗು ಅವಧಿಗೆ ಮುನ್ನ ಹುಟ್ಟಿದ್ದ ಕಾರಣ, ಅದನ್ನು ಐಸಿಯುಗೆ ವರ್ಗಾ ಯಿ ಸ ಲಾಗಿತ್ತು. ದುರಂತದಲ್ಲಿ ಮಗು ಸಂಪೂರ್ಣ ಸುಟ್ಟುಹೋಗಿದೆ ಎಂದು ಸಂಜನಾ ಅಳಲು ತೋಡಿ ಕೊಂಡಿದ್ದಾರೆ.
ಸಾವಿನ ಸಂಖ್ಯೆ 11ಕ್ಕೇರಿಕೆ: ದುರಂತ ದಲ್ಲಿ ರಕ್ಷಿಸಲಾದ ಮಗುವೊಂದು ಭಾನು ವಾರ ಮೃತಪಟ್ಟಿದೆ. ಹೀಗಾಗಿ ಮೃತ ಮಕ್ಕಳ ಸಂಖ್ಯೆ 11ಕ್ಕೇರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.