ಇಂದೋರ್ : 7 ಮಂದಿ ಸಾವನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಘಟನೆಯ ಹಿಂದಿದೆ ಲವ್ ಸ್ಟೋರಿ
Team Udayavani, May 8, 2022, 4:48 PM IST
ಭೋಪಾಲ್ : ಇಂದೋರ್ ಜಿಲ್ಲೆಯ ಸ್ವರ್ಣ್ ಬಾಗ್ ಕಾಲೋನಿಯಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ 7 ಮಂದಿ ಸಾವನ್ನಪ್ಪಿರುವ ಘಟನೆಗೆ ಹೊಸ ತಿರುವು ಸಿಕ್ಕಿತ್ತು ಈ ಘಟನೆ ಯಾವುದೇ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿಲ್ಲ ಬದಲಾಗಿ ಇದೊಂದು ಕೊಲೆ ಕೃತ್ಯ ಎಂಬುದು ಸಾಬೀತಾಗಿದೆ.
ಅಂದಹಾಗೆ ಶನಿವಾರ ಮುಂಜಾನೆ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಹೊಗೆ ಕಾಣಿಸಿಕೊಂಡಿದನ್ನು ಜನ ನೋಡಿದ್ದಾರೆ ಅಷ್ಟೋತ್ತಿಗಾಗಲೇ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿಗಳು ಬಂದು ಬೆಂಕಿ ನಂದಿಸುವಷ್ಟರಲ್ಲಿ ಏಳು ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದರು ಮತ್ತೆ ಒಂಬತ್ತು ಮಂದಿ ಗಂಭೀರ ಗಾಯಗೊಂಡು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಷ್ಟೆಲ್ಲಾ ಘಟನೆಗೆ ಕಟ್ಟಡದಲ್ಲಿ ಆದ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಅಲ್ಲಿದ್ದ ಜನರು ನಂಬಿದ್ದರು ಆದರೆ ಘಟನೆ ಕುರಿತು ಕೇಸು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಕಟ್ಟಡದ ಬಳಿ ಇರುವ ಸಿಸಿಟಿವಿ ಚಿತ್ರಣವನ್ನು ನೋಡಿದ್ದಾರೆ ಈ ವೇಳೆ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಲ್ಲ ಬದಲಾಗಿ ಇದರಹಿಂದೆ ಒಬ್ಬ ಯುವಕನ ಕೃತ್ಯ ಬೆಳಕಿಗೆ ಬಂದಿದೆ, ಯುವಕನ ಜಾಡು ಹಿಡಿದ ಪೊಲೀಸರು ಆತ ಇರುವ ಪ್ರದೇಶವನ್ನು ಪತ್ತೆ ಹಚ್ಚಿ ಯುವಕನನ್ನು ವಶಕ್ಕೆ ಪಡೆದು ಕೃತ್ಯದ ಕುರಿತು ಬಾಯಿ ಬಿಡಿಸಿದಾಗ ಯುವಕ ಪ್ರೀತಿಯ ವಿಚಾರ ಹೇಳಿದ್ದಾನೆ.
ಏನಿದು ಲವ್ ಸ್ಟೋರಿ :
ಇಂದೋರ್ ಜಿಲ್ಲೆಯ ಸ್ವರ್ಣ್ ಬಾಗ್ ಕಾಲೋನಿಯಲ್ಲಿರುವ ಎರಡು ಅಂತಸ್ತಿನ ಕಟ್ಟದಲ್ಲಿರುವ ಯುವತಿಯನ್ನು ಶುಭಂ ದೀಕ್ಷಿತ್ ಎಂಬ ಯುವಕ ಪ್ರೀತಿಸುತ್ತಿದ್ದ ಎನ್ನಲಾಗಿದೆ ಆದರೆ ಆ ಯುವತಿಗೆ ಮನೆಯವರು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು ಎನ್ನಲಾಗಿದೆ ಈ ವಿಚಾರ ತಿಳಿದ ಯುವಕ ಸಿಟ್ಟಿನಲ್ಲಿ ತಾನು ಪ್ರೀತಿಸಿದ ಯುವತಿಯ ಸ್ಕೂಟರಿಗೆ ಬೆಂಕಿ ಹಚ್ಚಿದ್ದಾನೆ ಈ ಬೆಂಕಿ ಪಕ್ಕದಲ್ಲಿದ್ದ ಕಟ್ಟಡಕ್ಕೂ ವ್ಯಾಪಿಸಿ ಏಳು ಮಂದಿಯ ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿತು.
ಇದನ್ನೂ ಓದಿ : ನೆಲದ ಮೇಲೆ ಮಲಗಿದ ಮಹಿಳೆಯರು: ಸರ್ಕಾರಿ ಆಸ್ಪತ್ರೆ ವಿರುದ್ಧ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.