Jharkhand; ಸೊರೇನ್ ರಾಜೀನಾಮೆ ಶೀಘ್ರ, ಪತ್ನಿ ಕಲ್ಪನಾ ಮುಂದಿನ ಸಿಎಂ: ದುಬೆ
Team Udayavani, Jan 2, 2024, 12:06 AM IST
ರಾಂಚಿ: ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಅವರ ಪತ್ನಿ ಕಲ್ಪನಾ ಸೊರೇನ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಭವಿಷ್ಯ ನುಡಿದಿದ್ದಾರೆ.
ಝಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಶಾಸಕ ಸಫ್ìರಾಜ್ ಅಹ್ಮದ್ ಅವರು ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ ಬೆನ್ನಲ್ಲೇ ದುಬೆ ಅವರಿಂದ ಈ ಹೇಳಿಕೆ ಬಂದಿದೆ. ಪಕ್ಷದ ಸಂಘಟ ನೆಯಲ್ಲಿ ತೊಡಗಿಕೊಳ್ಳಲು ಈ ನಿರ್ಧಾರ ತಾಳಿರು ವುದಾಗಿ ಅಹ್ಮದ್ ಹೇಳಿದ್ದರು. ಭೂ ಹಗರಣಕ್ಕೆ ಸಂಬಂ ಧಿಸಿದಂತೆ ಇ.ಡಿ. ಹೇಮಂತ್ ಸೊರೇನ್ ಅವರಿಗೆ 7 ಬಾರಿ ಸಮನ್ಸ್ ಜಾರಿಗೊಳಿಸಿದೆ. ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. “ಗಂಡೆ ಕ್ಷೇತ್ರದ ಶಾಸಕ ಸರ್ಫ್ರಾಜ್ ಅಹ್ಮದ್ ಅವರ ರಾಜೀನಾಮೆಯನ್ನು ಕೂಡಲೇ ಸ್ವೀಕರಿಸಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ಹೇಮಂತ್ ಸೊರೇನ್ ರಾಜೀನಾಮೆ ನೀಡಲಿದ್ದು, ಪತ್ನಿ ಕಲ್ಪನಾಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ’ ಎಂದಿದ್ದಾರೆ ದುಬೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್ ವಿಜಯ್ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.