50 ರೂ. ಕಡಿಮೆಯಾಗಿದ್ದಕ್ಕೆ ಸ್ಕ್ಯಾನ್ ಮಾಡಲು ನಕಾರ, ಮಗು ಸಾವು!
Team Udayavani, Aug 21, 2017, 3:42 PM IST
ರಾಂಚಿ: ಕೆಳಗೆ ಬಿದ್ದು ತಲೆಗೆ ಪೆಟ್ಟು ಬಿದ್ದಿದ್ದ ಒಂದು ವರ್ಷದ ಮಗುವಿಗೆ ಸಿಟಿ ಸ್ಕ್ಯಾನ್ ಮಾಡಲು 50 ರೂಪಾಯಿ ಶುಲ್ಕ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ನಿರಾಕರಿಸಿದ್ದರಿಂದ ಮಗು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ರಾಂಚಿಯ ರಾಜೇಂದ್ರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಆರ್ ಐಎಂಎಸ್) ಆಸ್ಪತ್ರೆಗೆ ಭಾನುವಾರ ತಂದೆ ಒಂದು ವರ್ಷದ ಮಗುವನ್ನು ಕರೆತಂದಿದ್ದರು. ತಲೆಗೆ ಏಟು ಬಿದ್ದಿದ್ದರಿಂದ ಸಿಟಿ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು.
ಸಿಟಿ ಸ್ಕ್ಯಾನ್ ಶುಲ್ಕ 1,350 ರೂಪಾಯಿ, ಆದರೆ ಮಗುವಿನ ತಂದೆ ಸಂತೋಷ್ ಕುಮಾರ್ ಬಳಿ 1,300 ರೂಪಾಯಿ ಮಾತ್ರ ಇದ್ದಿತ್ತು. ಆದರೆ 50 ರೂಪಾಯಿ ಕಡಿಮೆಯಾಗಿದ್ದಕ್ಕೆ ಸ್ಕ್ಯಾನ್ ಮಾಡಲು ನಿರಾಕರಿಸಿದ್ದರು. ಏತನ್ಮಧ್ಯೆ ತಂದೆ ಮೊದಲು ಸ್ಕ್ಯಾನ್ ಮಾಡಿ ಉಳಿದ ಹಣ ಕೊಡುವುದಾಗಿ ಮನವಿ ಮಾಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
50 ರೂಪಾಯಿ ಹಣಕ್ಕಾಗಿ ಸಂತೋಷ್ ಕುಮಾರ್ ತನ್ನ ಗೆಳೆಯನಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದ, ಗೆಳೆಯ 50 ರೂಪಾಯಿ ಹಣದೊಂದಿಗೆ ಆಸ್ಪತ್ರೆಗೆ ಬಂದಾಗ ಮಗು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.