ಜಾರ್ಖಂಡ್‌ನ ಹಝಾರಿಬಾಗ್ ರೈಲು ನಿಲ್ದಾಣದಲ್ಲಿ ಅವಳಿ ಸ್ಫೋಟ
Team Udayavani, May 22, 2017, 11:26 AM IST
ಗಿರಿಧ್, ಜಾರ್ಖಂಡ್ : ಜಾರ್ಖಂಡ್‌ನ ಹಝಾರಿಬಾಗ್ ರೈಲ್ವೇ ನಿಲ್ದಾಣದಲ್ಲಿ ನಿನ್ನೆ ಭಾನುವಾರ ತಡರಾತ್ರಿ ಎರಡು ಸ್ಫೋಟಗಳು ಸಂಭವಿಸಿದ್ದು ಜನರಲ್ಲಿ ತೀವ್ರವಾದ ಭೀತಿ, ಗೊಂದಲ, ಅಭದ್ರತೆಯನ್ನು ಸೃಷ್ಟಿಸಿದೆ.
ದಿಲ್ಲಿಯಿಂದ ಕೋಲ್ಕತಾಗೆ ಗಯಾ ಮತ್ತು ಧನಬಾದ್ ಮೂಲಕ ಸಾಗುವ ರೈಲು ಮಾರ್ಗ ಇರುವ ರೈಲು ನಿಲ್ದಾಣದಲ್ಲಿ ಈ ಸ್ಫೋಟ ಸಂಭವಿಸಿದೆ.
ಭಾನುವಾರ ತಡ ರಾತ್ರಿ ಹಝಾರಿಬಾಗ್ ರೈಲು ನಿಲ್ದಾಣದಿಂದ ಎರಡು ಪ್ರಬಲ ಸ್ಫೋಟಗಳ ಭೀಕರ ಸದ್ದು ಕೇಳಿ ಬಂದಾಗ ಆಸುಪಾಸಿನ ಪ್ರದೇಶಗಳ ಜನರು ಭಯಭೀತರಾದರು.
ಸ್ಫೋಟದ ಪರಿಣಾಮವಾಗಿ ಹುಡುಗನೊಬ್ಬನ ಬಲಗೈ ತುಂಡಾಗಿದ್ದು ಆತನಿಗೆ ಧನಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಅವಳಿ ಸ್ಫೋಟಗಳಿಗೆ ಬಳಸಲಾದ ನ್ಪೋಟಕಗಳು ಯಾವುವು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ರೈಲು ನಿಲ್ದಾಣದಲ್ಲಿ ಅನಾಥವಾಗಿ ಒಂದೆಡೆ ಬಿದ್ದುಕೊಂಡಿದ್ದ ಚೀಲದಲ್ಲಿದ್ದ ಸ್ಫೋಟಕಗಳು ಸ್ಫೋಟಗೊಂಡಿರುವುದಾಗಿ ಶಂಕಿಸಲಾಗಿದೆ.
ಪೊಲೀಸರು ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.